4:38 PM Tuesday17 - November 2026
ಬ್ರೇಕಿಂಗ್ ನ್ಯೂಸ್
ಸಿನಿಮಾ ನಟರನ್ನು ನೋಡಿ ಸಿಗರೇಟ್ ಸೇದಬೇಡಿ, ಐಸಿಯು ಸೇರುವ ಪರಿಸ್ಥಿತಿ ಬರಬಹುದು: ಆರೋಗ್ಯ… ಉತ್ತರಾಖಂಡ | ಸುಮಾರು 100 ಮೀಟರ್‌ ಆಳದ ಕಂದಕಕ್ಕೆ ಉರುಳಿದ ಬಸ್: 8… ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯ ಹೈಕಮಾಂಡ್ ತೀರ್ಮಾನಿಸಲಿದೆ: ಸಿಎಂ ಡಿ. ಕೆ. ಶಿವಕುಮಾರ್ ತಿಪಟೂರು | ಕೆಎಸ್​ಆರ್​ಟಿಸಿ ಬಸ್ ರೂಪದಲ್ಲಿ ಬಂದ ಮೃತ್ಯು: ಭೀಕರ ಅಪಘಾತದಲ್ಲಿ ಯುವಕರಿಬ್ಬರು… ಮಂಡ್ಯ | ನಂದಿನಿ ಮೊಸರಿನ ಪ್ಯಾಕೆಟ್‌ನಲ್ಲಿ ಜಿಯೋ ಸಿಮ್ ಸಿಕ್ಕಿದೆ ಎಂದು ಸುಳ್ಳು… ತುಮಕೂರು | ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ವೇದಿಕೆ ಮೇಲೆಯೇ ಭಾವುಕರಾದ ಡಾ. ಪರಮೇಶ್ವರ್ ಪಂಡಿತ್ ಜವಾಹರಲಾಲ್ ನೆಹರು 137ನೇ ಜನ್ಮದಿನ: ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್… ಮೆಟ್ರೋ ಅನುದಾನ ತಾರತಮ್ಯ ಆರೋಪಕ್ಕೆ ಪ್ರಧಾನಿ ನಯವಾದ ತಿರುಗೇಟು: ಈಗ ಸೆಂಚುರಿ ಬಾರಿಸಿದೆ… ಚಿಕ್ಕಮಗಳೂರು | ತರೀಕೆರೆ‌ ಬಳಿ ಮಣ್ಣಿನಗುಡ್ಡೆಗೆ ಬೈಕ್ ಡಿಕ್ಕಿ: ಪುತ್ರಿ ಸಾವು; ತಂದೆ… ಎಚ್​.ಡಿ.ಕುಮಾರಸ್ವಾಮಿ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ತಿರುಗೇಟು: ಪಿಎ ವಾಟ್ಸಪ್​ ಚಾಟ್​ ಬಗ್ಗೆ ಡಿಸಿ…

ಇತ್ತೀಚಿನ ಸುದ್ದಿ

ಎಲೆಕ್ಷನ್ ಗೆ ಹೊಸ ಸೂತ್ರ | ಎಸ್‌ಐಆರ್‌ ಬಳಿಕ ಪ್ರತಿ ಪಂಚಾಯಿತಿ ಮತಗಟ್ಟೆಗೆ ಗರಿಷ್ಠ 1,200 ಮತದಾರರ ಮಿತಿ ನಿಗದಿ?

