4:42 PM Sunday28 - June 2026
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ: ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ಟ್ರೆಕ್ಕಿಂಗ್ ವೇಳೆ ದುರಂತ: ಹೃದಯಾಘಾತದಿಂದ ಚಿತ್ರ ನಿರ್ಮಾಪಕ ಭಾ ಮಾ ಹರೀಶ್ ಪುತ್ರ… ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್‌ ಖಾನ್ ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ…

ಇತ್ತೀಚಿನ ಸುದ್ದಿ

SIT | ಧರ್ಮಸ್ಥಳ ಪ್ರಕರಣ: ದೂರುದಾರನಿಂದ ಶವ ಹೂತಿಟ್ಟ 15 ಸ್ಥಳಗಳ ಮಾರ್ಕಿಂಗ್: ಪ್ರತಿ ಜಾಗಕ್ಕೆ ಇಬ್ಬರು ಗನ್ ಮ್ಯಾನ್ ಗಳ ನಿಯೋಜನೆ

28/07/2025, 20:56

ಧರ್ಮಸ್ಥಳ (reporterkarnataka.com): ಧರ್ಮಸ್ಥಳ ಗ್ರಾಮದಲ್ಲಿ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ
ಮಹಜರು ನಡೆಸಲು ಬಂದ ವಿಶೇಷ ತನಿಖಾ ತಂಡ(ಎಸ್ಐಟಿ)ಕ್ಕೆ ದೂರದಾರ ಶವಗಳನ್ನು ಹೂತಿಟ್ಟ 15 ಸ್ಥಳಗಳನ್ನು ಈಗಾಗಲೇ
ತೋರಿಸಿದ್ದು, ಎಸ್ಐಟಿ ತಂಡ ಅದನ್ನು ಮಾರ್ಕ್ ಮಾಡಿದೆ. ಈ ಜಾಗಕ್ಕೆ ಒಟ್ಟು 30 ಮಂದಿ ಶಸ್ತ್ರ ಸಜ್ಕಿತ ಕಮಾಂಡೋಗಳನ್ನು ನಿಯೋಜಿಸಿದೆ.
ದೂರುದಾರನ ಎರಡು ದಿನ ಸಮಗ್ರ ವಿಚಾರಣೆಗೊಳಪಡಿಸಿದ ಎಸ್ಐಟಿ ತಂಡ ಇಂದು ಸ್ಥಳ ಮಹಜರಿಗೆ ಧರ್ಮಸ್ಥಳಕ್ಕೆ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಕರೆ ತಂದಿತ್ತು. ಧರ್ಮಸ್ಥಳ ಸ್ನಾನಘಟ್ಟ ಬಳಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಎಸ್ಐಟಿ ತಂಡದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ಪ್ರಕ್ರಿಯೆ ಆರಂಭಿಸಿತ್ತು. ಸಂಜೆಯ ವೇಳೆಗೆ ಒಟ್ಟು 15 ಸ್ಥಳಗಳನ್ನು ದೂರುದಾರ ಎಸ್ಐಟಿ ಸಮ್ಮಖದಲ್ಲಿ ತೋರಿಸಿದ್ದು, ಅದನ್ನು ಸೀಲ್ ಮಾಡಿ ನಂಬರ್ ನೀಡಲಾಗಿದೆ.
ಮಾರ್ಕ್ ಮಾಡಲಾದ ಪ್ರತಿ ಸ್ಥಳಕ್ಕೆ ಇಬ್ಬರು ಗನ್ ಮ್ಯಾನ್ ಗಳನ್ನು ರಕ್ಷಣೆಗಾಗಿ ನಿಯೋಜಿಸಲಾಗಿದೆ. ಮಾರ್ಕ್ ಮಾಡಲಾದ ಒಟ್ಟು 15 ಸ್ಥಳಗಳಿಗೆ ಒಟ್ಟು 30 ಮಂದಿ ಎಎನ್ ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ದಟ್ಟ ಕಾಡಿನಲ್ಲಿ ಹಗಲು- ರಾತ್ರಿ ಗನ್ ಮ್ಯಾನ್ ಗಳು ಶವ ಹೂತ್ತಿಟ್ಟ ಸ್ಥಳವನ್ನು ಕಾಯಲಿದ್ದಾರೆ.
ಇಂದು ಬೆಳಗ್ಗೆ ದೂರುದಾರನ ಜತೆ ಧರ್ಮಸ್ಥಳ ನೇತ್ರಾವತಿ ಸೇತುವೆಯ ಬಳಿಯ ಕಾಡಿನೊಳಗೆ ಎಸ್ಐಟಿ ತಂಡ ಆಗಮಿಸಿತ್ತು. ದೂರದಾರನಿಗೆ ಸಂಪೂರ್ಣ ಕಪ್ಪು ಬಣ್ಣದ ವಸ್ತ್ರ ಹಾಕಿಸಿ, ಮುಖಕ್ಕೆ ಕಪ್ಪು ಬಣ್ಣದಿಂದಲೇ ಕವರ್ ಮಾಡಿಸಿ ಕರೆದು ತಂದಿದ್ದರು. ಎಸ್ ಐಟಿ ತಂಡದ ಹಿರಿಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಫೊರೆನ್ಸಿಕ್ ತಜ್ಞರು ಸಾಥ್ ನೀಡಿದ್ದರು. ಶವಗಳನ್ನು ಹೂತ ಜಾಗವನ್ನು ಗುರುತಿಸುವ ಪ್ರಕ್ರಿಯೆ ಭರದಿಂದ ನಡೆಯಿತು. ಸಂಜೆ ವೇಳೆಗೆ 15 ಸ್ಥಳಗಳನ್ನು ಮಾರ್ಕ್ ಮಾಡಲಾಯಿತು.


ಕಳೆದ ಎರಡು ದಿನಗಳಿಂದ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಐಬಿಯಲ್ಲಿ ಎಸ್ಐಟಿ ತಂಡದಿಂದ ದೂರುದಾರನ ವಿಚಾರಣೆ ನಡೆಸಿತ್ತು. ಮೊದಲ ದಿನ ಐಪಿಎಸ್ ಅಧಿಕಾರಿ ಅನುಚೇತ್ ಅವರು ವಿಚಾರಣೆ ನಡೆಸಿದ್ದರು. ಎರಡನೇ ದಿನ ಎಸ್ ಐಟಿ ತಂಡದ ಮುಖ್ಯಸ್ಥ ಪ್ರಣವ್ ಮೊಹಂತಿಯವರೇ ಮಂಗಳೂರಿಗೆ ಆಗಮಿಸಿ ವಿಚಾರಣೆ ಕೈಗೆತ್ತಿಕೊಂಡಿದ್ದರು. ಮೊದಲ ದಿನವೇ ದೂರುದಾರ ಸ್ಫೋಟಕ ಮಾಹಿತಿಯನ್ನು ನೀಡಿದ ಹಿನ್ನೆಲೆಯಲ್ಲಿ ಎರಡನೇ ದಿನವಾದ ನಿನ್ನೆ ಸ್ವತಃ ಟೀಮ್ ಮುಖ್ಯಸ್ಥ ಮೊಹಂತಿ ಆಗಮಿಸಿದ್ದರು ಎನ್ನಲಾಗಿದೆ. ಇದಕ್ಕೆಲ್ಲ ಪುಷ್ಠಿ ನೀಡುವಂತೆ ಮಾರ್ಕಿಂಗ್ ಕೆಲಸ ಇಂದು ಆರಂಭವಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು