ಇತ್ತೀಚಿನ ಸುದ್ದಿ
ಫಿಜಾ ಬೈ ನೆಕ್ಸಸ್ ನಲ್ಲಿ ನಾಳೆಯಿಂದ ದಸರಾ ನವೋತ್ಸವ: ಸೀಸನ್ 4; ಹತ್ತು ದಿನಗಳ ಭವ್ಯ ಉತ್ಸವ
10/10/2026, 14:41
ಮಂಗಳೂರು(reporterkarnataka.com):ಕರಾವಳಿಯ ಪ್ರಮುಖ ಶಾಪಿಂಗ್ ತಾಣ ಫಿಜಾ ಬೈ ನೆಕ್ಸಸ್, ದಸರಾ ಹಬ್ಬದ ಸಡಗರವನ್ನು ಸ್ವಾಗತಿಸಲು ದಸರಾ ನವೋತ್ಸವದೊಂದಿಗೆ ಸಂಪೂರ್ಣ ಸಜ್ಜಾಗಿದೆ. ಅಕ್ಟೋಬರ್ 11ರಿಂದ 20 ರವರೆಗೆ ನಡೆಯಲಿರುವ ಈ 10 ದಿನಗಳ ಭವ್ಯ ಉತ್ಸವವು ಆಕರ್ಷಕ ಹಬ್ಬದ ಅಲಂಕಾರ, ಸಾಂಪ್ರದಾಯಿಕ ಕಲಾಪ್ರದರ್ಶನಗಳು, ಸಂಗೀತ, ನೃತ್ಯ ಹಾಗೂ ತುಳುನಾಡಿನ ಸಾಂಸ್ಕೃತಿಕ ರಸದೌತಣವನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಲಿದೆ.
ಕುಟುಂಬ ಸಮೇತ ಬರುವ ಗ್ರಾಹಕರು ಹಾಗೂ ಸಂದರ್ಶಕರಿಗೆ ಹಬ್ಬದ ಅಪೂರ್ವ ಅನುಭವ ನೀಡುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಉತ್ಸವವು, ಫಿಜಾ ಬೈ ನೆಕ್ಸಸ್ ಮಾಲ್ ಅನ್ನು ಕರಾವಳಿ ಕರ್ನಾಟಕದ ಸಮೃದ್ಧ ಸಂಸ್ಕೃತಿ ಮತ್ತು ಮನರಂಜನೆಯನ್ನು ಬಿಂಬಿಸುವ ರೋಮಾಂಚಕ ಸಾಂಸ್ಕೃತಿಕ ತಾಣವನ್ನಾಗಿ ಪರಿವರ್ತಿಸಲಿದೆ.
ಈ 10 ದಿನಗಳ ಉತ್ಸವದಲ್ಲಿ ತುಳು ಸಂಗೀತ, ಶಾಸ್ತ್ರೀಯ ನೃತ್ಯ, ಹಾಸ್ಯ ನಾಟಕಗಳು ಮತ್ತು ಸಾಂಪ್ರದಾಯಿಕ ಜಾನಪದ ಕಲಾಪ್ರದರ್ಶನಗಳು ಮೇಳೈಸಲಿದ್ದು, ಪ್ರತಿದಿನವೂ ಸಂದರ್ಶಕರಿಗೆ ವಿಭಿನ್ನ ಮನರಂಜನೆಯನ್ನು ನೀಡಲಿವೆ:
ತುಳು ಮ್ಯೂಸಿಕ್ ನೈಟ್ – 11 ಅಕ್ಟೋಬರ್ | ರಾತ್ರಿ 9:00 ರಿಂದ
ಕಥೆ ಎಡ್ಡೆ ಉಂಡು ತುಳು ನಾಟಕ – 12 ಅಕ್ಟೋಬರ್ | ಸಂಜೆ 5:00 ರಿಂದ
ಅರೆಹೊಳೆ ಪ್ರತಿಷ್ಠಾನದಿಂದ ನೃತ್ಯ ವೈಭವ – 13 ಅಕ್ಟೋಬರ್ | ಸಂಜೆ 5:00 ರಿಂದ
ರೆಮೋನಾ ಮತ್ತು ತಂಡದಿಂದ ಭರತನಾಟ್ಯ ಜುಗಲ್‌ಬಂದಿ – 14 ಅಕ್ಟೋಬರ್ | ಸಂಜೆ 5:00 ರಿಂದ
ಕಿನ್ನಿ ಪಿಲಿ ವೇಷ – 15 ಅಕ್ಟೋಬರ್ | ಮಧ್ಯಾಹ್ನ 2:00 ರಿಂದ
ತಾಲ್ ತರಂಗ್ – 16 ಅಕ್ಟೋಬರ್ | ಸಂಜೆ 5:00 ರಿಂದ
ಯಾನೊರಿ ಬರೋಲಿಯಾ ತುಳು ಹಾಸ್ಯ ನಾಟಕ – 17 ಅಕ್ಟೋಬರ್ | ಸಂಜೆ 5:00 ರಿಂದ
ಶಾರದಾ ಕಲಾ ಸೌರಭ – 18 ಅಕ್ಟೋಬರ್ | ಸಂಜೆ 5:00 ರಿಂದ
ಎಂಚಿ ವೇಷ (ಪುಟ್ಟ ಮಕ್ಕಳಿಗೆ ಮುದ್ದಾದ ಹಬ್ಬದ ವೇಷಭೂಷಣ ಸ್ಪರ್ಧೆ) – 19 ಅಕ್ಟೋಬರ್ | ಮಧ್ಯಾಹ್ನ 2:00 ರಿಂದ
ಪಿಲಿ ನಲಿಕೆ (ಹುಲಿ ವೇಷ ನೃತ್ಯ) – 20 ಅಕ್ಟೋಬರ್ | ಮಧ್ಯಾಹ್ನ 2:00 ರಿಂದ
ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಮಾಲ್‌ನಾದ್ಯಂತ ದಸರಾ ಥೀಮ್‌ನ ಆಕರ್ಷಕ ಮತ್ತು ವರ್ಣರಂಜಿತ ಅಲಂಕಾರಗಳನ್ನು ಮಾಡಲಾಗಿದ್ದು, ಸಂದರ್ಶಕರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯಲು ಹಾಗೂ ಸ್ಮರಣೀಯ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ಸುಂದರ ವಾತಾವರಣವನ್ನು ನಿರ್ಮಿಸಲಾಗಿದೆ.












