ಇತ್ತೀಚಿನ ಸುದ್ದಿ
ಕಾವೇರಿ ನದಿ ನೀರು ಹಂಚಿಕೆ | ಕರ್ನಾಟಕಕ್ಕೆ ಬಿಗ್ ರಿಲೀಫ್: ತಮಿಳನಾಡು 2 ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್
20/11/2026, 17:20
ಬೆಂಗಳೂರು(reporterkarnataka.com): ಕಾವೇರಿ ನದಿ ನೀರು ಹಂಚಿಕೆ ವಿವಾದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಇಂದು ಸುಪ್ರೀಂ ಕೋರ್ಟ್ ನದಿ ನೀರು ಹಂಚಿಕೆ ಕುರಿತು ತಮಿಳುನಾಡು ಆಗ್ರಹವನ್ನು ತಿರಸ್ಕರಿಸಿದೆ.
ತಮಿಳುನಾಡು ಸರ್ಕಾರ ಸಲ್ಲಿಸಿದ ಎರಡು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.ಮೂಲಕ ತಮಿಳುನಾಡು ಸರ್ಕಾರಕ್ಕೆ ಅತೀ ದೊಡ್ಡ ಹಿನ್ನಡೆಯಾಗಿದೆ. ನ್ಯಾ.ವಿಕ್ರಮನಾಥ್ ನೇತೃತ್ವದ ಪೀಠ ಮಹತ್ವದ ತೀರ್ಪು ಪ್ರಕಟಿಸಿದೆ. ಸುಪ್ರೀಂ ಕೋರ್ಟ್ ತೀರ್ಪು ಪ್ರಕಾರ ಕರ್ನಾಟಕ ಸರ್ಕಾರ ಕಾವೇರು ನೀರು ಹರಿಸಿಲ್ಲ ಎಂದು ತಮಿಳುನಾಡು ವಾದ ಮಂಡಿಸಿತ್ತು. ಇತ್ತ ಕರ್ನಾಟಕ ಮಳೆ ಕೊರತೆಯಿಂದ ನದಿ ಬತ್ತಿ ಹೋಗುತ್ತಿದೆ. ಈ ಸಂಕಷ್ಟ ಸಮಯದಲ್ಲೂ CWMA ಆದೇಶ ಪಾಲಿಸಲಾಗಿದೆ ಎಂದು ಕರ್ನಾಟಕ ವಾದ ಮಂಡಿಸಿತ್ತು. ವಾದ ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್, ತಮಿಳುನಾಡು ಎರಡೂ ಅರ್ಜಿಯನ್ನು ತಿರಸ್ಕರಿಸಿದೆ.
*ತಮಿಳುನಾಡು ಸರ್ಕಾರದ ತಕರಾರು ಅರ್ಜಿ ತಿರಸ್ಕಾರ*
CWMA ಆದೇಶವನ್ನು ಪ್ರತಿ ಬಾರಿ ಪಾಲಿಸಿದ ಕರ್ನಾಟಕ ಈ ಬಾರಿ ಸುಪ್ರೀಂ ಕೋರ್ಟ್ನಲ್ಲಿ ಗೆಲುವು ಸಿಕ್ಕಿದೆ. ಕರ್ನಾಟಕ ಅದೇಶದಂತೆ ನೀರು ಹರಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ನಲ್ಲಿ ಎರಡು ಅರ್ಜಿ ಸಲ್ಲಿಸಿತ್ತು. ಇತ್ತ ಕಾವೇರಿ ನದಿ ನೀರಿನ ಸಂಕಷ್ಟ, ಕುಡಿಯಲು ನೀರಿನ ಅಭಾವ ಕುರಿತು ಕರ್ನಾಟಕ ತನ್ನ ವಾದವನ್ನು ಸುಪ್ರೀಂ ಕೋರ್ಟ್ನಲ್ಲಿ ಮಂಡಿಸಿತ್ತು. ಇದೇ ವೇಳೆ ತಾವು ಪ್ರತಿ ಬಾರಿ CWMA ನೀರುವ ಆದೇಶವನ್ನು ಪಾಲಿಸಿದೆ. ಸಂಕಷ್ಟದ ಸಮಯದಲ್ಲಿ ಕುಡಿಯಲು ನೀರಿಲ್ಲ, ಹೀಗಾಗಿ ಬೆಳಗಳಿಗೆ ನೀರು ಹರಿಸಲು ಸಮಸ್ಯೆಯಾಗುತ್ತಿದೆ ಎಂದು ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿತ್ತು. ಹೀಗಾಗಿ ತಮಿಳುನಾಡು ಸಲ್ಲಿಸಿದ್ದ ಎರಡು ತಕರಾರು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಸಿಜೆಐ ಪೀಠದ ಮುದೆ ತಮಿಳುನಾಡು ಪರ ವಕೀಲ ಬಿ ಕರುಣಾಕರ್ ತುರ್ತು ವಿಚಾರಣೆಗೆ ಮನವಿ ಮಾಡಿತ್ತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಪ್ರತಿದಿನ 3,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಆದೇಶಿಸಿದ್ದರೂ ಇನ್ನೂ ನೀರು ಬಿಡುಗಡೆ ಮಾಡಿಲ್ಲ ಎಂದು ತಕರಾರು ಅರ್ಜಿ ಸಲ್ಲಿಸಿತ್ತು. ನಾಲ್ಕು ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ಸಂಪೂರ್ಣವಾಗಿ ನಾಶ ವಾಗುತ್ತಿದೆ ಕರ್ನಾಟಕ ನೀರು ಬಿಡುಗಡೆ ಮಾಡುತ್ತಿಲ್ಲ. ನಾವು ಎಲ್ಲಿಗೆ ಹೋಗಬೇಕು? ಎಂದು ವಕೀಲರು ವಾದ ಮಂಡಿಸಿದ್ದರು.
*ಕುಡಿಯಲು ನೀರಿಲ್ಲ*
ಕರ್ನಾಟಕ ಈ ಬಾರಿ ತೀವ್ರ ಬರ ಪರಿಸ್ಥಿತಿ ಎದುರಿಸಿದೆ. ಕಾವೇರಿ ನದಿಯಲ್ಲಿ ನೀರಿಲ್ಲ. ಜಲಾಶಯದಲ್ಲಿ ನೀರಿನ ಮಟ್ಟ ತಳಮಟ್ಟ ತಲುಪಿದೆ. ಕರ್ನಾಟಕದಲ್ಲಿ ಕುಡಿಯಲು ನೀರಿಗೆ ಹಾಹಾಕಾರ ಇದೆ. ಇದರ ನಡುವೆ CWMA ಆದೇಶವನ್ನು ಪಾಲಿಸುತ್ತಾ ಬಂದಿದ್ದೇವೆ. ಇದೀಗ ತಮಿಳುನಾಡು ರೈತರಿಗೆ ನೀರು ಬಿಡಲು ಸಾಕಷ್ಟು ನೀರಿಲ್ಲ ಎಂದು ಕರ್ನಾಟಕ ವಾದ ಮಂಡಿಸಿತ್ತು. ಬರ, ಕಡಿಮೆಯಾದ ಒಳಹರಿವು ಮತ್ತು ಕುಡಿಯುವ ನೀರಿನ ಅವಶ್ಯಕತೆಗಳನ್ನು ಉಲ್ಲೇಖಿಸಿ ಕರ್ನಾಟಕ ತಮಿಳುನಾಡು ಬೇಡಿಕೆಯನ್ನು ವಿರೋಧಿಸಿತ್ತು. ಮೂರನೇ ಅರ್ಜಿ ಸಲ್ಲಿಸಿದ ತಮಿಳುನಾಡು
ಎರಡು ಅರ್ಜಿಗಳು ತಿರಸ್ಕೃತಗೊಂಡ ಬೆನ್ನಲ್ಲೇ ಇದೀಗ ತಮಿಳುನಾಡು ಮೂರನೇ ಅರ್ಜಿ ಸಲ್ಲಿಕೆ ಮಾಡಿದೆ. ಇದೇ ವೇಳೆ ಮೂರನೇ ಅರ್ಜಿ ವಿಚಾರಣೆಗೆ ಒಂದು ವಾರ ಸಮಯವಕಾಶವನ್ನು ಕೇಳಿದೆ. ತಮಿಳನಾಡು ಮೂರನೇ ಅರ್ಜಿಯನ್ನು ಮುಂದಿನ ವಾರ ವಿಚಾರಣೆಗೆ ದಿನಾಂಕ ನಿಗಧಿಪಡಿಸಲಾಗಿದೆ.
ನೀವು ಇಂದು ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದೀರಾ? ತಮಿಳುನಾಡು ಸರಕಾರದಲ್ಲಿ ಸಾಕಷ್ಟು ಹಣವಿದೆ. ಮೇಲಿಂದ ಮೇಲೆ ಅರ್ಜಿ ಸಲ್ಲಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಪೀಠ ಹಾಸ್ಯವಾಗಿ ಹೇಳಿದೆ. ಅರ್ಜಿ 2843 ಹಾಗೂ 46291 ವಜಾಗೊಳಿಸಲಾಗಿದೆ. ಇಂದು ಸಲ್ಲಿಕೆಯಾದ ಮೂರನೇ ಅರ್ಜಿ ಮುಂದಿನ ವಾರ ವಿಚಾರಣೆಗೆ ಬರಲಿದೆ ಎಂದಿದೆ.












