10:04 PM Wednesday11 - November 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು | ತರೀಕೆರೆ‌ ಬಳಿ ಮಣ್ಣಿನಗುಡ್ಡೆಗೆ ಬೈಕ್ ಡಿಕ್ಕಿ: ಪುತ್ರಿ ಸಾವು; ತಂದೆ… ಎಚ್​.ಡಿ.ಕುಮಾರಸ್ವಾಮಿ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ತಿರುಗೇಟು: ಪಿಎ ವಾಟ್ಸಪ್​ ಚಾಟ್​ ಬಗ್ಗೆ ಡಿಸಿ… ಮುಖ್ಯಮಂತ್ರಿ ಡಿಕೆಶಿ ಹಾಸನಾಂಬೆ ದರ್ಶನ ಪಡೆಯುತ್ತಿರುವ ವೀಡಿಯೋಗೆ ಭಕ್ತರಿಂದ ಚಪ್ಪಲಿ ಎಸೆತ: ಸರತಿ… ಕೊಡಗಿನ ಜನತೆಗೆ ಬೆಲೆ ಏರಿಕೆ ನಡುವೆಯೇ ಮತ್ತೊಂದು ಶಾಕ್: ಖಾಸಗಿ ಬಸ್ ದರ… Bangalore | ಹಾಕಿ ದಿಗ್ಗಜ ಕೊಡಗಿನ ಎಂ.ಎಂ. ಸೋಮಯ್ಯ ಮನೆಯಲ್ಲಿದ್ದ ಒಲಿಂಪಿಕ್ಸ್ ಚಿನ್ನದ… ಬಸ್ ದರ ಏರಿಕೆ | ಹೆಂಡ್ತಿಗೆ ಫ್ರಿ ಕೊಟ್ಟು ಗಂಡನಿಂದ ಡಬಲ್ ವಸೂಲಿ… Mysore | ಹುಣಸೂರು ಬಳಿ ಬೈಕ್‌ಗೆ ಒಕ್ಕಣೆ ಯಂತ್ರ ಡಿಕ್ಕಿ: ಸವಾರರಿಬ್ಬರ ದುರ್ಮರಣ ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿಯ ದರ್ಶನ ಪಡೆದ ಸಚಿವ ಕೃಷ್ಣ ಬೈರೇಗೌಡ: ₹1,000… Kodagu | ಚಲಿಸುತ್ತಿದ್ದಾಗಲೇ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹೊಗೆ: ಪ್ರಯಾಣಿಕರಲ್ಲಿ ಆತಂಕ ಅಂತಾರಾಷ್ಟ್ರೀಯ ಸಾಧಕ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನಚರಿತ್ರೆ ‘Village Boy…

ಇತ್ತೀಚಿನ ಸುದ್ದಿ

ಗಿನ್ನೆಸ್ ದಾಖಲೆಯ ಕೊಂಕಣಿ ಸಂಗೀತ ಮಹಾ ಮೇಳ: ಪಾಲ್ದನೆ ಚರ್ಚ್ ತಂಡದಿಂದ ಹಾಡುಗಳ ಪ್ರಸ್ತುತಿ

11/11/2026, 21:04

ಮಂಗಳೂರು(reporterkarnataka.com): ಕೊಂಕಣಿ ಮುಂಚೂಣಿಯ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ವತಿಯಿಂದ ಗಿನ್ನೆಸ್ ದಾಖಲೆಯ ಉದ್ದೇಶದೊಂದಿಗೆ ಮಂಗಳೂರಿನ ಪುರಭವನದಲ್ಲಿ ನವೆಂಬರ್ 3 ರಿಂದ 15 ರ ವರೆಗೆ 12 ದಿನ 12 ಗಂಟೆ 12 ನಿಮಿಷಗಳ ನಿರಂತರ ಗಾಯನ ಕಾರ್ಯಕ್ರಮ ನಡೆಯುತ್ತಿದ್ದು, ಇದರಲ್ಲಿ ಒಟ್ಟು 300 ತಂಡಗಳು ಭಾಗವಹಿಸುತ್ತಿವೆ. ಇಂಂದು ನವೆಂಬರ್ 11 ರಂದು ಬುಧವಾರ ಪಾಲ್ದನೆ ಸಂತ ತೆರೆಸಾ ಚರ್ಚ್ ತಂಡವು ಪೂರ್ವಾಹ್ನ 10 ರಿಂದ 11 ಗಂಟೆ ಅವಧಿಯಲ್ಲಿ ಪುರಭವನದ ವೇದಿಕೆಯಲ್ಲಿ ತನ್ನ ಹಾಡುಗಳನ್ನು ಪ್ರಸ್ತುತ ಪಡಿಸಿತು. ಈ ತಂಡದಲ್ಲಿ ಲಿಝಿ ಫೆರ್ನಾಂಡಿಸ್ (ಸಂಚಾಲಕಿ), ಪ್ರಿಯಾನ್ ಡಿ ಸೋಜಾ, ಮರ್ಲಿನ್ ಲೊಲಿಟಾ ಮೊಂತೇರೊ, ಲವೀನಾ ಲೋಬೊ, ಫ್ಲಾವಿಯಾ ಪಿಂಟೊ, ಎಲಿಯಾಸ್ ಫೆರ್ನಾಂಡಿಸ್, ವಿಲಿಯಂ ಲೋಬೊ, ದೀಪ್ತಿ ಗೊನ್ಸಾಲ್ವಿಸ್, ಪ್ರೆಸಿಲ್ಲಾ ಫೆರ್ನಾಂಡಿಸ್, ವೆಲೆಂಟಿನಾ ರೊಡ್ರಿಗಸ್, ಮಾಲಿನಿ ವಾಸ್, ಸೆಲಿನ್ ಡಿ ಸೋಜಾ, ಗ್ರೇಸಿ ಡಿ ಸೋಜಾ, ಫಿಯೋನಾ ಸಿಕ್ವೇರಾ, ಸಿಸ್ಟರ್ ಮೊಂತಿ ರೊಡ್ರಿಗಸ್, ಐರಿನ್ ಕ್ರಾಸ್ತಾ, ಜೆಸಿಂತಾ ಫೆರ್ನಾಂಡಿಸ್, ಎಮಿಲಿಯಾ ಡೆನೋಗರ್ , ಫೆಲಿಕ್ಸ್ ಕ್ಯಾಸ್ಟಲಿನೊ, ರೀಟಾ ನೊರೊನ್ಹಾ, ಅನಿಲ್ ಮಸ್ಕರೇನ್ಹಸ್, ಜಾನೆಟ್ ಡಿ ಸಿಲ್ವಾ, ಅನಿತಾ ಪಿರೇರಾ, ಎವ್ಲಿನ್ ಸಿಕ್ವೇರಾ ಅವರು ಇದ್ದರು. ಈ ಸಂದರ್ಭ ಮಂಗಳೂರು ಸಿಟಿ ವಲಯದ ಪ್ರಧಾನ ಧರ್ಮಗುರು ಹಾಗೂ ಪಾಲ್ದನೆ ಚರ್ಚ್ ನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಪೂರ್ತಿ ಗಾಯನ ಮುಕ್ತಾಯದ ತನಕವೂ ಉಪಸ್ಥಿತರಿದ್ದು ತಂಡವನ್ನು ಹುರಿದುಂಬಿಸಿದರು. ಚರ್ಚ್ ನ ಸದಸ್ಯರು ಕೂಡಾ ಉಪಸ್ಥಿತರಿದ್ದು, ಗಾಯನ ತಂಡಕ್ಕೆ ಉತ್ತೇಜನ ನೀಡಿದರು. ಮಾಂಡ್ ಸೊಭಾಣ್ ಅಧ್ಯಕ್ಷ ಲುವಿಸ್ ಜೆ.ಪಿಂಟೊ ಮತ್ತು ಪಿರ್ಜೆಂತ್ ರೋಯ್ ಕ್ಯಾಸ್ತೆಲಿನೊ ಅವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು