4:09 PM Friday9 - October 2026
ಬ್ರೇಕಿಂಗ್ ನ್ಯೂಸ್
ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ

ಇತ್ತೀಚಿನ ಸುದ್ದಿ

ದೇರೆಬೈಲ್ ಚರ್ಚ್‌ನ ದಫನ ಭೂಮಿಯಿಂದ ಮೃತದೇಹ ಹೊರತೆಗೆದ ಪೊಲೀಸರು: FSL ತನಿಖೆಗೆ ಹೈದರಾಬಾದ್‌ಗೆ ರವಾನೆ?

09/10/2026, 16:09

ಮಂಗಳೂರು(reporterkarnataka.com): ನಗರದ ದೇರೆಬೈಲ್ ಚರ್ಚ್‌ನ ದಫನ ಭೂಮಿಯಿಂದ ಮೃತರ ದೇಹ ಹೊರತೆಗೆದ ಉರ್ವ ಪೊಲೀಸರು, ವಿಧಿ ವಿಜ್ಞಾನ ಪರೀಕ್ಷೆ(FSL) ತನಿಖೆಗೆ ಹೈದರಾಬಾದ್‌ಗೆ ರವಾನಿಸಲು ಸಿದ್ಧತೆ ನಡೆಸಿದ್ದಾರೆ.

*ಸಾವಿನ ಬಗ್ಗೆ ಅನುಮಾನ ಬರಲು ಕಾರಣವೇನು?*
ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿಯಾಗಿದ್ದ ಆಲ್ಬರ್ಟ್ ರೇಗೋ ಅವರು ಕಳೆದ ಜುಲೈ 19ರಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಆಲ್ಬರ್ಟ್ ಅವರಿಗೆ ನಾಲ್ವರು ಮಕ್ಕಳಿದ್ದು, ಅವರಿಗಾಗಿ ಸಾಕಷ್ಟು ಆಸ್ತಿಪಾಸ್ತಿ ಮಾಡಿ ಇಟ್ಟಿದ್ದರು. ಅವರ ಪೈಕಿ ಇಬ್ಬರು ಮಕ್ಕಳು ಪ್ರಸ್ತುತ ದುಬೈನಲ್ಲಿ ನೆಲೆಸಿದ್ದರೆ, ಆಲ್ಬರ್ಟ್ ಅವರು ತಮ್ಮ ಮಗಳು ಮಾಯಾ ರೇಗೂ ಜೊತೆ ಮಂಗಳೂರಿನ ತನ್ನ ಮನೆಯಲ್ಲೇ ವಾಸಿಸುತ್ತಿದ್ದರು. ಆಲ್ಬರ್ಟ್ ರೇಗೋ ಮೃತಪಟ್ಟಾಗ ಮಗಳು ಮಾಯಾ ರೇಗೂ ಸಂಬಂಧಿಕರಿಗಾಗಲಿ ಇಲ್ಲವೇ ನೆರೆಹೊರೆಯವರಿಗಾಗಲಿ ಯಾವುದೇ ಮಾಹಿತಿ ನೀಡದೆ ಮೃತದೇಹವನ್ನು ಕ್ರೈಸ್ತ ಸಮುದಾಯದಂತೆ ದೇರೆಬೈಲ್ ಚರ್ಚ್‌ನಲ್ಲಿ ದಫನ ಮಾಡಿದ್ದಳು.

*ಮಗಳ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳು*
ಆಲ್ಬರ್ಟ್ ರೇಗೋ ಅವರ ಸಾವಿನ ಕುರಿತು, ಮಗಳ ಇತ್ತೀಚಿನ ನಡವಳಿಕೆಯ ಬಗ್ಗೆ ಸಂಶಯಗೊಂಡ ಆಲ್ಬರ್ಟ್ ಅವರ ಆಪ್ತ ಸ್ನೇಹಿತರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಾತ್ರವಲ್ಲ ತಾನು ಮಾಡಿದ ತಪ್ಪು ಹೊರಬರುವ ಲಕ್ಷಣ ಕಾಣಿಸಿದಾಗ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದಳು. ಅದೇ ಮಾತ್ರೆ ಆಲ್ಬರ್ಟ್ ನೀಡಿರಬಹುದು ಎಂಬ ಅನುಮಾನ ಮೂಡಿದ್ದು, ಕುಟುಂಬದ ಸ್ನೇಹಿತ ಹೆರಾಲ್ಡ್ ಪೆರೇರಾ ಅವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಮಾಯಾ ರೇಗೂ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಜೈ ಆನೆಗುಡ್ಡೆಯ ನಿವಾಸಿ ಮಾನವ ಹಕ್ಕುಗಳ ಕಾರ್ಯಕರ್ತ ಅಜಯ್ ಕ್ರಿಸ್ಟೋಫರ್ ಡಿ’ಸಿಲ್ವಾ, ಹೆರಾಲ್ಡ್ ಪೆರೇರಾ ಈ ಪ್ರಕರಣ ಮುನ್ನಲೆಗೆ ತಂದಿದ್ದಾರೆ.ದೂರಿನಲ್ಲಿ ವ್ಯಕ್ತವಾಗಿರುವ ಪ್ರಮುಖ ಆರೋಪಗಳು:
ಆಲ್ಬರ್ಟ್ ಅವರು ಸಾವಿಗೂ ಮುನ್ನ ತಮ್ಮ ನಾಲ್ಕು ಮಕ್ಕಳಿಗೆ ಸಮನಾಗಿ ಆಸ್ತಿಯನ್ನು ಹಂಚಿ ವಿಲ್ ಮಾಡಿಸಿದ್ದರು. ಆದರೆ ಅದನ್ನು ಹರಿದು ಹಾಕಿ ತಂದೆ ಸಾವನ್ನಪ್ಪುವ ಮುನ್ನ ಅವರ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಳ್ಳಲು ಮಾಯಾ ಬಲವಂತವಾಗಿ ವಿಲ್ ಬರೆಸಿಕೊಂಡಿದ್ದಾಳೆ. ಅದಕ್ಕಾಗಿ ಮಾನಸಿಕ ದೈಹಿಕ ಹಿಂಸೆ ನೀಡಿದ್ದಾಳೆ. ಆಸ್ತಿ ಸಂಪೂರ್ಣ ತನಗೇ ಬರುವಂತೆ ತನ್ನ ಬಾಯ್‌ಫ್ರೆಂಡ್ ಜೊತೆಗೂಡಿ ತಂದೆಯನ್ನೇ ಕೊಂದಿರುವ ಬಲವಾದ ಶಂಕೆ ಇದೆ ಎಂದು ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ತಂದೆ ಅಸ್ವಸ್ಥಗೊಂಡಾಗ ಮನೆಗಿಂತ ಕೇವಲ 500 ಮೀಟರ್ ಅಂತರದ ಸಮೀಪದಲ್ಲಿ ದೊಡ್ಡ ಆಸ್ಪತ್ರೆಯಿದ್ದರೂ, ಅಲ್ಲಿಗೆ ಕರೆದೊಯ್ಯದೆ ಸುಮಾರು 4 ರಿಂದ 5 ಕಿಲೋಮೀಟರ್ ದೂರದಲ್ಲಿದ್ದ ಬೊಂದೇಲ್‌ನ ಖಾಸಗಿ ವೈದ್ಯರ ಬಳಿ ಕರೆದೊಯ್ದು ಸಾವು ಖಚಿತಪಡಿಸಿಕೊಂಡಿದ್ದಾಳೆ. ತಂದೆಯ ಮರಣದ ಬಳಿಕ ಸ್ಥಳೀಯ ಕೆಲ ಪೊಲೀಸರ ಪ್ರಭಾವ ಬಳಸಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗಿದೆ ಎಂಬ ಗಂಭೀರ ಆರೋಪವಿದೆ.

ಮರುತನಿಖೆ ಮತ್ತು ಎಫ್‌ಎಸ್‌ಎಲ್ ಪರೀಕ್ಷೆ

ಇತ್ತೀಚಿನ ಸುದ್ದಿ

ಜಾಹೀರಾತು