ಇತ್ತೀಚಿನ ಸುದ್ದಿ
ಸಿರಸಿ | ಪಶ್ಚಿಮ ಘಟ್ಟಗಳ ಸಸ್ಯಸಂಪತ್ತಿನ ಅನ್ವೇಷಣೆಗೆ ‘ವನಾಮೃತಂ–2026’ ತರಬೇತಿ ಶಿಬಿರ
20/11/2026, 13:02
ಸಿರಸಿ(reporterkarnataka.com): ಪಶ್ಚಿಮ ಘಟ್ಟಗಳ ಔಷಧೀಯ ಸಸ್ಯಗಳು, ಸ್ಥಳೀಯ ಸಸ್ಯವೈವಿಧ್ಯ ಹಾಗೂ ಸಾಂಪ್ರದಾಯಿಕ ಸಸ್ಯಜ್ಞಾನ ಪರಿಚಯಿಸುವ ಮೂರು ದಿನಗಳ ‘ವನಾಮೃತಂ–2026’ ತರಬೇತಿ ಶಿಬಿರವನ್ನು ನವೆಂಬರ್ 26ರಿಂದ 28ರವರೆಗೆ ಸಿರಸಿಯಲ್ಲಿ ಆಯೋಜಿಸಲಾಗಿದೆ.
Dravyaguna Sarathi ವತಿಯಿಂದ, ಬೆಂಗಳೂರಿನ TDU ಹಾಗೂ NCISM ಸಹಯೋಗದಲ್ಲಿ ನಡೆಯುವ ಶಿಬಿರದಲ್ಲಿ ಸಸ್ಯಗಳ ಗುರುತಿಸುವಿಕೆ, ಔಷಧೀಯ ಗುಣಗಳು, ಛಾಯಾಗ್ರಹಣ, GPS ದಾಖಲಾತಿ, ಡಿಜಿಟಲ್ ಹರ್ಬೇರಿಯಂ ಹಾಗೂ ಅರಣ್ಯ ಕ್ಷೇತ್ರ ಅಧ್ಯಯನದ ಪ್ರಾಯೋಗಿಕ ತರಬೇತಿ ನೀಡಲಾಗುವುದು.
ಪ್ರಕೃತಿ ಪ್ರೇಮಿಗಳು, ವಿದ್ಯಾರ್ಥಿಗಳು, ಸಂಶೋಧಕರು, ವೈದ್ಯರು, ಪರಿಸರ ಕಾರ್ಯಕರ್ತರು ಹಾಗೂ ಆಸಕ್ತ ಸಾರ್ವಜನಿಕರು ಭಾಗವಹಿಸಬಹುದು.

ದಿನಾಂಕ: 26–28 ನವೆಂಬರ್ 2026
ಸ್ಥಳ: ಸಿರಸಿ, ಉತ್ತರ ಕನ್ನಡ ಜಿಲ್ಲೆ.
ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಮೊಬೈಲ್/WhatsApp: 9380463153
ಮೊಬೈಲ್/WhatsApp: 7892792456
ಇಮೇಲ್: dayasuttakoti@gmail.com
ಇಮೇಲ್: jagadeeshgudth@gmail.com
ಪಶ್ಚಿಮ ಘಟ್ಟಗಳ ಸಸ್ಯಜ್ಞಾನವನ್ನು ಅರಿಯೋಣ, ದಾಖಲಿಸೋಣ, ಸಂರಕ್ಷಿಸೋಣ.
ಬನ್ನಿ, ವನಾಮೃತಂ–2026ರ ಭಾಗವಾಗಿ ಪ್ರಕೃತಿಯ ಜ್ಞಾನವನ್ನು ಅನ್ವೇಷಿಸೋಣ!












