5:30 PM Saturday1 - August 2026
ಬ್ರೇಕಿಂಗ್ ನ್ಯೂಸ್
ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ ಕಾವೇರಿ ನೀರು ಹಂಚಿಕೆ ವಿವಾದ | ಕಾನೂನು ತಜ್ಞರು, ಪ್ರತಿಪಕ್ಷಗಳ ಸಲಹೆ ಬಳಿಕ… ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157… ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ… Bangalore | ಅಗ್ನಿ ದುರಂತ: ಚಂದಾಪುರದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು ಭಾರತದ ಇತಿಹಾಸದಲ್ಲೇ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆದಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ…

ಇತ್ತೀಚಿನ ಸುದ್ದಿ

ನಂಜನಗೂಡು: ನಾಳೆ ಹಿಂದೂ- ಮುಸ್ಲಿಂ ಭಾವೈಕ್ಯತೆಯ ಹುಲ್ಲಹಳ್ಳಿಯಲ್ಲಿ ಹಜ್ರತ್ ಸೈದಾನಿ ಬೀ ಮಾ ದರ್ಗಾ ಉರೂಸ್

09/02/2024, 19:30

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ಬೆಳಲೆ ಗೇಟ್ ಬಳಿ ಇರುವ ಹಿಂದೂ ಮತ್ತು ಮುಸ್ಲಿಂ ಸಾಮರಸ್ಯ ಹಾಗೂ ಭಾವೈಕ್ಯತೆಯನ್ನು ಸಾರುವ ಹಜ್ರತ್ ಸೈದಾನಿ ಬೀ ಮಾ ದರ್ಗಾ ಶರೀಫ್ ಊರೂಸ್ ಹಾಗೂ ಗಂಧದ ಮಹೋತ್ಸವವನ್ನು ಫೆಬ್ರವರಿ 10ರಂದು ಸಂಜೆ ಸಡಗರ ಮತ್ತು ಸಂಭ್ರಮದಿಂದ ಸಾವಿರಾರು ಭಕ್ತರ ಸಮೂಹದಲ್ಲಿ ನಡೆಯಲಿದೆ ಎಂದು ದರ್ಗದ ಗುರುಗಳಾದ ಶಮ್ಸುದ್ದೀನ್ ಜೂರಿ ಖಾಜೂರು ತಿಳಿಸಿದ್ದಾರೆ.


ಮಾಧ್ಯಮದೊಂದಿಗೆ ಮಾತನಾಡಿದ ಅವರು ಫೆಬ್ರವರಿ 10 ಶನಿವಾರ ಸಂಜೆ 6 ಗಂಟೆಗೆ ಹುಲ್ಲಹಳ್ಳಿ ಜಾಮಿಯ ಮಸೀದಿ ಯಿಂದ ಹೂಗಳಿಂದ ಅಲಂಕರಿಸಲಾದ ಪಲ್ಲಕ್ಕಿ ವಾಹನದಲ್ಲಿ ಸಂದಲ್ ಮೆರವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದ ಗಂಧವನ್ನು ಮದ್ದೂರು ತಾಲೂಕಿನ ವಿಠಲಪುರದ ಹಜರತ್ ಶಾ ಮಹಮ್ಮದ್ ಉಸ್ಮಾನ್ ಖಾದ್ರಿ ತಂಡ ದ ವತಿಯಿಂದ ಗಂಧವನ್ನು ದರ್ಗಾ ಕೆ ಸಮರ್ಪಿಸಲಾಗುತ್ತದೆ ಎಂದು ತಿಳಿಸಿದರು
ಇದೇ ಸಂದರ್ಭ ದರ್ಗಾದಲ್ಲಿ ವಿವಿಧ ಧರ್ಮ ಗುರುಗಳ ಧಾರ್ಮಿಕ ಸಭೆ, ಸೇರಿದಂತೆ ಗುಂಡ್ಲುಪೇಟೆ ವಿದ್ಯಾರ್ಥಿಗಳಿಂದ ಧಫ್, ಕೇರಳ ತಂಡದವರಿಂದ ಸುಪ್ರಸಿದ್ಧ ಬುರ್ದಾ ಮಜ್ಲಿಸ್ ಹಾಗೂ ಪ್ರಸಿದ್ಧ ಕವ್ವಾಲಿ ತಂಡದವರಿಂದ ಬೆಳಗಿನ ಜಾವದವರಿಗೂ ಕವಾಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಇದಕ್ಕಾಗಿ ಹುಲ್ಲಹಳ್ಳಿ ಪೊಲೀಸರು ಹಾಗೂ ಧರ್ಮ ಗುರುಗಳು ಸೇರಿದಂತೆ ಗ್ರಾಮದ ಮುಖಂಡರು ದರ್ಗಾದ ಬಳಿ ತೆರಳಿ ಉರುಸ್ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ನಾಳೆ ನಡೆಯುವ ಉರುಸ್ ಕಾರ್ಯಕ್ರಮಕ್ಕೆ ಸರ್ವಧರ್ಮೀಯರು ಭಾಗವಹಿಸಿ ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿಕೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು