7:18 AM Wednesday23 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಹೂಗಳ ನಡುವೆ ಹಾರುವ ಪುಟ್ಟ ಸೂರಕ್ಕಿ! ಚಿಲಿಪಿಲಿ ಧ್ವನಿಯ ಈ ಮುದ್ದು ಹಕ್ಕಿಯ ಬದುಕು, ಗೂಡು ಕಟ್ಟುವ ಕೌಶಲ್ಯ ಮತ್ತು ಪರಿಸರಕ್ಕೆ ನೀಡುವ ಕೊಡುಗೆ ಎಷ್ಟೊಂದು ವಿಶೇಷ ಗೊತ್ತೇ ?

08/08/2026, 12:28

ಸೂರಕ್ಕಿ (ಹೂ ಗುಬ್ಬಿ /Sun Bird)
ನಮ್ಮ ಸುತ್ತ ಮುತ್ತಲೂ ಕಾಣಸಿಗುವ ಪುಟ್ಟದಾದ ಹಕ್ಕಿ ಸೂರಕ್ಕಿ.
ಹೂಗಳ ಸುತ್ತಲೂ ಹಾರಾಡುತ್ತಾ ಕಾಣಸಿಗುವ ಇವುಗಳು 8ರಿಂದ 15ಸೆ.ಮೀ ನಷ್ಟು ಉದ್ದ ಹಾಗೂ 5 ರಿಂದ 20 ಗ್ರಾಂ ತೂಕ ಹೊಂದಿರುತ್ತದೆ.ಆಕರ್ಷಕವಾದ ನೀಲಿ,ನೇರಳೆ,ಹಸುರು ಮಿಶ್ರಿತ ಹೊಳೆಯುವ ಗರಿಗಳನ್ನು ಹೊಂದಿರುತ್ತದೆ. ಇವುಗಳ ಕೊಕ್ಕು ತುಸು ಉದ್ದವಾಗಿದ್ದು, ಕೆಳಮುಖವಾಗಿ ಬಾಗಿರುತ್ತದೆ. ಇದು ಹೂವಿನ ಮಕರಂದವನ್ನು ಹೀರಲು ಅನುಕೂಲವಾಗಿದೆ.


ದೇಹವು ಹಗುರವಾಗಿದ್ದು, ತುಸು ವೇಗವಾಗಿ ಹಾರುವ ಈ ಹಕ್ಕಿಗಳು ಸಣ್ಣ ಕೀಟಗಳನ್ನೂ ಹಾಗೂ ಜೇಡಗಳನ್ನು ಸೇವಿಸುತ್ತದೆ. ಸೂರಕ್ಕಿಗಳು ಸಾಮಾನ್ಯವಾಗಿ ಹೂವಿನ ತೋಟಗಳಲ್ಲಿ, ಕೃಷಿ ಭೂಮಿಗಳಲ್ಲಿ ಜೋಡಿಯಾಗಿ ಕಂಡು ಬರುತ್ತದೆ. ಇವುಗಳ ಮೃದುವಾದ ಚಿಲಿಪಿಲಿ ಸದ್ದನ್ನು ಆಲಿಸುವುದೇ ಹಿತಾನುಭವ.
ಗಂಡು ಹಕ್ಕಿಗಳು ಸಾಮಾನ್ಯವಾಗಿ ಹೆಣ್ಣು ಹಕ್ಕಿಗಳಿಗಿಂತ ತುಸು ಗಾಢವಾದ ವರ್ಣಮಯ ಬಣ್ಣವನ್ನು ಹೊಂದಿರುತ್ತದೆ. ಈ ಹಕ್ಕಿಯ ಗೂಡುಗಳು ವಿಶಿಷ್ಟವಾಗಿದ್ದು, ಸಣ್ಣ ಗಿಡದ ರೆಂಬೆಗಳಲ್ಲಿ, ಚೀಲದ ಆಕಾರದಲ್ಲಿ ತೂಗಾಡುತ್ತಿರುತ್ತದೆ.ಈ ಗೂಡನ್ನು ಜೇಡದ ಬಲೆ, ಒಣಗಿದ ಎಲೆ ಕಡ್ಡಿಗಳನ್ನು ಬಳಸಿ ಹೆಣ್ಣು ಹಕ್ಕಿ ಕಟ್ಟಿಕೊಳ್ಳುತ್ತದೆ. ಈ ಗೂಡಿನ ಹೊರ ಭಾಗಕ್ಕೆ ತ್ಯಾಜ್ಯ ವಸ್ತುಗಳನ್ನು ಅಂಟಿಸಿ ಇತರ ಪ್ರಾಣಿ ಪಕ್ಷಿಗಳು ಗಮನಿಸದಂತೆ ಜಾಗ್ರತೆ ವಹಿಸುತ್ತದೆ. 2 ರಿಂದ 4 ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ. ಮರಿಗಳ ಪೋಷಣೆಯಲ್ಲಿ ಗಂಡುಹಕ್ಕಿ ಕೂಡ ಜೊತೆಯಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. 2 ರಿಂದ 3ವಾರಗಳ ತರುವಾಯ ಮರಿಗಳು ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತದೆ.
ಸೂರಕ್ಕಿಗಳು ಸಸ್ಯಗಳ ಪರಾಗ ಸ್ಪರ್ಶದ ಕ್ರಿಯೆಯ ಮೂಲಕ ಸಸ್ಯ ಸಂಕುಲ ಜೀವ ವೈವಿದ್ಯತೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪರಿಸರ ನಾಶದಂತಹ ವಿಕೋಪಗಳಿಂದ ವಿನಾಶದ ಅಂಚಿನಲ್ಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು