10:11 PM Tuesday29 - September 2026
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಸಿದ್ದರಾಮಯ್ಯ!: ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಕೊಟ್ಟ ಮಾಜಿ ಸಿಎಂ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ…

ಇತ್ತೀಚಿನ ಸುದ್ದಿ

ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು

29/09/2026, 21:53

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಒಂದು ತಿಂಗಳ ಹಿಂದಷ್ಟೇ ಮದುವೆ ನಿಶ್ಚಿತಾರ್ಥವಾಗಿದ್ದ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನ 25 ವರ್ಷದ ಅಭಿಷೇಕ್ ಎಂದು ಗುರುತಿಸಲಾಗಿದೆ. ಮೃತ ಅಭಿಷೇಕ್ ಗೆ ಕಳೆದ ತಿಂಗಳಷ್ಟೆ ಮದುವೆ ನಿಶ್ಚಯವಾಗಿದ್ದು ಮುಂದಿನ ತಿಂಗಳು 25ಕ್ಕೆ ಮದುವೆ ದಿನಾಂಕ ಕೂಡ ನಿಗದಿಯಾಗಿತ್ತು. ಎರಡೂ ಮನೆಯವರು ಮದುವೆ ಸಂಭ್ರಮದಲ್ಲಿ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ರೆ ಅಭಿಷೇಕ್ 4 ದಿನದ ಹಿಂದೆ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ಕೂಡಲೇ ಆತನನ್ನ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿತ್ತು. ಆದರೆ, ನಾಲ್ಕು ದಿನದ ನಿರಂತರ ಚಿಕಿತ್ಸೆ ಬಳಿಕವೂ ಆತ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ತಿಂಗಳಲ್ಲಿ ಮದುವೆ ಇದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ಅಭಿಷೇಕ್ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಎದೆಮಟ್ಟದ ಮಗನನ್ನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಅತ್ತ ಹುಡುಗಿ ಮನೆಯವರು ಕೂಡ ಮಗಳ ಸ್ಥಿತಿ ನೋಡಿ ಮಮ್ಮುಲು ಮರುಗಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು