ಇತ್ತೀಚಿನ ಸುದ್ದಿ
ಪುತ್ತೂರು: ಮಲ್ಲಿಗೆ ಕೃಷಿ ನಿರ್ವಹಣೆ ಮತ್ತು ಮಾರುಕಟ್ಟೆ ವಿಷಯದಲ್ಲಿ ತರಬೇತಿ
14/06/2026, 17:24
ಪುತ್ತೂರು(reporterkarnataka.com): ಮುಳಿಯ ಮ್ಯಾನ್ಜೆಡ್ ಫಾರ್ಮ್ ಲ್ಯಾಂಡ್ ವತಿಯಿಂದ ಸಮಗ್ರ ಮಲ್ಲಿಗೆ ಕೃಷಿ ತರಬೇತಿ ಹಿಂದೂ ಎಕನಾಮಿಕ್ ಫೋರಂ ಮತ್ತು ಮುಳಿಯ ಮ್ಯಾನೇಜ್ಡ್ ಫಾರ್ಮ ಲ್ಯಾಂಡ್ ವತಿಯಿಂದ ಜೂನ್ 14ರಂದು ಸಮಗ್ರ ಮಲ್ಲಿಗೆ ಕೃಷಿ ನಿರ್ವಹಣೆ ಮತ್ತು ಮಾರುಕಟ್ಟೆ ವಿಷಯದಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಹಿಂದೂ ಎಕನಾಮಿಕ್ ಫೋರಂ ನ ಪುತ್ತೂರು ಘಟಕದ ಅಧ್ಯಕ್ಷ ಮೋಹನ ಕೆ. ಅವರು ವಹಿಸಿದರು. ಪ್ರಾಸ್ತಾವಿಕ,ಕಾರ್ಯಕ್ರಮದ ಉದ್ದೇಶ ಮತ್ತು ಸ್ವಾಗತವನ್ನು ಹಿಂದೂ ಎಕನಾಮಿಕ್ ಅಧ್ಯಕ್ಷರಾದ ಮೋಹನ ಕೆ. ಅವರು ನೆರವೇರಿಸಿದರು. ಉದ್ಘಾಟನೆಯನ್ನು ಮಲ್ಲಿಗೆ ಕೃಷಿ ತರಬೇತಿಯ ಸಂಪನ್ಮೂಲ ವ್ಯಕ್ತಿಯಾದ ಶ್ರೀ ರಾಮಕೃಷ್ಣ ಶರ್ಮ ಶಂಕರಪುರ ಅವರು ನೆರವೇರಿಸಿದರು. ಮುಖ್ಯ ಅತಿಥಿಯಾದ ಕೃಷ್ಣವೇಣಿ ಮುಳಿಯ ಅವರು ಕಾರ್ಯಕ್ರಮದ ಉದ್ದೇಶ ಮತ್ತು ಸ್ವಾವಲಂಬಿ ಜೀವನಕ್ಕೆ ಮಲ್ಲಿಗೆ ಕೃಷಿ ಹೇಗೆ ಉಪಯೋಗ ಆಗಬಹುದು ಮತ್ತು ಹಿಂದೂ ಎಕನಾಮಿಕ್ ಫಾರಂನ ಮಹಿಳಾ ಘಟಕದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಎಲ್ಲರಿಗೆ ಶುಭವನ್ನು ಕೋರಿದರು.

ಹಿಂದೂ ಎಕನಾಮಿಕ್ ಫೋರಂನ ಸ್ಥಾಪಕಾಧ್ಯಕ್ಷ ಕೃಷ್ಣ ಮೋಹನ್ ಅವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ವೇದಿಕೆಯಲ್ಲಿ ಹಿಂದೂ ಎಕನಾಮಿಕ್ ಫೋರಂ ನ ಮಹಿಳಾ ಘಟಕದ ಉಪಾಧ್ಯಕ್ಷೆ ಉಮಾ ಡಿ. ಪ್ರಸನ್ನ, ಮಹಿಳಾ ಘಟಕದ ಕಾರ್ಯದರ್ಶಿ ಆಶಾ ಮುತ್ಲಾಜೆ, ಹಿಂದೂ ಎಕನಾಮಿಕ್ ಫೋರಂ ನ ಕಾರ್ಯದರ್ಶಿ ಅನೂಪ್ ಕೆ. ಜೆ. ಉಪಸ್ಥಿತರಿದ್ದರು. ಸುಮಾರು 120 ಜನ ಅಭ್ಯರ್ಥಿಗಳು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯದರ್ಶಿ ಅನೂಪ್ ಕೆ. ಜೆ. ಅವರು ಧನ್ಯವಾದ ಸಮರ್ಪಣೆ ನೆರವೇರಿಸಿದರು.












