11:05 PM Sunday22 - November 2026
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ | ಮುತ್ತಿಗೆಪುರ ಗ್ರಾಮದ ವಿಂಧನ್ ಮನೆ ಮೇಲೆ ಗುಂಡಿನ ದಾಳಿ: ಕೂದಲೆಳೆಯ… ಆಫ್ರಿಕಾದ ಕಾಂಗೋದಲ್ಲಿ 95 ಕನ್ನಡಿಗರ ಬಂಧನ: ಶಿವಮೊಗ್ಗ, ದಾವಣಗೆರೆಯ ಹಕ್ಕಿಪಿಕ್ಕಿ ಸಮುದಾಯ ಏಜೆಂಟರ… ಚಿಕ್ಕಮಗಳೂರು | ಬಸವ ಮಂಟಪ ಪುಸ್ತಕದ ವಿವಾದ: ಬಾಳೆಹೊನ್ನೂರಿನ ರಂಭಾಪುರಿ ಪೀಠ ಖಂಡನೆ ಕರ್ನಾಟಕದಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗೆ ಗ್ರೀನ್ ಸಿಗ್ನಲ್: ರಾಜ್ಯ ಸರ್ಕಾರದ ಮೇಲ್ಮನವಿ‌ ವಜಾಗೊಳಿಸಿದ… ಕಾವೇರಿ ನದಿ ನೀರು ಹಂಚಿಕೆ | ಕರ್ನಾಟಕಕ್ಕೆ ಬಿಗ್ ರಿಲೀಫ್: ತಮಿಳನಾಡು 2… ತಲಕಾವೇರಿ ಅನ್ನದಾನ ಮಹಾಯಜ್ಞ ಸಂಪನ್ನ: ಕೊಡಗು ಏಕೀಕರಣ ರಂಗದ ವತಿಯಿಂದ ಒಂದು ತಿಂಗಳ… ಸಿನಿಮಾ ನಟರನ್ನು ನೋಡಿ ಸಿಗರೇಟ್ ಸೇದಬೇಡಿ, ಐಸಿಯು ಸೇರುವ ಪರಿಸ್ಥಿತಿ ಬರಬಹುದು: ಆರೋಗ್ಯ… ಉತ್ತರಾಖಂಡ | ಸುಮಾರು 100 ಮೀಟರ್‌ ಆಳದ ಕಂದಕಕ್ಕೆ ಉರುಳಿದ ಬಸ್: 8… ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯ ಹೈಕಮಾಂಡ್ ತೀರ್ಮಾನಿಸಲಿದೆ: ಸಿಎಂ ಡಿ. ಕೆ. ಶಿವಕುಮಾರ್ ತಿಪಟೂರು | ಕೆಎಸ್​ಆರ್​ಟಿಸಿ ಬಸ್ ರೂಪದಲ್ಲಿ ಬಂದ ಮೃತ್ಯು: ಭೀಕರ ಅಪಘಾತದಲ್ಲಿ ಯುವಕರಿಬ್ಬರು…

ಇತ್ತೀಚಿನ ಸುದ್ದಿ

ಚಾರ್ಮಾಡಿ ಘಾಟ್‌ನಲ್ಲಿ ಭೀಕರ ಅಪಘಾತ: ಎಂಜಿನಿಯರಿಂಗ್ ವಿದ್ಯಾರ್ಥಿ ದುರ್ಮರಣ; ಇನ್ನೊಬ್ಬ ಪಾರು

22/11/2026, 23:00

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟ್‌ನ ಅಲೆಖಾನ್ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ 24 ವರ್ಷದ ಯುವಕ ಚಿರಾಗ್ ಮೃತಪಟ್ಟಿದ್ದಾನೆ. ಇನ್ನೊರ್ವ ಯಶಸ್ ಪ್ರಾಣಪಾಯದಿಂದ ಪಾರು, ಇಬ್ಬರು ಕಾಲೇಜಿನ ಸ್ನೇಹಿತರು.


ಬೆಂಗಳೂರಿನಿಂದ ಚಾರ್ಮಾಡಿ ಘಾಟ್‌ನ ಪ್ರಕೃತಿ ಸೌಂದರ್ಯ ಹಾಗೂ ವ್ಯೂ ಪಾಯಿಂಟ್ ವೀಕ್ಷಿಸಲು ಬಂದಿದ್ದ ಇಬ್ಬರು ಯುವಕರು ಬೈಕ್‌ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಮುಂದೆ ಸಾಗುತ್ತಿದ್ದ ವಾಹನವನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದಾಗ ಬೈಕ್ ಚಾರ್ಮಾಡಿ ಘಾಟ್‌ನ ತಡೆಗೋಡೆಗೆ ತಾಗಿದೆ ಎನ್ನಲಾಗಿದೆ. ಪರಿಣಾಮ ಬೈಕ್‌ನ ಹಿಂಬದಿ ಕುಳಿತಿದ್ದ ಯುವಕ ರಸ್ತೆಗೆ ಎಸೆಯಲ್ಪಟ್ಟು ಬಿದ್ದಿದ್ದಾನೆ.
ಇದೇ ಸಂದರ್ಭದಲ್ಲಿ ಕಡೂರಿನಿಂದ ಧರ್ಮಸ್ಥಳದ ಚಲಿಸುತಿದ್ದ ಬಸ್‌ನ ಹಿಂಬದಿ ಚಕ್ರ ರಸ್ತೆಗೆ ಬಿದ್ದಿದ್ದ ಯುವಕನ ತಲೆಯ ಮೇಲೆ ಹರಿದಿದೆ. ಪರಿಣಾಮ ಹೆಲ್ಮೆಟ್ ಸಮೇತ ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು