ಇತ್ತೀಚಿನ ಸುದ್ದಿ
ಜೆ ನಾರಾಯಣ ಅಂಚನ್ ನಿಧನ
10/08/2026, 11:16
ಮಂಗಳೂರು(reporterkarnataka.com):ಜಪ್ಪಿನ ಮೊಗರು ಧೂಮಹಿತ್ಲು ನಿವಾಸಿ ಜೆ ನಾರಾಯಣ ಅಂಚನ್ ರವರು ಅಲ್ಪ ಕಾಲದ ಅಸ್ವಸ್ಥತೆಯಿಂದ ಆ.10ರಂದು ನಿಧನರಾದರು.
ಜಪ್ಪಿನ ಮೊಗರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸ್ಥಾಪನೆಗೆ ಪ್ರಮುಖ ಕಾರಣಕರ್ತರಲ್ಲಿ ಒಬ್ಬರಾಗಿ. ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದವರು. ಜಪ್ಪಿನ ಮೊಗರು ಗ್ರಾಮ ಯುವಕ ಮಂಡಲದ ಪದಾಧಿಕಾರಿಯಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಜಪ್ಪಿನಮಗೂರು ಸಂಗಮ್ ಫ್ರೆಂಡ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷರಾಗಿ. ಕಂಕನಾಡಿ ಗರೋಡಿ ಬಿಲ್ಲವಾ ಸೇವಾ ಸಮಾಜದ ಅಜೀವ ಸದಸ್ಯರಾಗಿ ಜಪ್ಪಿನ ಮೊಗರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಂಚಾಲಕರಾಗಿ ಜಪ್ಪಿನಮೊಗರು ಕಾಂಗ್ರೆಸ್ ಸಮಿತಿಯ ಸಕ್ರಿಯ ಸದಸ್ಯರಾಗಿದ್ದರು ಹಾಗೂ ಅನೇಕ ದೈವಸ್ಥಾನ ದೇವಸ್ಥಾನಗಳಲ್ಲಿ ಸೇವೆಯನ್ನು ಸಲ್ಲಿಸಿದ್ದರು.












