ಇತ್ತೀಚಿನ ಸುದ್ದಿ
ಮೂಡಿಗೆರೆ | ಮುತ್ತಿಗೆಪುರ ಗ್ರಾಮದ ವಿಂಧನ್ ಮನೆ ಮೇಲೆ ಗುಂಡಿನ ದಾಳಿ: ಕೂದಲೆಳೆಯ ಅಂತರದಲ್ಲಿ ಪಾರು
22/11/2026, 14:58
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದ ವಿಂಧನ್ ಮನೆ ಮೇಲೆ ಗುಂಡು ಹಾರಿಸಲಾಗಿದ್ದು,
ಕೂದಲೆಳೆಯ ಅಂತರದಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.






ಬಿಜೆಪಿ ಎಸ್ ಸಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಿತ್ ತಂಡದಿಂದ ಫೈರಿಂಗ್ ನಡೆದಿದೆ ಎಂದು ಆರೋಪಿಸಲಾಗಿದೆ.
*ಶಿಕಾರಿಗೆ ಬಂದ್ರಾ? ಕೊಲೆ ಮಾಡುವ ಉದ್ದೇಶದಿಂದ ಬಂದ್ರಾ? ಘಟನೆ ಹಿಂದೆ ಇದಿಯೇ ವೈಷಮ್ಯ?*
ಪ್ರಕರಣ ದಾಖಲಿಸದಂತೆ ವಿಂದನ್ ಅವರಿಗೆ ರಾಜಕಾರಿಣಿಗಳಿಂದ ಒತ್ತಡ ಬಂದಿದೆ ಎನ್ನಲಾಗಿದೆ.
ಪ್ರಕರಣ ದಾಖಲಿಸಲು ಪೊಲೀಸ್ ವರಿಷ್ಠಾಧಿಕಾರಿ ಖಡಕ್ ಸೂಚನೆ ಬಳಿಕ ಎಫ್ ಐಆರ್ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಕುರಿತು ನೈಜ ಕಾರಣ ತನಿಖೆಯಿಂದ ತಿಳಿದು ಬರಬೇಕಿದೆ.
ಸಮಗ್ರ ತನಿಖೆಗೆ ವಿಂದನ್ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.












