ಇತ್ತೀಚಿನ ಸುದ್ದಿ
ಪಶ್ಚಿಮ ಬಂಗಾಳಕ್ಕೆ ಇನ್ನು ಮುಂದೆ ಹೊಸ ಹೆಸರು!: ಮರು ನಾಮಕರಣಕ್ಕೆ ಅದೊಂದೇ ಕಾರಣ!
24/11/2026, 19:38
ಕೋಲ್ಕತಾ (reporterkarnataka.com):ಪಶ್ಚಿಮ ಬಂಗಾಳದ ಹೆಸರು ಬದಲಾವಣೆ :ಹಲವು ವರ್ಷಗಳಿಂದ ಪಶ್ಚಿಮ ಬಂಗಾಳವು ದಿನನಿತ್ಯ ಬಳಕೆಯಲ್ಲಿ ಎರಡು ಹೆಸರುಗಳನ್ನು ಹೊಂದಿದೆ. ಬಂಗಾಳಿಯಲ್ಲಿ ‘ಪಶ್ಚಿಮ ಬಂಗಾ’ ಮತ್ತು ಇಂಗ್ಲಿಷ್ನಲ್ಲಿ ವೆಸ್ಟ್ ಬಂಗಾಳ್ ಮತ್ತು ಇತರೇ ಭಾಷೆಗಳಲ್ಲಿ ಪಶ್ಚಿಮ ಬಂಗಾಳ್ ಅಂತ ಕರೆಯಲಾಗುತ್ತದೆ. ಈಗ ರಾಜ್ಯ ಸರ್ಕಾರವು ಈ ವ್ಯತ್ಯಾಸವನ್ನು ಕಣ್ಮರೆಯಾಗಬೇಕೆಂದು ಬಯಸುತ್ತಿದೆ. ‘ಪಶ್ಚಿಮ ಬಂಗಾ’ ಅನ್ನು ಇಂಗ್ಲಿಷ್ನಲ್ಲಿಯೂ ಬಳಸುವ ಪ್ರಸ್ತಾಪವನ್ನು ಸಚಿವ ಸಂಪುಟ ಅನುಮೋದಿಸಿದೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಿಸಿದರು.
*ಡಿಸೆಂಬರ್ 9ರಂದು ವಿಧಾನಸಭೆಯಲ್ಲಿ ನಿರ್ಧಾರ”
ಡಿಸೆಂಬರ್ 9 ಅನ್ನು ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸುವ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಡಿಸೆಂಬರ್ 9 ರಂದು ವಿಧಾನಸಭೆಯಲ್ಲಿ ಈ ವಿಷಯದ ಕುರಿತು ನಿರ್ಣಯವನ್ನು ಮಂಡಿಸಲಾಗುವುದು ಎಂದು ಸಿಎಂ ಸುವೆಂದು ಅಧಿಕಾರಿ ಹೇಳಿದ್ದಾರೆ. ನಿರ್ಣಯವನ್ನು ಅಂಗೀಕರಿಸಿದ ನಂತರ, ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಮತ್ತು ನಂತರ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಇಂದು ಸಚಿವ ಸಂಪುಟವು ಇದನ್ನು ಅನುಮೋದಿಸಿದೆ ಎಂದು ಸುವೆಂದು ಅಧಿಕಾರಿ ತಿಳಿಸಿದ್ದಾರೆ.












