3:43 PM Monday10 - August 2026
ಬ್ರೇಕಿಂಗ್ ನ್ಯೂಸ್
ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ…

ಇತ್ತೀಚಿನ ಸುದ್ದಿ

16ನೇ ಇಂಡಿಯಾ ಜೂನಿಯರ್ ಮಹಿಳೆಯರ ರಾಷ್ಟ್ರೀಯ ಹಾಕಿ: ಕರ್ನಾಟಕ ತಂಡ ಪ್ರಕಟ; ಕೊಡಗಿನ ಮನೀಶ್ ಪೂವಮ್ಮ ನಾಯಕಿ

10/08/2026, 15:41

ಬೆಂಗಳೂರು(reporterkarnataka.com): ಮಹಾರಾಷ್ಟ್ರದ ಪುಣೆಯಲ್ಲಿ ಆಗಸ್ಟ್ 12 ರಿಂದ 23 ರವರೆಗೆ 16ನೇ ಹಾಕಿ ಇಂಡಿಯಾ ಜೂನಿಯರ್ ಮಹಿಳೆಯರ ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್-2026 ನಡೆಯಲಿದ್ದು, ಇದರಲ್ಲಿ ಭಾಗವಹಿಸಲಿರುವ ಕರ್ನಾಟಕ ರಾಜ್ಯ ಜೂನಿಯರ್ ಮಹಿಳಾ ಹಾಕಿ ತಂಡ ಪ್ರಕಟಗೊಂಡಿದೆ. ತಂಡದಲ್ಲಿ ಕೊಡಗು ಜಿಲ್ಲೆಯ ಒಂಬತ್ತು ಪ್ರತಿಭಾವಂತ ಆಟಗಾರ್ತಿಯರು ಸ್ಥಾನ ಪಡೆದುಕೊಂಡಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ಆಲ್ ಇಂಡಿಯಾ ಹಾಕಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದುಕೊಂಡಿದ್ದ ಕೊಡಗಿನ ಆಟಗಾರ್ತಿಯರು, ಇದೀಗ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲೂ ಮಿಂಚಲು ಸಜ್ಜಾಗಿದ್ದಾರೆ.
ದಿಶಾ ನಿಡ್ಯಮಲೆ, ಚೆಪ್ಪುಡೀರ ಮನೀಷಾ ಪೊನ್ನಮ್ಮ, ಚಂದನ ತಡಿಯಪ್ಪನ, ಪರ್ಲಿನ್ ಪೊನ್ನಮ್ಮ, ಮೋನಿಕಾ ನಾಣಯ್ಯ, ಪ್ರತೀಕ್ಷಾ, ಅಕ್ಷಿತಾ, ಗಗನ ಹಾಗೂ ಪುಣ್ಯ ಕರ್ನಾಟಕ ಜೂನಿಯರ್ ಮಹಿಳಾ ತಂಡದಲ್ಲಿ ಪ್ರಾತಿನಿಧ್ಯ ಪಡೆದಿರುವ ಕೊಡಗಿನ ಪ್ರತಿಭೆಗಳಾಗಿದ್ದಾರೆ. ವಿಶೇಷ ಎಂದರೆ ಕೊಡಗಿನ ಮನೀಶ್ ಪೂವಮ್ಮ ನಾಯಕಿ ಆಗಿದ್ದರೆ ಪ್ರತೀಕ್ಷಾ ಉಪನಾಯಕಿ ಆಗಿದ್ದಾರೆ. ಉಳಿದಂತೆ ಕರ್ನಾಟಕ ತಂಡದಲ್ಲಿ ಹರ್ಷಿತಾ, ದೀಪಿಕಾ, ನೇಹಾ, ಋಷಾಶ್ರೀ, ಲಿಪ್ಷಿಕಾ, ಮೆಹರ್, ವೈಷ್ಣವಿ ಹಾಗೂ ಪ್ರೀತಿಕಾ ಸ್ಥಾನ ಪಡೆದುಕೊಂಡಿದ್ದಾರೆ.
ಬಿ ಪೂಲ್ನಲ್ಲಿ ಇರುವ ಕರ್ನಾಟಕ ತಂಡವನ್ನು ಎ ಪೂಲ್ಗೆ ಅರ್ಹತೆ ಗಿಟ್ಟಿಸುವ ಮಹತ್ವದ ಗುರಿಯನ್ನು ಹೊಸ ಕರ್ನಾಟಕ ರಾಜ್ಯ ಜೂನಿಯರ್ ಮಹಿಳಾ ಹಾಕಿ ತಂಡ ಹೊಂದಿದೆ. ಗ್ವಾಲಿಯರ್ನಲ್ಲಿ ನಡೆದ ಆಲ್ ಇಂಡಿಯಾ ಪಂದ್ಯಾವಳಿ ಕಂಚಿನ ಪದಕ ಗೆದ್ದಿರುವ ಜೋಶ್ನಲ್ಲಿ ಇರುವ ಆಟಗಾರ್ತಿಯರು ಪುಣೆಯಲ್ಲೂ ಅದೇ ಉತ್ಸಾಹ ಮತ್ತು ಲಯದೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಲು ಕಾತುರದಿಂದ ಇದ್ದಾರೆ. ಜೂನಿಯರ್ ಭಾರತೀಯ ಹಾಕಿ ತಂಡದ ಆಯ್ಕೆ ಪ್ರಕ್ರಿಯೆಯೂ ನಡೆಯಲಿರುವುದರಿಂದ ಕರ್ನಾಟಕದ ಆಟಗಾರ್ತಿಯರ ಪಾಲಿಗೆ ಈ ಪಂದ್ಯಾವಳಿ ಮಹತ್ವದ ಚಿಮ್ಮುಹಲಗೆ ಆಗಿದೆ.
ಕೊಡಗಿನ ಕ್ರೀಡಾಪಟುಗಳು ಭಾರತೀಯ ಹಾಕಿಗೆ ನೀಡಿರುವ ಕೊಡುಗೆ ಅನನ್ಯ. ಈ ಬಾರಿಯ ಜೂನಿಯರ್ ರಾಷ್ಟ್ರೀಯ ಹಾಕಿ ಚಾಂಪಿಯನ್ಶಿಪ್ನಲ್ಲೂ ಜಿಲ್ಲೆಯ ಆಟಗಾರ್ತಿಯರು ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತರಲಿ ಎಂದು ಕ್ರೀಡಾಭಿಮಾನಿಗಳು ಹಾಗೂ ಸ್ಥಳೀಯರು ಶುಭ ಹಾರೈಸಿದ್ದಾರೆ.
ನಾವು ಉತ್ತಮ ಆಟವಾಡಿ ಫೆಬ್ರವರಿಯಲ್ಲಿ ನಡೆದ ಮಧ್ಯಪ್ರದೇಶದ ಗ್ವಾಲಿಯರ್ ಆಲ್ ಇಂಡಿಯಾ ಪಂದ್ಯದಲ್ಲಿ ನಾವು ಕಂಚಿನ ಪದಕ ಗೆದ್ದಿದ್ದೆವು. ಅದೇ ರೀತಿ ಈ ಪಂದ್ಯದಲ್ಲೂ ಉತ್ತಮ ಆಟವಾಡಲು ನಿರ್ಧರಿಸಿದ್ದೇನೆ. ಜೂನಿಯರ್ ಭಾರತ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಇರುವುದರಿಂದ ಉತ್ತಮ ಆಟವಾಡಿ ಭಾರತ ತಂಡಕ್ಕೆ ಆಯ್ಕೆ ಆಗಬೇಕೆಂಬುದು ನನ್ನ ಗುರಿ.
ಬಿ ಪೂಲ್ನಲ್ಲಿ ಇರುವ ಕರ್ನಾಟಕವನ್ನು ಎ ಪೂಲ್ಗೆ ಕ್ವಾಲಿಫೈ ಮಾಡುವುದು ಮೊದಲ ಬಾರಿಗೆ ತಂಡದ ನಾಯಕಿ ಆಗಿರುವ ನನ್ನ ಗುರಿ. ಈಗ ರಚನೆ ಆಗಿರುವ ನಮ್ಮ ತಂಡದಲ್ಲಿ ಒಳ್ಳೆಯ ಆಟಗಾರ್ತಿಯರು ಇದ್ದಾರೆ. ಎಲ್ಲರಿಂದಲೂ ಉತ್ತಮ ಆಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ನಮ್ಮ ಗುರಿ ಮುಟ್ಟುವ ವಿಶ್ವಾಸ ಇದೆ. ಚೆಪ್ಪುಡೀರ ಮನೀಷಾ ಪೊನ್ನಮ್ಮ,, ನಾಯಕಿ, ಕರ್ನಾಟಕ ರಾಜ್ಯ ಜೂನಿಯರ್ ಮಹಿಳಾ ಹಾಕಿ ತಂಡ ಚೆಪ್ಪುಡಿರ ಮನೀಷಾ ಪೊನ್ನಮ್ಮ, ಅವರು ಪೊನ್ನಂಪೇಟೆ ವಿಭಾಗದ ಟಿವಿ ಒನ್ ವರದಿಗಾರರಾದ ಚೆಪ್ಪುಡಿರ ರೋಷನ್ ಅವರ ಹಿರಿಯ ಪುತ್ರಿಯಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು