3:32 AM Friday31 - July 2026
ಬ್ರೇಕಿಂಗ್ ನ್ಯೂಸ್
ಕಾವೇರಿ ನೀರು ಹಂಚಿಕೆ ವಿವಾದ | ಕಾನೂನು ತಜ್ಞರು, ಪ್ರತಿಪಕ್ಷಗಳ ಸಲಹೆ ಬಳಿಕ… ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157… ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ… Bangalore | ಅಗ್ನಿ ದುರಂತ: ಚಂದಾಪುರದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು ಭಾರತದ ಇತಿಹಾಸದಲ್ಲೇ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆದಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ… ನೀಟ್ ಪ್ರತಿಭಟನೆ | ಹೋರಾಟಗಾರರಿಗೆ ಉಚಿತ ಆಹಾರ ಹಂಚಿದವನ ಬಂಧನ; ನನ್ನನ್ನು ಅಪಹರಿಸಿದ್ದರು:…

ಇತ್ತೀಚಿನ ಸುದ್ದಿ

Mangaluru | ಪಾಲ್ದನೆ ಚರ್ಚ್: ಸೇಕ್ರೆಡ್ ಹಾರ್ಟ್ ವಾರ್ಡಿನ ವಾರ್ಷಿಕೋತ್ಸವ

13/06/2026, 13:16

ಮಂಗಳೂರು(reporterkarnataka.com): ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಸೇಕ್ರೆಡ್ ಹಾರ್ಟ್ ವಾರ್ಡಿನ ವಾರ್ಷಿಕೋತ್ಸವವನ್ನು ಅನಿಲ್ ಮತ್ತು ಮರ್ಲಿನ್ ಅವರ ಮನೆಯ ಸಭಾಂಗಣದಲ್ಲಿ ಬಲಿ ಪೂಜೆಯೊಂದಿಗೆ ಆಚರಿಸಲಾಯಿತು.
ಅಶಕ್ತ ಹಾಗೂ ನಡೆಯಲು ಸಾಧ್ಯವಾಗದ ಸದಸ್ಯರೊಬ್ಬರಿಗಾಗಿ ಈ ಬಲಿ ಪೂಜೆಯನ್ನು ಏರ್ಪಡಿಸಲಾಗಿತ್ತು.
ಚರ್ಚ್ ನ ಪ್ರಧಾನ ಧರ್ಮಗುರು ಹಾಗೂ ಸಿಟಿ ವಲಯದ ವಿಗಾರ್ ವಾರ್ ವಂದನೀಯ ಫಾ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಬಲಿ ಪೂಜೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ಅತಿಥಿಯಾಗಿ ಆಗಮಿಸಿದ್ದ ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಅವರು ಮಾತನಾಡಿ ವಾರ್ಡಿನಲ್ಲಿ ಸರ್ವರ ಸಹಕಾರದಿಂದ ಕೆಲಸ ಕಾರ್ಯಗಳು ನಡೆಯುತ್ತವೆ. ಎಲ್ಲಾ ಸದಸ್ಯರು ಒಗ್ಗೂಡಿ ವಾರ್ಡಿನ ಮುಖ್ಯಸ್ಥರಿಗೆ ಸಹಕರಿಸುತ್ತಿದ್ದಾರೆ. ವಾರ್ಡಿನ ಪ್ರತಿಭೆಗಳು ಬೆಳಕಿಗೆ ಬರುವಲ್ಲಿ ಇಂತಹ ವಾರ್ಷಿಕೋತ್ಸವ ಕಾರ್ಯಕ್ರಮಗಳು ನೆರವಾಗುತ್ತವೆ ಎಂದು ಹೇಳಿದರು.
ಚರ್ಚ್ ನ ಧರ್ಮಗುರು ವಂದನೀಯ ಫಾ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಮಾತನಾಡಿ ವಾರ್ಡಿನ ಬೆಳವಣಿಗೆ, ಶಿಸ್ತು ಮತ್ತು ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯದರ್ಶಿ ರೋಷನ್ ಮೊಂತೇರೊ , ಸರ್ವ ಆಯೋಗಗಳ ಸಂಯೋಜಕ ವಿಲಿಯಂ ಲೋಬೊ ಅವರು ಶುಭಾಶಯ ಸಲ್ಲಿಸಿದರು.
ವಾರ್ಡಿನ ಮುಖ್ಯಸ್ಥರಾದ ಮೋಲಿ ರೊಡ್ರಿಗಸ್ ಸ್ವಾಗತಿಸಿದರು. ಪ್ರತಿನಿಧಿಗಳಾದ ರಿಚಾರ್ಡ್ ಮಾರ್ಟಿಸ್, ಸಬಿನಾ ಮಿನೇಜಸ್, ಜೊಸ್ಸಿ ಕುಟಿನೊ ಉಪಸ್ಥಿತರಿದ್ದರು. ಲವೀನಾ ಸೆರಾವೊ ಕಾರ್ಯಕ್ರಮ ನಿರ್ವಹಿಸಿ ಸ್ವೀನಿ ರೊಡ್ರಿಗಸ್ ವಂದಿಸಿದರು. ಸಹ ಭೋಜನ ದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

ಇತ್ತೀಚಿನ ಸುದ್ದಿ

ಜಾಹೀರಾತು