17/11/2026, 16:28

ನವದೆಹಲಿ(reporterkarnataka.com): ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮತದಾನದ ಸರತಿ ತಗ್ಗಿಸಲು, ಪ್ರತಿ ಮತಗಟ್ಟೆಗೆ ಗರಿಷ್ಠ 1,200 ಮತದಾರರ ಮಿತಿ ನಿಗದಿಪಡಿಸಲು ರಾಜ್ಯ ಚುನಾವಣಾ ಆಯೋಗ ಚಿಂತಿಸಿದೆ. 99 ಲಕ್ಷ ಮತದಾರರ ಹೆಸರು ಕೈಬಿಟ್ಟ ಬೆನ್ನಲ್ಲೇ, ಮತಪತ್ರ ಮತ್ತು ಮತಪೆಟ್ಟಿಗೆಗಳ ಸಿದ್ಧತೆ ಚುರುಕುಗೊಂಡಿದ್ದು,ಅಂತಿಮ ಮೀಸಲು ಹಾಗೂ ಮತದಾರರ ಪಟ್ಟಿಗಾಗಿ ಆಯೋಗ ಎದುರು ನೋಡುತ್ತಿದೆ. ರಾಜ್ಯದಲ್ಲಿ ಎಸ್‌ಐಆರ್‌ ಬಳಿಕ ಮತದಾರರ ಸಂಖ್ಯೆ ತಗ್ಗಿದ್ದು, ಇದರಿಂದ ಸುಗಮ ಮತದಾನ ಸಾಧ್ಯ ಎಂಬ ನಿರೀಕ್ಷೆ ಮೂಡಿದೆ.
ಮತಗಟ್ಟೆಯ ಹೊರಗೆ ಗಂಟೆಗಟ್ಟಲೆ ಸರತಿಯಲ್ಲಿ ನಿಂತು ಮತ ಚಲಾಯಿಸುವ ದಿನಗಳು ಕಡಿಮೆಯಾಗಲಿವೆಯೇ? ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಒಂದು ಮತಗಟ್ಟೆಗೆ ಗರಿಷ್ಠ 1200 ಮತದಾರರ ಮಿತಿ ನಿಗದಿ ಮಾಡುವ ಕುರಿತು ಗಂಭೀರ ಚಿಂತನೆ ನಡೆಸಿದೆ.
ಈ ಹಿಂದೆ ಸರಾಸರಿ 1,500 ಮತದಾರರಿಗೆ ಒಂದು ಮತಗಟ್ಟೆ ರಚಿಸಲಾಗುತ್ತಿತ್ತು. ಇದೀಗ ಪ್ರತಿ ಬೂತ್‌ನಲ್ಲಿರುವ ಮತದಾರರ ಸಂಖ್ಯೆಯನ್ನು 1,200ಕ್ಕೆ ಇಳಿಸಿದರೆ, ಮತಗಟ್ಟೆಗಳ ಸಂಖ್ಯೆ ಹೆಚ್ಚಳವಾಗಲಿದೆ. ಇದರಿಂದ ಮತದಾನ ದಿನದಂದು ಮತದಾರರ ಸರತಿ ಕಡಿಮೆಯಾಗುವುದಲ್ಲದೆ, ಮತ ಚಲಾಯಿಸಲು ಬೇಕಾಗುವ ಸಮಯವೂ ಇಳಿಯಬಹುದು ಎಂಬ ನಿರೀಕ್ಷೆಯಿದೆ.
ರಾಜ್ಯದಲ್ಲಿ ಇತ್ತೀಚೆಗೆ ಪೂರ್ಣಗೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ಬಳಿಕ ಮತದಾರರ ಸಂಖ್ಯೆ 4.55 ಕೋಟಿಗೆ ಇಳಿಕೆಯಾಗಿದೆ. ಮೃತಪಟ್ಟವರು, ಸ್ಥಳಾಂತರಗೊಂಡವರು, ವಿಳಾಸದಲ್ಲಿ ಪತ್ತೆಯಾಗದವರು ಹಾಗೂ ನಕಲಿ ಅಥವಾ ಎರಡು ಕಡೆ ಹೆಸರು ಹೊಂದಿದ್ದವರು ಸೇರಿದಂತೆ ಸುಮಾರು 99 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಮತಗಟ್ಟೆವಾರು ಮತದಾರರ ಸಂಖ್ಯೆಯನ್ನು ಪರಿಷ್ಕರಿಸಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು