ಇತ್ತೀಚಿನ ಸುದ್ದಿ
ಸೋಮವಾರಪೇಟೆ:ತೋಟದಲ್ಲಿ ಒಣಗಿದ್ದ ಮರ ಬಿದ್ದು ಬೆಳೆಗಾರ ಸಾವು
12/06/2026, 13:41
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಒಣಗಿದ ಮರವೊಂದು ಬಿದ್ದು ಬೆಳೆಗಾರರೊಬ್ಬರು ದುರ್ಮರಣಕ್ಕೀಡಾದ ಘಟನೆ ಸೋಮವಾರಪೇಟೆ ತಾಲೂಕಿನ ಚಿಕ್ಕತೋಳೂರು ಗ್ರಾಮದಲ್ಲಿ ನಡೆದಿದೆ.
ಚಿಕ್ಕತೋಳೂರು ಗ್ರಾಮದ ನಿವಾಸಿ, ಬೆಳೆಗಾರ ನಂದೀಶ್ (51) ಮೃತ ದುರ್ದೈವಿ. ತಮ್ಮ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಒಣಗಿದ ಮರವೊಂದು ಏಕಾಏಕಿ ಧರಾಶಾಹಿಯಾಗಿ ಅವರ ಮೇಲೆ ಬಿದ್ದಿದೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡ ನಂದೀಶ್ ಅವರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದರು.
ಮರ ಬಿದ್ದ ರಭಸಕ್ಕೆ ನಂದೀಶ್ ಅವರ ಪಕ್ಕೆಲುಬುಗಳು ಮುರಿದು, ಹೃದಯ ಹಾಗೂ ಶ್ವಾಸಕೋಶಕ್ಕೆ ತೀವ್ರ ಹಾನಿಯಾಗಿತ್ತು ಎಂದು ತಿಳಿದುಬಂದಿದೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.












