ಇತ್ತೀಚಿನ ಸುದ್ದಿ
ಬಿಹಾರ | BPSC ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಮಾಸ್ಟರ್ ಮೈಂಡ್ ಅತುಲ್ ರಾಜ್ ಪಾಂಡೆ ಬಂಧನ
20/08/2026, 19:00
ಪಾಟ್ನಾ(reporterkarnataka.com): ಬಿಹಾರದ ಪಾಟ್ನಾದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ಅತುಲ್ ರಾಜ್ ಪಾಂಡೆಯನ್ನು ಬಂಧಿಸಲಾಗಿದೆ. BPSC-AEDO ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, EOU ಬಯೋಮೆಟ್ರಿಕ್ ಆಪರೇಟರ್ ಅತುಲ್ ರಾಜ್ ಪಾಂಡೆ ಅವರನ್ನು ಬಂಧಿಸಿದೆ. ಪರೀಕ್ಷಾ ಕೇಂದ್ರಗಳನ್ನು ನಿರ್ವಹಿಸಿ ಸಾಲ್ವರ್ ಗ್ಯಾಂಗ್ಗೆ ನೆರವು ನೀಡಿದ ಆರೋಪ ಅತುಲ್ ರಾಜ್ ವಿರುದ್ಧ ಕೇಳಿಬಂದಿದ್ದು, ವಿಚಾರಣೆ ವೇಳೆ ಗ್ಯಾಂಗ್ನ ಹಲವು ಪ್ರಮುಖರ ಹೆಸರುಗಳು ಬಹಿರಂಗವಾಗಿವೆ.
ಪಾಟ್ನಾದಲ್ಲಿ EOU ಮಹತ್ವದ ಕಾರ್ಯಾಚರಣೆ ನಡೆಸಿದ್ದು, BPSC-AEDO ಪರೀಕ್ಷೆಯಲ್ಲಿ ನಡೆದ ಅಕ್ರಮದ ಜಾಲವನ್ನು ಬಯಲಿಗೆಳೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಯೋಮೆಟ್ರಿಕ್ ಆಪರೇಟರ್ ಅತುಲ್ ರಾಜ್ ಪಾಂಡೆ ಅವರನ್ನು ಬಂಧಿಸಲಾಗಿದೆ. ಏಪ್ರಿಲ್ 2026ರಲ್ಲಿ ನಡೆದ AEDO ಪರೀಕ್ಷೆಯಲ್ಲಿ ಸಕ್ರಿಯವಾಗಿದ್ದ ಸಾಲ್ವರ್ ಗ್ಯಾಂಗ್ನೊಂದಿಗೆ ಅತುಲ್ ರಾಜ್ ಸಂಪರ್ಕ ಹೊಂದಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಕಂಕರ್ಬಾಗ್ನ ರಘುನಾಥ ಉಚ್ಚ ಬಾಲಿಕಾ ವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ಅತುಲ್ ರಾಜ್ ಬಯೋಮೆಟ್ರಿಕ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಸಹೋದ್ಯೋಗಿ ದೀಪಿಕಾ ಕುಮಾರಿ ಅವರ ಮೊಬೈಲ್ನಿಂದ ಪರೀಕ್ಷೆಗೆ ಸಂಬಂಧಿಸಿದ ಹಲವು ಮಹತ್ವದ ಡಿಜಿಟಲ್ ಸಾಕ್ಷ್ಯಗಳು ಪತ್ತೆಯಾಗಿವೆ. ಅತುಲ್ ರಾಜ್ ಅವರ ಮೊಬೈಲ್ನ್ನೂ ಪರೀಕ್ಷಾ ಕೇಂದ್ರದಿಂದ ವಶಪಡಿಸಿಕೊಳ್ಳಲಾಗಿತ್ತು. ಅತುಲ್ ರಾಜ್ ಈ ಹಿಂದೆ ವಿವಿಧ ಜಾಮರ್ ಮತ್ತು ಬಯೋಮೆಟ್ರಿಕ್ ಕಂಪನಿಗಳೊಂದಿಗೆ ಹಲವು ಪರೀಕ್ಷೆಗಳಲ್ಲಿ ಕೆಲಸ ಮಾಡಿದ್ದಾನೆ. ಈ ಕಂಪನಿಗಳಿಗೆ ಮಾನವ ಸಂಪನ್ಮೂಲವನ್ನೂ ಆತ ಒದಗಿಸುತ್ತಿದ್ದ ಎನ್ನಲಾಗಿದೆ.
*ತನಿಖೆ ಮುಂದುವರಿಕೆ:*
ಪ್ರಕರಣದ ಇತರ ಆಯಾಮಗಳ ಬಗ್ಗೆಯೂ EOU ಆಳವಾದ ತನಿಖೆ ನಡೆಸುತ್ತಿದೆ. ಬಂಧನದ ಬಳಿಕ ಅತುಲ್ ರಾಜ್ ಅವರನ್ನು ಆಗಸ್ಟ್ 19ರ ತಡರಾತ್ರಿ ಪಾಟ್ನಾದ ಬೇಊರ್ ಜೈಲಿಗೆ ಕಳುಹಿಸಲಾಗಿದೆ.
ಏಪ್ರಿಲ್ 23, 2026ರಂದು ಶ್ರೀಕೃಷ್ಣಾಪುರಿ ಪೊಲೀಸ್ ಠಾಣೆಯಲ್ಲಿ ಲೋಕ ಸ್ವಚ್ಛತಾ ಅಧಿಕಾರಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.












