1:11 PM Sunday18 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ: ಮಾಜಿ ಸಚಿವ ಕಿಮ್ಮನೆ ರತ್ನಾಕರ್

01/09/2026, 19:07

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಶ್ರೀರಾಮಜನ್ಮಭೂಮಿಯಲ್ಲಿ ಆದ ಕಳ್ಳತನ ಬಗ್ಗೆ ಕೋದಂಡ ರಾಮನ ದೇವಸ್ಥಾನದಲ್ಲಿ ಹೇಳಿದಾಗ ಶಾಸಕ ಆರಗ ಜ್ಞಾನೇಂದ್ರ ಅವರು ದೇವಸ್ಥಾನಗಳಲ್ಲಿ ವಿದ್ಯುತ್ ದೀಪ ಹಾಕಿದ ಸಂದರ್ಭದಲ್ಲಿ ಹುಂಡಿ ಕಳ್ಳರು ಎಂಬ ಅಪವಾದ ಮಾಡಿದ್ದರು ಆದರೆ ಅಯೋಧ್ಯೆಯಲ್ಲಿ ಆಗಿದ್ದು ಹುಂಡಿ ಕಳ್ಳತನ, ಇಲ್ಲಿ ಟೆಂಡರ್ ಪ್ರಕಾರ ಕೆಲಸ ಆಗಿದೆ ಅಷ್ಟೇ. ಆ ಸಂದರ್ಭದಲ್ಲಿ ಬಿಂತ್ಲಾ ಗ್ರಾಮದಿಂದ ಪಾದಯಾತ್ರೆ ಮಾಡುವುದಾಗಿ ಹೇಳಿದ್ದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು..l
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಡೆಮನೆ ರಸ್ತೆ ವಿಚಾರವಾಗಿ ಹಾಗೂ ಅಲ್ಲಿನ ಸೇತುವೆ ಹಾಳಾದ ಬಗ್ಗೆ ವಿಷಯ ತಿಳಿದು ಕಡೆಮನೆ ಊರಿಗೆ ಭೇಟಿ ನೀಡಿದ್ದೆ. ರಸ್ತೆ ಕಡೆಮನೆ ಯವರೆಗೆ ಇದ್ದರು ಬಿಂತ್ಲಾ ಗ್ರಾಮದವರೆಗೆ ಮಾತ್ರ ರಸ್ತೆ ಮಾಡಿಸಿಕೊಂಡಿದ್ದಾರೆ. ಅವರ ಮಗನ ಹಾಗೂ ಎಸಿಸಿ ಕೃಷ್ಣಮೂರ್ತಿ ಜಮೀನು ಇರುವುದರಿಂದ ಅಲ್ಲಿಯವರೆಗೆ ಮಾತ್ರ ರಸ್ತೆ ಆಗಿದೆ. ಈ ವಿಚಾರವಾಗಿ ಕೋದಂಡರಾಮ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ವಿಷಯ ಹೇಳಿದ್ದೆ. ಆಗ ಕಿಮ್ಮನೆಯವರು ಪೂಜೆ ಮಾಡಿಸಿದ್ದು ಪ್ರಾಯಶ್ಚಿತಕ್ಕೆ ಎಂದು ಹೇಳಿತ್ತು, ಅದು ನನಗೆ ಬೇಸರ ಆಗಿತ್ತು. ನಾನು ಇಷ್ಟು ವರ್ಷ ರಾಜಕಾರಣ ಮಾಡಿದರೂ ಯಾವುದೇ ಜಮೀನು, ಸೈಟು ಖರೀದಿ ಮಾಡಿಲ್ಲ.
ಈ ವಿಚಾರ ತಿಳಿಯಲಿ ಎಂದರು.
ಸೆ. 7 ಬಿಂತ್ಲಾ ಗ್ರಾಮದಿಂದ ಪಾದಯಾತ್ರೆ ಮಾಡುವುದಾಗಿ ನಾನು ಹೇಳಿದ್ದೆ. ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಇನ್ನು ನವೆಂಬರ್ 16ರಿಂದ ತೀರ್ಥಹಳ್ಳಿಯಿಂದ ಶಿವಮೊಗ್ಗ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪಾದಯಾತ್ರೆ ಮಾಡುತ್ತೇನೆ. ಅಲ್ಲಿ ಮಧು ಬಂಗಾರಪ್ಪ ಸೇರಿ ಹಲವರು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.. ಈಗಾಗಲೇ ಹೊಸನಗರದಲ್ಲಿ ಈ ವಿಚಾರವಾಗಿ ಆರ್ ಎಂ ಮಂಜುನಾಥ್ ಗೌಡ ಪಕ್ಷಾತೀತವಾಗಿ ಪಾದಯಾತ್ರೆ ನಡೆಸಿದ್ದಾರೆ. ಅದರ ಬಗ್ಗೆ ನನಗೆ ಗೌರವ ಇದೆ. ಆದರೆ ತೀರ್ಥಹಳ್ಳಿ ಯಿಂದ ನಡೆಯುವ ಪಾದಯಾತ್ರೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಬರುವಂತಿಲ್ಲ ಎಂದರು.
ಕಸ್ತೂರಿ ರಂಗನ್ ವರದಿ ಸರಿಮಾಡಬೇಕಾದ ಕರ್ತವ್ಯ ಕೇಂದ್ರ ಸರ್ಕಾರದ್ದು, ಬಿಜೆಪಿ ಸಂಸದರು, ಬಿಜೆಪಿ ಶಾಸಕರು ಮಾತನಾಡಬೇಕು. ಆದರೆ ಜನರ ಕಣ್ಣಿನಲ್ಲಿ ಒಳ್ಳೆಯವರಾಗಲು
ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆಗೆ ಸಹಕಾರ ನೀಡುತ್ತಿದೆ..
ಹಾಗಾಗಿ ನಮ್ಮ ಆ ಪಾದಯಾತ್ರೆಯಲ್ಲಿ ಅವರು ಭಾಗಿಯಾಗುವಂತಿಲ್ಲ. ಕಸ್ತೂರಿ ರಂಗನ್ ವರದಿಯಲ್ಲಿ ಕಿಮ್ಮನೆ ಹಾಗೂ ಬಿಂತ್ಲಾ ಎರಡು ಗ್ರಾಮ ಇದೆ. ಶಾಸಕ ಆರಗ ಜ್ಞಾನೇಂದ್ರ ಇಲ್ಲಿ ರಾಮನ ಪಾತ್ರ ಮಾಡುವುದು ಅಲ್ಲಿ ಹೋಗಿ ರಾವಣನ ಪಾತ್ರ ಮಾಡುವುದು, ಬಿ ವೈ ರಾಘವೇಂದ್ರ ಹಾಗೂ ಚೆನ್ನಬಸಪ್ಪ ಎಲ್ಲರಿಗೂ ಹೇಳುವುದು ಒಂದೇ ನಾಟಕ ಮಾಡುವುದು ಬೇಡ ಈ ವಿಚಾರವಾಗಿ ಕೇಂದ್ರ ಸರ್ಕಾರ ಬಳಿ ಮಾತನಾಡಬೇಕು.. ನಾನು ಈಗ ಕಸ್ತೂರಿ ರಂಗನ್ ವರದಿಯ ಪ್ರತಿಯನ್ನು ಸುಡುತ್ತೇನೆ ಎಂದು ಹೇಳಿ ಆ ಪ್ರತಿಯನ್ನು ಕಿಮ್ಮನೆ ರತ್ನಾಕರ್ ಸುಟ್ಟು ಹಾಕಿದರು.
ಕಸ್ತೂರಿ ರಂಗನ್ ವರದಿ ಜಾರಿ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕು. ಹಾಗೆಯೇ ಯಾವುದೇ ಜನಸಾಮಾನ್ಯರಿಗೆ ತೊಂದರೆ ಆಗಬಾರದು.. ಅದರಲ್ಲಿ ಹಲವು ಕಂಡೀಷನ್ ಇದೆ. ಅದನ್ನು ನೋಡಿಕೊಂಡು ಕಸ್ತೂರಿ ರಂಗನ್ ವರದಿ ಜಾರಿ ಮಾಡಬೇಕು. ಆದರೆ ಇಲ್ಲಿ ಎಲ್ಲರಿಗೂ ತೊಂದರೆ ಆಗುತ್ತಿದೆ ಜನಸಾಮಾನ್ಯರ ಜಮೀನು, ಮನೆ ಎಲ್ಲದು ಕಳೆದುಕೊಳ್ಳುವ ಪರಿಸ್ಥಿತಿ ಇದ್ದು ಹಾಗಾಗಿ ಈ ಬಗ್ಗೆ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕೆಸ್ತೂರು ಮಂಜುನಾಥ್, ಗೀತಾ ರಮೇಶ್, ಅಮರನಾಥ್ ಶೆಟ್ಟಿ, ಗೀತಾ ರಾಘವೇಂದ್ರ, ಅಶ್ವಲ್ ಗೌಡ, ಆದರ್ಶ ಹುಂಚದಕಟ್ಟೆ, ಮೂಡಬಾ ರಾಘವೇಂದ್ರ,ಕಂಡಿಲ್ ರಾಘವೇಂದ್ರ ಶೆಟ್ಟಿ, ವಾದಿರಾಜ್ ಭಟ್, ವಿಲಿಯಮ್ ಮಾರ್ಟೀಸ್, ವಾಸುದೇವ್ ಕಾಮತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು