ಇತ್ತೀಚಿನ ಸುದ್ದಿ
ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ನಮೋತ್ಸವ: ಗಜೇಂದ್ರ ಕೊಟ್ಟಿಗೆಹಾರ
15/09/2026, 19:59
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ನಮೋತ್ಸವದ ಮೂಲಕ ಸಫಾಯಿ ಕರ್ಮಚಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಸನ್ಮಾನ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಚಾಲಕರಕ್ಷಾ ವಿಮಾ ಯೋಜನೆ ಮಂಗಳ ಮುಖಿಯರಿಗೆ ಗೌರವಾರ್ಪಣೆ ಕಾರ್ಯಕ್ರಮ ಬಿಜೆಪಿ ಪಕ್ಷದ ವತಿಯಿಂದ ನಡೆಸಲಾಗುತ್ತಿದೆ ಎಂದು ಬಿಜೆಪಿ ಮಂಡಲ ಅದ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮತನಾಡಿ. ಸೆ. 17 ಗುರುವಾರ ಬೆಳಗ್ಗೆ 10 ಗಂಟೆಯಿಂದ ಇಲ್ಲಿನ ರೈತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ. ದೇಶದ ಪ್ರಧಾನಿಯಾಗಿ ತಮ್ಮ ಅಧಿಕಾರದ 25 ವರ್ಷಗಳ ಯಶಸ್ವಿ ಓಟದ ಅಂಗವಾಗಿ ಪಕ್ಷದ ವತಿಯಿಂದ ನಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಜೀವನವನ್ನೆ ಸದಾ ರಸ್ತೆಯಲ್ಲಿ ಪಣಕಿಟ್ಟು ವಾಹನ ಒಡಿಸುವ ಟ್ಯಾಕ್ಷಿ. ಕ್ಯಾಬ್ ಚಾಲಕರಿಗೆ ಮೂರು ವರ್ಷಗಳ ಉಚಿತ ಇನ್ಸೂರೆನ್ಸ್ ನಮ್ಮ ಪರಿಸರವನ್ನು ದಿನಪ್ರತಿ ಸ್ಚಚ್ಚ ಸುಂದರವಾಗಿ ಇಡುವ ಸಪಾಯಿ ಕರ್ಮಚಾರಿಗಳು, ಗ್ರಾಮೀಣ, ನಗರ ವ್ಯಾಪ್ತಿಯಲ್ಲಿ ಅವಿರತ ಸೆವೆ ಸಲ್ಲಿಸುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ, ಸಮಾಜದಲ್ಲಿ ನೋವು ಅನುಭವಿಸಿರುವ ಮಂಗಳಮುಖಿಯರಿಗೆ ಗೌರವಾರ್ಪಣೆ ಮೂಲಕ. ಸುಮಾರು 2000 ಶ್ರಮಿಕರನ್ನು ಗೌರವಿಸುವ ಉದ್ದೇಶ ಹೊಂದಲಾಗಿದೆ. ಇದನ್ನು ಸರಕಾರಗಳೆ ಮಾಡಬೇಕಿತ್ತು. ಅದರೆ ಕಾಂಗ್ರೇಸ್ ಸರ್ಕಾರ ಅಭಿವೃದ್ಧಿಯನ್ನೆ ಮೆರತ್ತಿದ್ದು. ವಿಧವಾ ವೇತನ, ಮಾಸಾಶನ, ರೇಶನ್ ಕಾರ್ಡ್ ರದ್ದು, ರೈತರಿಗೆ ಪರಿಹಾರ ಸೇರಿದಂತೆ
ಅನೇಕ ಸವಲತ್ತುಗಳನ್ನು ತಡೆ ಹಿಡಿದಿದ್ದು, ಬದುಕು ದುಸ್ಥರವಾಗಿದ್ದು ಕಷ್ಟದ ಸಮಯದಲ್ಲಿ ಶ್ರಮಿಕರಿಗೆ ಒಂದಷ್ಟು ಈ ಕಾರ್ಯಕ್ರಮದ ಮೂಲಕ ಅಳಿಲು ಸೇವೆ ಸಲ್ಲಿಸಲು ಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ಆಯೋಜಕರು, ಬಿಜೆಪಿ ಮುಖಂಡರಾದ ಸುಷ್ಮಾ ವಿಭಾ ಮಾತನಾಡಿ. ನರೇಂದ್ರ ಮೋದಿ ಅಭಿಮಾನಿಯಾಗಿ ಅವರ ಹುಟ್ಟುಹಬ್ಬ ಆಚರಿಸುವುದು ನನ್ನ ಕರ್ತವ್ಯವಾಗಿದ್ದು. ನಮೋತ್ಸವದ ಮೂಲಕ ಒಂದಷ್ಟು ಸಮಾಜಕ್ಕೆ ಕೊಡಬೇಕು ಎಂಬ ಕಲ್ಪನೆಯೊಂದಿಗೆ, ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಅದ್ದೂರಿಯಾಗಿ ನಡೆಸುತ್ತಿದ್ದು. ಈ ಕಾರ್ಯಕ್ರಮಕ್ಕೆ ಅವದೂತ ವಿನಯ್ ಗುರೂಜಿ, ಕೇಂದ್ರ ಸಪಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಹರದೀಪ್ ಸಿಂಗ್ ಗಿಲ್, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಎಂಎಲ್ಸಿ ಸಿ.ಟಿ. ರವಿ, ಮಾಜಿ ಸಭಾಪತಿ ಎಂ ಕೆ ಪ್ರಾಣೇಶ್. ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ದೇವರಾಜ್ ಶೆಟ್ಟಿ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸುತ್ತಿದ್ದಾರೆ ಎಂದರು.
ಪ್ರಕೋಷ್ಠಗಳ ಜಿಲ್ಲಾ ಪ್ರಮುಖ್ ಪಂಚಾಕ್ಷರಿ ಹಾಲೂರು ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಅವರ ಸರ್ಕಾರ ನೀಡಿರುವ ಸವಲತ್ತುಗಳು, ಅಭಿವೃದ್ಧಿ ಕಾರ್ಯಗಳು ತಲುಪಬೇಕು ಮತ್ತು ಮೋದಿ ಅಡಳಿತದಲ್ಲಿ ದೇಶ ಮತ್ತಷ್ಟು ಅಭಿವೃದ್ಧಿ ಹೊಂದಬೇಕು ಎಂಬ ಆಶಯದೊಂದಿಗೆ ತಿಂಗಳ ಕಲಾಸೇವಾ ಸಂಕಲ್ಪ ಅಭಿಯಾನ ಸಂಕಲ್ಪ ದೊಂದಿಗೆ ಪ್ರಮುಖ 14 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ನಗರ ಹಳ್ಳಿಯ ಮನೆಮನೆಗೂ ತಲುಪಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಲೋಕೇಶ್ ಮರ್ಕಲ್, ನಯನ ತಳವಾರ ರಂಗನಾಥ್ ಭಾಗವಹಿಸಿದ್ದರು.












