ಇತ್ತೀಚಿನ ಸುದ್ದಿ
ಮಂಗಳೂರು | ಜಪ್ಪಿನಮೊಗರಿನ ಕರುಂಬಿಕೆರೆಯಲ್ಲಿ ಸಹಸ್ರ ದೀಪೋತ್ಸವ ಸಂಭ್ರಮ
12/11/2026, 21:31
ಮಂಗಳೂರು(reporterkarnataka.com): ದೀಪಾವಳಿ ಹಬ್ಬದ ಅಂಗವಾಗಿ ಜಪ್ಪಿನಮೊಗರು ಪರಿಸರದ ಕರ್ಂಬಿ ಕೆರೆಯಲ್ಲಿ ಸಹಸ್ರ ದೀಪ ಬೆಳಗಿಸಿ ಸಂಭ್ರಮದಿಂದ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಸ್ಥಳೀಯ ನಿಕಟಪೂರ್ವ ಮನಪಾ ಸದಸ್ಯರಾದ ಶ್ರೀಮತಿ ವೀಣಾ ಮಂಗಳ, ಕಂಕನಾಡಿ ವಾರ್ಡಿನ ನಿಕಟಪೂರ್ವ ಮನಪಾ ಸದಸ್ಯರಾದ ಶ್ರೀ ಪ್ರವೀಣ್ ಚಂದ್ರ ಆಳ್ವ, ಮಾಜಿ ಮನಪಾ ಸದಸ್ಯರಾದ ಶ್ರೀ ಸುರೇಂದ್ರ, ಜಪ್ಪಿನಮೊಗರು ಗ್ರಾಮ ಯುವಕ ಮಂಡಲ ಅಧ್ಯಕ್ಷರಾದ ಶ್ರೀ ಮನೋಜ್ ಪೂಜಾರಿ ಹಾಗೂ ಶ್ರೀ ರಾಜೇಶ್ ಕೊಟ್ಟಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅವರು ಸ್ವಾಗತಿಸಿದರು. ಶ್ರೀ ಮಧು ಅವರು ಧನ್ಯವಾದ ಸಲ್ಲಿಸಿದರು. ಮನಪಾ ಮಾಜಿ ಸದಸ್ಯರಾದ ಶ್ರೀ ನಾಗೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.













