ಇತ್ತೀಚಿನ ಸುದ್ದಿ
ಮಂಗಳೂರು | ಕೆಡಿಪಿ ಸಭೆಗೆ ಪೊಲೀಸ್ ಕಮಿಷನರ್ ಗೈರು: ಸಚಿವ ಯು.ಟಿ.ಖಾದರ್ ಗರಂ
15/09/2026, 22:05
ಮಂಗಳೂರು(reporterkarnataka.com): ಮಂಗಳೂರಿನ ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಗೆ ಮಂಗಳೂರು ಪೊಲೀಸ್ ಕಮಿಷನರ್ ಗೈರುಹಾಜರಾಗಿರುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಗರಂ ಆಗಿದ್ದಾರೆ.
ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ
ತಮ್ಮ ಬದಲಿಗೆ ಡಿಸಿಪಿ ಸ್ಯಾಂ ವರ್ಗೀಸ್ ಅವರನ್ನು ಸಭೆಗೆವಕಳುಹಿಸಿದ್ದರು. ಇದರಿಂದ ಆಕ್ರೋಶಗೊಂಡ ಸಚಿವ ಖಾದರ್ ಅವರು ಕಮಿಷನರ್ ಅವರು ಗೈರು ಆಗಿರುವುದಕ್ಕೆ ಅನುಮತಿ ಪಡೆದಿದ್ದಾರ?
ಕಾನೂನು ಪಾಠ ಮಾಡ್ತಾರೆ.. ಅವರಿಗೆ ಕಾನೂನು ಅನ್ವಯಿಸೋದಿಲ್ವಾ? ಅಂತಾ ಗರಂ ಆಗಿದ್ದಾರೆ.
ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ವಾಸ್ತವದಲ್ಲಿ ದಕ್ಷ ಪೊಲೀಸ್ ಅಧಿಕಾರಿ. ಮಂಗಳೂರು ಮತ್ತು ಸುತ್ತಮುತ್ತಲಿನ ಕಮಿಷನರೇಟ್ ಪ್ರದೇಶದಲ್ಲಿ ಡ್ರಗ್ಸ್ ಹಾವಳಿಯನ್ನು ಮಟ್ಟ ಹಾಕುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಈ ದಕ್ಷ ಪೊಲೀಸ್ ಅಧಿಕಾರಿಯ ವರ್ಗಾವಣೆಗೆ ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಎರಡು ಕಡೆಯಿಂದಲೂ ಕಳೆದ ಒಂದು ವರ್ಷದಿಂದ ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಸುಧೀರ್ ರೆಡ್ಡಿ ಕೆಡಿಪಿ ಸಭೆಗೆ ಗೈರು ಹಾಜರಾದರೂ ಅವರೊಬ್ಬ ದಕ್ಷ ಅಧಿಕಾರಿ ಎನ್ನುವುದು ಕರಾವಳಿಯ ಪ್ರಜ್ಞಾವಂತ ನಾಗರಿಕರ ಅನಿಸಿಕೆ.












