12:26 PM Thursday11 - June 2026
ಬ್ರೇಕಿಂಗ್ ನ್ಯೂಸ್
15 ಸಾವಿರ ಲಂಚ ಸ್ವೀಕಾರ: ಮೂಡಿಗೆರೆ ಸರ್ವೇ ಇಲಾಖೆ ಮಹಿಳಾ ಸಿಬ್ಬಂದಿ ಸುಮಾ… ಹಾಸನ | ಸಕಲೇಶಪುರ ಬಳಿ ಕರುಗಳ ಬೆನ್ನಟ್ಟಿದ ಕಾಡಾನೆ ಮರಿ ಚಿಕ್ಕಮಗಳೂರು: ಗುಂಡು ಹಾರಿಸಿಕೊಂಡು ಗೃಹಿಣಿ ಅನುಮಾನಾಸ್ಪದ ಸಾವು ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕೆ ಸೀಮಿತವಾಗಿಲ್ಲ:… ಮೋದಿ ಸರ್ಕಾರದ 12 ವರ್ಷಗಳ ಕಥೆಯಲ್ಲಿ ವೈಫಲ್ಯಗಳ ಪಟ್ಟಿಯದ್ದೇ ಕಾರುಬಾರು: ಗೃಹ ಸಚಿವ… ಸಿಎಂ ಕಾನೂನು ಸಲಹೆಗಾರ ಸ್ಥಾನಕ್ಕೆ ಎ. ಎಸ್. ಪೊನ್ನಣ್ಣ ರಾಜೀನಾಮೆ: ಸಚಿವ ಸ್ಥಾನ… Kodagu | ನಾಪೋಕ್ಲು: ಕಾರು – ಬೈಕ್ ಅಪಘಾತ- ಸವಾರ ಸ್ಥಳದಲ್ಲೇ ಸಾವು Bangalore | ನೌಕರಿ ಕೊಡಿಸುವುದಾಗಿ 40 ಮಂದಿಗೆ 5.3 ಕೋಟಿ ವಂಚನೆ: ಅಪ್ಪ… ಶಕ್ತಿ ಯೋಜನೆಯಿಂದ ವ್ಯಾಪಾರ ನಷ್ಟ, ಸಾಲಗಾರರ ಕಾಟ: ಮಂಡ್ಯದಲ್ಲಿ ಪತ್ನಿ, ಮಗನನ್ನು ಕೊಂದು… ರಾಜ್ಯಸಭೆ ಚುನಾವಣೆ: ರಾಜ್ಯದಿಂದ ಕಾಂಗ್ರೆಸ್ಸಿನ ಮೂವರು, ಓರ್ವ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ

ಇತ್ತೀಚಿನ ಸುದ್ದಿ

15 ಸಾವಿರ ಲಂಚ ಸ್ವೀಕಾರ: ಮೂಡಿಗೆರೆ ಸರ್ವೇ ಇಲಾಖೆ ಮಹಿಳಾ ಸಿಬ್ಬಂದಿ ಸುಮಾ ಲೋಕಾಯುಕ್ತ ಬಲೆಗೆ

11/06/2026, 12:25

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮೂಡಿಗೆರೆ ಸರ್ವೇ ಇಲಾಖೆ ಎ.ಡಿ.ಎಲ್.ಆರ್. ಕಚೇರಿಯಲ್ಲಿ ಲಂಚ ಪಡೆಯುವಾಗ ಸರ್ವೇ ಇಲಾಖೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಸರ್ವೇ ಸ್ಕೆಚ್ ಗೆ 20 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಸರ್ವೇ ಇಲಾಖೆಯ ಎ ಡಿ ಎಲ್ ಆರ್ ಕಚೇರಿ ಸಿಬ್ಬಂದಿ ಸುಮಾ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
15 ಸಾವಿರ ಲಂಚ ಪಡೆಯುವ ವೇಳೆ ಲೋಕಾ ಬಲೆಗೆ ಬಿದ್ದಿದ್ದಾರೆ. ಸುಮಾ, ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ಸರ್ವೇಯರ್, ಮೂಡಿಗೆರೆ ಸರ್ವೇ ಇಲಾಖೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
ಎ.ಡಿ.ಎಲ್.ಆರ್.ಕಚೇರಿಯಲ್ಲೇ ಹಣ ಪಡೆಯುವ ವೇಳೆ ಸಿಕ್ಕಿಬಿದ್ದ ಸುಮಾ, ಲೋಕಾಯುಕ್ತ ಡಿವೈಎಸ್.ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ. ಲಂಚಕ್ಕೆ ಬೇಡಿಕೆ ಇಟ್ಟು ಸುಮಾ ಬಳಿ ಹಣ ನೀಡುವಂತೆ ಎ ಡಿ ಎಲ್ ಆರ್ ಮಂಜೇಶ್ ಹೇಳಿದ್ದರು ಎನ್ನಲಾಗಿದೆ.
ಮೂಡಿಗೆರೆ ತಾಲ್ಲೂಕು ದೇವವೃಂದ ಗ್ರಾಮದ ಮಂಜುನಾಥ್ ಎಂಬುವವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಮನನೊಂದು ಮಂಜುನಾಥ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಮಂಜುನಾಥ್ ಅವರು ಜಮೀನು ಅಲಿನೇಸನ್ ಆಗಿತ್ತು, ಈ ಸ್ವತ್ತಿಗಾಗಿ ಸರ್ವೇ ಸ್ಕೆಚ್ ಬೇಕಾಗಿತ್ತು. ಸರ್ವೇ ಸ್ಕೆಚ್ ನೀಡಲು 20 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಲ್ಲಿ ಎಡಿಎಲ್ ಆರ್ ಮಂಜೇಶ್, ಸರ್ವೇಯರ್ ನಂದಿನಿ, ದೀಪಕ್, ಸುಮಾ ಇವರ ಮೇಲೆ ಮಂಜುನಾಥ್ ದೂರು ನೀಡಿದ್ದರು.
15 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತರು ನೇರವಾಗಿ ದಾಳಿ ನಡೆಸಿ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಸುಮಾ ಅವರನ್ನು ಬಂಧಿಸಿದ್ದಾರೆ.
ಮೂಡಿಗೆರೆ ಎ ಡಿ ಎಲ್ ಅರ್ ಮತ್ತು ಸರ್ವೇ ಇಲಾಖೆಯ ಕೆಲ ಅಧಿಕಾರಿಗಳು ಮತ್ತು ನೌಕರರು ರೈತರನ್ನು ಲಂಚಕ್ಕಾಗಿ ಸತಾಯಿಸುತ್ತಿದ್ದ ಆರೋಪಗಳು ಕೇಳಿ ಬಂದಿದ್ದವು.

ಇತ್ತೀಚಿನ ಸುದ್ದಿ

ಜಾಹೀರಾತು