11:46 AM Tuesday22 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ನೀರಿನೊಳಗೆ ನುಗ್ಗಿ ವೇಗವಾಗಿ ಮೀನಿನೊಂದಿಗೆ ಹೊರಬರುವ ಮಿಂಚುಳ್ಳಿ!!: ನಂಬಿದ್ರೆ ನಂಬಿ, ಬಿಟ್ರೆ ಬಿಡಿ ಇದು ಏಕಪತ್ನಿತ್ವ ಪಾಲಕ!!!

01/08/2026, 11:43

ಮಿಂಚುಳ್ಳಿ(Kingfisher)

ಮಿಂಚುಳ್ಳಿಗಳಲ್ಲಿ ಮದ್ಯಮ ಗಾತ್ರದ ಗಾಢವಾದ ನೀಲಿ ಹಾಗೂ ಕೇಸರಿ ಬಣ್ಣದ ಪುಕ್ಕಗಳನ್ನು ಹೊಂದಿರುವ ಸುಂದರವಾದ ಪಕ್ಷಿ. ಇವುಗಳು ಹೆಚ್ಚಾಗಿ ಶಾಂತವಾದ ಕೊಳಗಳು ಹಾಗೂ ನದಿಗಳ ಹತ್ತಿರ ಮರದ ಮೇಲೆ ಒಂಟಿಯಾಗಿ ಕಾಣಸಿಗುತ್ತದೆ. ಮಿಂಚುಳ್ಳಿಗಳ ತಲೆ ಸ್ವಲ್ಪ ದೊಡ್ಡ ಗಾತ್ರವಾಗಿದ್ದು, ಉದ್ದವಾದ ಚೂಪಾದ ಕೊಕ್ಕು ಸಣ್ಣ ಕಾಲುಗಳು ಹಾಗೂ ಚಿಕ್ಕದಾದ ಬಾಲವನ್ನು ಹೊಂದಿರುತ್ತದೆ. ದೂರದರ್ಶಕ ದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಣ್ಣುಗಳು ನೀರಿನಲ್ಲಿ ಓಡಾಡುವ ಮೀನುಗಳನ್ನು ಬೇಟೆಯಾಡಲು ತುಂಬಾ ಸಹಕಾರಿ. ಸರಕ್ಕನೆ ನೀರಿನೊಳಗೆ ನುಗ್ಗಿ ವೇಗವಾಗಿ ಮೀನಿನೊಂದಿಗೆ ಹೊರಬರುವ ಮಿಂಚುಳ್ಳಿಗಳು ಬೇಟೆಯಾಡಿದ ಮೀನನ್ನು ತಿನ್ನುವ ರೀತಿ ಬಲು ಆಕರ್ಷಣಿಯ ಮೀನನ್ನು ಗಾಳಿಯಲ್ಲಿ ಎಸೆದು ಮತ್ತೆ ಕೊಕ್ಕಿನಲ್ಲಿ ಹಿಡಿದು ನುಂಗುತ್ತದೆ.


ಮಿಂಚುಳ್ಳಿಗಳು ಹೆಚ್ಚಾಗಿ ಏಕ ಪತ್ನಿತ್ವವನ್ನು ಪಾಲಿಸುತ್ತದೆ. ಇವುಗಳ ಗೂಡುಗಳು ಸಾಮಾನ್ಯವಾಗಿ ನದಿ, ಸರೋವರ, ಕೆರೆಗಳ ಪಕ್ಕದಲ್ಲಿ ಸುರಂಗ ತೋಡಿ ಕೊನೆಯಲ್ಲಿ ಪುಟ್ಟದಾದ ಕೋಣೆ ನಿರ್ಮಿಸಿ 3ರಿಂದ 6 ಮೊಟ್ಟೆಗಳನ್ನು ಇಡುತ್ತದೆ. ಉದ್ದವಾದ ಕೊಕ್ಕು ಹಾಗೂ ಕಾಲುಗಳು ಸುರಂಗ ತೊಡಲು ಸಹಕಾರಿಯಾಗಿದೆ. ಗಂಡು ಹೆಣ್ಣುಗಳು ಕೆಲಸಗಳನ್ನು ಸಮಾನಾಗಿ ಹಂಚಿಕೊಂಡು 3ರಿಂದ 4 ತಿಂಗಳು ಮರಿಗಳನ್ನು ಸಾಕುತ್ತದೆ.
Kingfisher nest

ಮಿಂಚುಳ್ಳಿಗಳಲ್ಲಿ ಅನೇಕ ಪ್ರಭೇದಗಳಿದ್ದು, ಅನೇಕ ಬಣ್ಣಗಳಲ್ಲಿ ಕಾಣಸಿಗುತ್ತದೆ. ಇದರ ಕೂಗು ಶಿಳ್ಳೆಯಂತೆ ಕೇಳಿಸುವುದರಿಂದ ಇವುಗಳ ಇರುವಿಕೆಯನ್ನು ಪತ್ತೆ ಮಾಡಬಹುದು. ಸಾಮಾನ್ಯವಾಗಿ ಹಸುರ ನೀಲಿಬಣ್ಣಗಳಲ್ಲಿ ಕಾಣ ಸಿಗುವ ಮಿಂಚುಳ್ಳಿಗಳು, ಕಪ್ಪು ಬಿಳಿ ಬಣ್ಣಗಳಲ್ಲಿ ಕಂಡು ಬರುತ್ತದೆ. ಜಲಮಾಲಿನ್ಯ, ಅರಣ್ಯಗಳ ನಾಶದಿಂದಾಗಿ ಇವುಗಳ ಸಂತತಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಮಿಂಚುಳ್ಳಿ ಪಶ್ಚಿಮ ಬಂಗಾಳದ ರಾಜ್ಯ ಪಕ್ಷಿಯಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು