1:58 AM Saturday5 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಕತ್ತರಿ ಬಾಲದ ಕಾಜಣ, ಮಾಡುತ್ತದೆ ಕೀಟಗಳ ನಿಯಂತ್ರಣ ! ಪರಿಸರ ಸಮತೋಲನದ ಕಾವಲುಗಾರ ಈ ಪಕ್ಷಿಯ ಬಗ್ಗೆ ನಿಮಗೆಷ್ಟು ಗೊತ್ತು ?

15/08/2026, 16:33

ಕಾಜಣ (drongo)
ಕಾಜಣ ಹೆಚ್ಚು ಆಕರ್ಷಕ ವಲ್ಲದ ಗಾಢ ಕಪ್ಪು ಬಣ್ಣದ ಹಕ್ಕಿ. ಗಾತ್ರದಲ್ಲಿ ಕಾಗೆಯನ್ನು ಹೋಲುತ್ತದೆ. ಕಾಜಣಗಳನ್ನು ಕವಲೋಡೆದ, ಕತ್ತರಿ ಆಕಾರದ ಬಾಲದಿಂದ ಸುಲಭವಾಗಿ ಗುರುತಿಸಬಹುದು. ಇವುಗಳು ಸಾಮಾನ್ಯವಾಗಿ ಕೃಷಿ ಪ್ರದೇಶಗಳಲ್ಲಿ, ಸಣ್ಣ ಕಾಡು ಪ್ರದೇಶಗಳಲ್ಲಿ ಮರದ ಕೊಂಬೆಗಳಲ್ಲಿ ಜೋಡಿಯಾಗಿ, ನೇರವಾಗಿ ಕುಳಿತು ಕೊಂಡಿರುತ್ತದೆ. ಕೆಲವು ಪ್ರಭೇದದ ಕಾಜಣಗಳಲ್ಲಿ ಕವಲೋಡೆದ ಬಾಲಗಳಲ್ಲಿ ಉದ್ದವಾದ ಅಲಂಕಾರಿಕ ಜಾಲವನ್ನು ಕಾಣಬಹುದು.(Rocket tailed dronogo)ಭೀಮರಾಜ ಪಕ್ಷಿ )ಕಾಜಣಗಳು ಹೆಚ್ಚಾಗಿ ಹರಾಡುತ್ತಿರುವ ಕೀಟಗಳನ್ನು ಹಿಡಿದು ತಿನ್ನುತ್ತದೆ. ಈ ಪಕ್ಷಿಗಳು ಧೈರ್ಯ ಶಾಲಿಗಳು ಹಾಗೂ ಅಕ್ರಮಣಕಾರಿಯಾಗಿದ್ದು, ತನಗಿಂತ ದೊಡ್ಡ ಗಾತ್ರದ ಪಕ್ಷಿಗಳನ್ನು ಬೆನ್ನಟ್ಟಿ ತನ್ನ ವಾಸ ಸ್ಥಾನದ ರಕ್ಷಣೆ ಮಾಡುತ್ತದೆ.


ಇವುಗಳು ಸಸ್ತನಿಗಳ ಹಾಗೂ ಇತರ ಪಕ್ಷಿಗಳ ಕರೆಗಳನ್ನು ಅನುಕರಿಸಿ ಎಚ್ಚರಿಕೆಯ ಸಂದೇಶಗಳನ್ನು ಸುಚಿಸುತ್ತದೆ. ಗಂಡು ಹೆಣ್ಣು ಪಕ್ಷಿಗಳು ಒಂದೇ ತೆರನಾಗಿದ್ದು, ಎತ್ತರವಾದ ಮರಗಳ,ಕವಲೋಡೆದ ಕೊಂಬೆಗಳ ಸಂಧಿಯಲ್ಲಿ ತಟ್ಟೆಯಾಕಾರದ ಗೂಡನ್ನು ಕಟ್ಟಿ 2 ರಿಂದ 4 ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ. ಬೆಳೆಗಳನ್ನು ನಾಶ ಮಾಡುವ ಕೀಟಗಳ ಸಂತತಿಯನ್ನು ಇವುಗಳು ನಿಯಂತ್ರಿಸುವುದರಿಂದ, ಪರಿಸರದ ಸಮಾತೋಲನತೆಯನ್ನು ಕಾಯ್ದು ಕೊಳ್ಳುವಲ್ಲಿ ಕಾಜಣಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು