ಇತ್ತೀಚಿನ ಸುದ್ದಿ
ಮಂಗಳೂರು | ಎಜೆ ಕಾಲೇಜಿನ ತೃತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಂದ 4 ದಿನದಲ್ಲಿ ರೋಬೋಟಿಕ್ ತಯಾರಿ!
10/10/2026, 22:28
ಮಂಗಳೂರು(reporterkarnataka.com): ಸಿಂಗ್ಯುಲರಿಟಿ 24 ಗಂಟೆಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಗಾಗಿ ಎಜೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ತೃತೀಯ ವರ್ಷದ ಇಂಜಿನಿಯರ್ ವಿದ್ಯಾರ್ಥಿಗಳಿಂದ ಚಲಿಸುವ ಹಾಗೂ ಮಾತನಾಡುವ ಈವ ಎಂಬ ಹೆಸರಿನ ರೋಬೋಟ್ ನಾಲ್ಕು ದಿನದಲ್ಲಿ ತಯಾರಿಸಿದ್ದಾರೆ.ಆಶಿಶ್ ಎಂ. ರಾವ್, ವಿಖ್ಯಾತ್, ಶಮನ್ ಕೃಷ್ಣ,ಸೂರಜ್, ವಿನಯ್,ಜತಿನ್ ಈ ವಿದ್ಯಾರ್ಥಿಗಳಾಗಿದ್ದಾರೆ.


ಕಾರ್ಯಕ್ರಮದಲ್ಲಿ ಜುವೆಗೋ ಸ್ಟುಡಿಯೋ ಉಪಾಧ್ಯಕ್ಷ ಅಭಿಜಿತ್ ಶೆಟ್ಟಿ, ಕ್ಯಾಂಪಸ್ ನಿರ್ದೇಶಕ ಡಾ.ಜಯಪ್ರಕಾಶ್ ರಾವ್, ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಟಿ.,ಉಪ ಪ್ರಾಂಶುಪಾಲ ಹಾಗೂ ಸಂಚಾಲಕ ಡಾ. ಆಂಟನಿ, ಪಿಜೆ ಪ್ರೊಫೆಸರ್ ಶಾರನ್ ಸಿ. ಡಿಸೋಜಾ ಹಾಗೂ ಮುಖ್ಯಸ್ಥರು ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.












