ಇತ್ತೀಚಿನ ಸುದ್ದಿ
Mangaluru | ಕೋರ್ಡೆಲ್ ಚರ್ಚ್ ವಾರ್ಷಿಕೋತ್ಸವ ಸಂಪನ್ನ: ಶಿಲುಬೆ ಮಹತ್ವ ಕುರಿತು ಪ್ರವಚನ
13/09/2026, 18:09
ಮಂಗಳೂರು(reporterkarnataka.com): ಮಂಗಳೂರಿನ ಕುಲಶೇಖರದ ಹೋಲಿ ಕ್ರಾಸ್ ಚರ್ಚ್ ನ ವಾರ್ಷಿಕೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಹಬ್ಬದ ಸಾಂಭ್ರಮಿಕ ಬಲಿ ಪೂಜೆಯ ನೇತೃತ್ವವನ್ನು ಮಂಗಳೂರು ಸಿಟಿ ವಲಯದ ವಿಗಾರ್ ವಾರ್ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ವಹಿಸಿ ಪ್ರವಚನ ನೀಡಿದರು. ಅವರು ತಮ್ಮ ಪ್ರವಚನದಲ್ಲಿ ಶಿಲುಬೆಯ ಮಹತ್ವವನ್ನು ವಿವರಿಸಿದರು. ಶಿಲುಬೆಯು ಸಹನೆ, ಕ್ಷಮೆ, ದಯೆ, ಹಾಗೂ ಪರರಿಗಾಗಿ ತನ್ನ ಪ್ರಾಣವನ್ನು ತೆತ್ತು ರಕ್ಷಣೆ ನೀಡಿದುದರ ಸಂಕೇತ. ಯೇಸು ಕ್ರಿಸ್ತರ ಕಾಲದಲ್ಲಿ ದೇವ ನಿಂದನೆ ಮಾಡಿದವರಿಗೆ, ಸಮಾಜದಲ್ಲಿ ಅತ್ಯಂತ ಕ್ರೂರ ಕೃತ್ಯ ಎಸಗಿದವರಿಗೆ ಶಿಲುಬೆಗೇರಿಸುವ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಲೌಕಿಕ ದೃಷ್ಟಿಯಲ್ಲಿ ಶಿಲುಬೆಯ ಮರಣವು ಅವಮಾನಕರ ಎಂಬ ನಂಬಿಕೆ ಇತ್ತು. ಆದರೆ ಯಾವುದೇ ತಪ್ಪು ಮಾಡದ ಯೇಸು ಕ್ರಿಸ್ತರು ಜನರನ್ನು ಪಾಪಗಳಿಂದ ವಿಮೋಚನೆ ಮಾಡಲು ಶಿಲುಬೆಯ ಮರಣವನ್ನು ಸ್ವೀಕರಿಸಿ ಶಿಲುಬೆಗೆ ಪಾವಿತ್ರ್ಯದ ಸ್ಥಾನ ಮಾನವನ್ನು ನೀಡಿದರು. ಹಾಗಾಗಿ ಕ್ರೈಸ್ತರಿಗೆ ಶಿಲುಬೆ ಎನ್ನುವುದು ಶಿಖರ ಪ್ರಾಯವಾಗಿದ್ದು, ತಮ್ಮ ಭರವಸೆಯ ಕಿರಣವಾಗಿ ಸ್ವೀಕರಿಸಿದ್ದಾರೆ ಎಂದು ಹೇಳಿದರು.
ಬಲಿಪೂಜೆಯಲ್ಲಿ ಕೋರ್ಡೆಲ್ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಕ್ಲಿಫರ್ಡ್ ಫೆರ್ನಾಂಡಿಸ್, ವಂದನೀಯ ಫಾ. Denzil ಲೋಬೊ, ವಂದನೀಯ ಫಾ. ಲಾಯ್ಡ್ ಡಿ ಸೋಜಾ, ವಂದನೀಯ ಫಾ. ಜೊವಿನ್ ಸಿಕ್ವೇರಾ, ವಂದನೀಯ ಫಾ. ರಾಜೇಶ್ ರೊಸಾರಿಯೊ, ವಂದನೀಯ ಫಾ. ಲಿಯೋ ಲಸ್ರಾದೊ , ವಂದನೀಯ ಫಾ. ರೋನ್ಸನ್ ಪಿಂಟೊ, ವಂದನೀಯ ಫಾ. ವಿಲ್ಸನ್ ತಾವ್ರೋ, ವಂದನೀಯ ಫಾ. ನೋಯೆಲ್, ವಂದನೀಯ ಫಾ. ಮೆಲ್ವಿನ್ ಡಿ ಕುನ್ಹಾ ಅವರು ಸಹ ಭಾಗಿತ್ವ ವಹಿಸಿದ್ದರು.
ಚರ್ಚ್ ನ ಉಪಾಧ್ಯಕ್ಷರಾದ ರೂತ್ ಲೋಬೊ, ಕಾರ್ಯದರ್ಶಿ ಅನಿಲ್ ಡೇಸಾ, ಆಯೋಗಗಳ ಸಂಚಾಲಕರಾದ ವಿಲ್ಫ್ರೆಡ್ , ಮ್ಯಾಕ್ಸಿಮ್ ಡಿ ಸೋಜಾ, ಮಂಗಳೂರು ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೊಯ್ ಕ್ಯಾಸ್ತಲಿನೋ ಅವರು ಉಪಸ್ಥಿತರಿದ್ದರು.












