ಇತ್ತೀಚಿನ ಸುದ್ದಿ
ಸರ್ಕಾರಿ ಬಸ್ – ಬೈಕ್ ಮುಖಾಮುಖಿ ಡಿಕ್ಕಿ: ನವವಿವಾಹಿತ ಬೈಕ್ ಸವಾರ ಬೆಂಕಿಗಾಹುತಿ
27/10/2026, 13:16
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸರ್ಕಾರಿ ಬಸ್-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ 5 ದಿನದ ಹಿಂದೆ ಮದುವೆಯಾಗಿದ್ದ ನವವಿವಾಹಿತ ಸಾವನ್ನಪ್ಪಿದ ದಾರುಣ ಘಟನೆ ಶೃಂಗೇರಿ ತಾಲೂಕಿನ ಮೆಣಸೆ ಬಳಿ ನಡೆದಿದೆ.
ನಾಗರಾಜ್ (32) ಮೃತ ದುರ್ದೈವಿ. ನಾಗರಾಜ್ ಅವರು ಶೃಂಗೇರಿ ತಾಲೂಕಿನ ಕುಂಚೇಬೈಲು ನಿವಾಸಿ.
ಡಿಕ್ಕಿ ರಭಸಕ್ಕೆ ರಸ್ತೆ ಮಧ್ಯೆ ಬೈಕ್ ಹೊತ್ತಿ ಉರಿದಿದೆ. ಬೈಕ್ ಗೆ ಬೆಂಕಿ ಹತ್ತುತ್ತಿದ್ದಂತೆ ಬೈಕ್ ಸವಾರನಿಗೂ ಬೆಂಕಿ ತಾಗಿದೆ. ಸರಕಾರಿ ಬಸ್ ಜಯಪುರದಿಂದ ಶೃಂಗೇರಿಗೆ ಹೋಗುತ್ತಿತ್ತು.ಅಪಘಾತದ ಬಳಿಕ ರಸ್ತೆ ಬದಿಯ ಕಂದಕದಲ್ಲಿ ಸರ್ಕಾರಿ ಬಸ್ ಸಿಲುಕಿಕೊಂಡಿತ್ತು.
ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












