12:04 PM Tuesday11 - August 2026
ಬ್ರೇಕಿಂಗ್ ನ್ಯೂಸ್
ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ…

ಇತ್ತೀಚಿನ ಸುದ್ದಿ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕೇಂದ್ರ ಸರಕಾರ ಮರು ತನಿಖೆ ನಡೆಸಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

28/10/2023, 17:28

ಉಡುಪಿ(reporterkarnataka.com): ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರ ಸರಕಾರದ ಸಿಬಿಐ ಮಾಡಿರುವುದರಿಂದ ಪ್ರಕರಣದ ಮರು ತನಿಖೆಯನ್ನು ಕೇಂದ್ರ ಸರಕಾರ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಉಡುಪಿಯಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ಪ್ರಶ್ನೆಯೊಂದಕ್ಕೆ ಉತ್ತರಿಸಿ ಪ್ರಕರಣವನ್ನು ನಾವು ಮರು ತನಿಖೆ ನಡೆಸಲು ಬರೋದಿಲ್ಲ ಎಂದರು.
ಕಾರ್ಕಳ ಬೈಲೂರಿನ ಪರಶುರಾಮ ಮೂರ್ತಿ ಕುರಿತು ಕೇಳಲಾದ ಪ್ರಶ್ನೆ ಉತ್ತರಿಸಿದ ಮುಖ್ಯಮಂತ್ರಿ, ಮೂರ್ತಿ ಅಸಲಿಯೋ? ಅಥವಾ ನಕಲಿಯೋ? ಎನ್ನುವುದರ ಕುರಿತು ತನಿಖೆ ನಡೆಸಲಾಗುವುದು ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ‘ಕಲೆಕ್ಷನ್ ಮಾಸ್ಟರ್ ಆಫ್ ಕರ್ನಾಟಕ’ ಎಂದು ಅವಹೇಳನ ಮಾಡಿದ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, ಶಾಸಕ ಹರೀಶ್ ಪೂಂಜ ಅವರು ರಾಜಕೀಯದಲ್ಲಿ ಬಚ್ಚಾ. ಹರೀಶ್ ಪೂಂಜ ಅವರು ಶಾಸಕರಾಗಿದ್ದು ಮೊನ್ನೆ. ನಾನು 1983ರಿಂದ ಶಾಸಕನಾಗಿದ್ದೇನೆ. 1985ರಲ್ಲಿ ಸಚಿವನಾಗಿದ್ದೆ. ಆವತ್ತೂ ಯಾರೂ ಕರೆದಿಲ್ಲ. ಪೂಂಜ ರಾಜಕೀಯದಲ್ಲಿ ಬಚ್ಚಾ ಎಂದು ಅವರು ನುಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು