ಇತ್ತೀಚಿನ ಸುದ್ದಿ
ಉಡುಪಿ | ಪರ್ಯಾಯ ಶೀರೂರು ಮಠದಲ್ಲಿ ದೀಪಾವಳಿ ಅಂಗವಾಗಿ ಎಣ್ಣೆ ಶಾಸ್ತ್ರ; ತೈಲಾಂಭ್ಯಂಜನ
09/11/2026, 12:26
ಉಡುಪಿ(reporterkarnataka.com): ದೀಪಾವಳಿ ಹಬ್ಬದ ಅಂಗವಾಗಿ ಉಡುಪಿಯ ಪರ್ಯಾಯ ಶೀರೂರು ಮಠದಲ್ಲಿ ಎಣ್ಣೆ ಶಾಸ್ತ್ರ ಹಾಗೂ ತೈಲಾಂಭ್ಯಂಜನ ನಡೆಯಿತು.
ಪರ್ಯಾಯ ಪೀಠಾಧೀಶ ವೇದವರ್ಧನತೀರ್ಥ ಶ್ರೀಪಾದರು ತಮ್ಮ ವಿದ್ಯಾಗುರುಗಳಾದ ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥರು ಹಾಗೂ ಕಾಣಿಯೂರು ಮಠಾಧೀಶ ವಿದ್ಯಾವಲ್ಲಭತೀರ್ಥರ ಸಮ್ಮುಖದಲ್ಲಿ ಚಂದ್ರಶಾಲೆಯಲ್ಲಿ ಎಣ್ಣೆ ಶಾಸ್ತ್ರ ನೆರವೇರಿಸಿದರು. ಯತಿಗಳು ಎಣ್ಣೆ ಶಾಸ್ತ್ರ ಪೂರೈಸಿ, ಭಕ್ತಾದಿಗಳಿಗೆ ಎಣ್ಣೆ ಶಾಸ್ತ್ರ ಮಾಡಿದರು. ಅಷ್ಟಮಠದ ವಿದ್ವಾಂಸರು, ಪರ್ಯಾಯ ಮಠದ ದಿವಾನ ಉದಯಕುಮಾರ್ ಸರಳತ್ತಾಯ, ಪಾರುಪತ್ಯೆದಾರ ಶ್ರೀಶ ಭಟ್ ಕಡೆಕಾರು ಉಪಸ್ಥಿತರಿದ್ದರು.












