5:27 PM Sunday14 - June 2026
ಬ್ರೇಕಿಂಗ್ ನ್ಯೂಸ್
ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ ಸೋಮವಾರಪೇಟೆ:ತೋಟದಲ್ಲಿ ಒಣಗಿದ್ದ ಮರ ಬಿದ್ದು ಬೆಳೆಗಾರ ಸಾವು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ ಗಿಂತ ಕಡಿಮೆ ಪ್ರಮಾಣದ ಕುಡಿಯುವ… ಹುಣಸೂರು ತಾಲೂಕಿನ ಕೂಡ್ಲೂರಿನಲ್ಲಿ ವ್ಯಾಘ್ರ ಸೆರೆ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಹುಲಿ 15 ಸಾವಿರ ಲಂಚ ಸ್ವೀಕಾರ: ಮೂಡಿಗೆರೆ ಸರ್ವೇ ಇಲಾಖೆ ಮಹಿಳಾ ಸಿಬ್ಬಂದಿ ಸುಮಾ… ಹಾಸನ | ಸಕಲೇಶಪುರ ಬಳಿ ಕರುಗಳ ಬೆನ್ನಟ್ಟಿದ ಕಾಡಾನೆ ಮರಿ ಚಿಕ್ಕಮಗಳೂರು: ಗುಂಡು ಹಾರಿಸಿಕೊಂಡು ಗೃಹಿಣಿ ಅನುಮಾನಾಸ್ಪದ ಸಾವು ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕೆ ಸೀಮಿತವಾಗಿಲ್ಲ:… ಮೋದಿ ಸರ್ಕಾರದ 12 ವರ್ಷಗಳ ಕಥೆಯಲ್ಲಿ ವೈಫಲ್ಯಗಳ ಪಟ್ಟಿಯದ್ದೇ ಕಾರುಬಾರು: ಗೃಹ ಸಚಿವ…

ಇತ್ತೀಚಿನ ಸುದ್ದಿ

ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ

14/06/2026, 17:26

ಬಾಗಲಕೋಟೆ(reporterkarnataka.com): ಅನ್ನದಾತನ ಆಕ್ರೋಶದ ಕಟ್ಟೆಯೊಡೆದಾಗ ವ್ಯವಸ್ಥೆ ಆತನ ಮುಂದೆ ಮಂಡಿಯೂರಲೇಬೇಕು. ಗಟ್ಟಿ ಸಾಮ್ರಾಜ್ಯಗಳನ್ನೇ ಉರುಳಿಸಿದ ಇತಿಹಾಸ ಹೊಂದಿರುವ ಈ ಕಾಯಕ ಜೀವಿಗಳು, ವ್ಯವಸ್ಥೆ ವಿರುದ್ಧ ಸೆಟೆದು ನಿಂತಾಗ ಏನಾಗುತ್ತದೆ ಎಂಬುದಕ್ಕೆ, ಬಾಗಲಕೋಟೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಮುಳುಗಡೆ ಭೂಮಿಗೆ ಕೊಡಬೇಕಾದ ಪರಿಹಾರ ಕೊಡದೇ ಹಲವು ವರ್ಷಗಳಿಂದ ಸತಾಯಿಸುತ್ತಿದ್ದ ಅಧಿಕಾರಿಗೆ, ಪೀಡಿತ ರೈತನೋರ್ವ ಚಪ್ಪಲಿಯಿಂದ ಹೊಡೆದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ನಗರವನ್ನು ಸಂಪರ್ಕಿಸುವ ರಸ್ತೆ ಯೋಜನೆಗಾಗಿ, 2004ರಲ್ಲಿ ದಾದೇನವರ್ ವೃತ್ತದ ಬಳಿ ಇದ್ದ ಬಸವರಾಜ ದೊಡ್ಡಮನಿ ಎಂಬ ರೈತನ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಇದಕ್ಕೆ ಪ್ರತಿಯಾಗಿ ದೊರಕಬೇಕಿದ್ದ ಪರಿಹಾರ ಮಾತ್ರ ಇದುವರೆಗೂ ಆ ರೈತನ ಕೈಸೇರಿಲ್ಲ. ಪರಿಹಾರಕ್ಕಾಗಿ ಆಗ್ರಹಿಸಿ ರೈತ ಬಸವರಾಜ ದೊಡ್ಡಮನಿ ವರ್ಷಗಳಿಂದ ಸರ್ಕಾರಿ ಕಚೇರಿಗೆ ಅಲೆಯುತ್ತಲೇ ಇದ್ದಾರೆ.
ಪರಿಹಾರಕ್ಕಾಗಿ ಪದೇ ಪದೇ ಮನವಿ ಮಾಡಿ ರೋಸಿಹೋದ ರೈತ ಬಸವರಾಜ ದೊಡ್ಡಮನಿ, ಬಿಟಿಡಿಎ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ರೈತ ಅಧಿಕಾರಿ ಮೇಲೆ ಕೈ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಇನ್ನು ಬಸವರಾಜ ದೊಡ್ಡಮನಿ ಅವರು ಅಧಿಕಾರಿಗೆ ಹೊಡೆದ ಸಂದರ್ಭದಲ್ಲಿ, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬಿಟಿಡಿಎ ಕಚೇರಿಗೆ ಮುತ್ತಿಗೆ ಹಾಕಿದ್ದರು.
ಸಫಾಯಿ ಕರ್ಮಚಾರಿಗಳಿಗೆ ಪ್ಲಾಟ್ ಹಂಚಿಕೆ ಮಾಡದ್ದನ್ನು ಖಂಡಿಸಿ, ಡಿಎಸ್‌ಎಸ್‌ ಮುಖಂಡರು ಮತ್ತು ಕಾರ್ಯಕರ್ತರು ಬಿಟಿಡಿಎ ಕಚೇರಿಗೆ ಮುತ್ತಿಗೆ ಹಾಕಿದ್ದರು. ಅದೇ ಸಮಯಕ್ಕೆ ಕಚೇರಿಗೆ ಬಂದ ರೈತ ಬಸವರಾಜ ದೊಡ್ಡಮನಿ, ಭೂಪರಿಹಾರ ಒದಗಿಸಲು ವಿಳಂಬ ಮಾಡುತ್ತಿದ್ದ ಅಧಿಕಾರಿಯನ್ನು ಚಪ್ಪಲಿಯಲ್ಲಿ ಹೊಡೆದಿದ್ದಾರೆ.

ಈ ವೇಳೆ ರೈತ ಬಸವರಾಜ ದೊಡ್ಡಮನಿ ಮತ್ತು ಬಿಟಿಡಿಎ ಅಧಿಕಾರಿ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಡಿಎಸ್‌ಎಸ್‌ ಕಾರ್ಯಕರ್ತರು ಇಬ್ಬರನ್ನೂ ಸಮಾಧಾನಪಡಿಸಲು ಯತ್ನಸಿದ್ದಾರೆ. ಆದರೆ ತನಗಾಗುತ್ತಿರುವ ಅನ್ಯಾಯದಿಂದ ತೀವ್ರ ಬೇಸರಗೊಂಡ ರೈತ ಬಸವರಾಜ ದೊಡ್ಡಮನಿ, ಅಧಿಕಾರಿ ನೀಲಕಂಠ ಅಂಕದ್‌ ಅವರ ಮೇಲೆ ಕೈ ಮಾಡಿದ್ದಾರೆ.

ಭೂಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದ ರೈತ ಅಧಿಕಾರಿ ಏಳೆ ಕೈಮಾಡಿದ್ದು ಸರಿಯೋ ತಪ್ಪೋ ಎಂಬ ಚರ್ಚೆಗಿಂತ, ಈ ಮಾರ್ಗ ಆಯ್ದುಕೊಳ್ಳಲು ರೈತನನ್ನು ಒತ್ತಾಯಿಸಿದ ಪರಿಸ್ಥಿತಿಗಳ ಬಗ್ಗೆ ಚರ್ಚೆ ಮಾಡುವುದು ತುರ್ತು ಅಗತ್ಯವಾಗಿದೆ. ಬದುಕಿನ ಆಸರೆಯಾಗಿದ್ದ ಭೂಮಿಯನ್ನು ಅಭಿವೃದ್ಧಿಗಾಗಿ ನೀಡಿದ ರೈತ, ಅದಕ್ಕೆ ಪ್ರತಿಯಾಗಿ ಸರ್ಕಾರದಿಂದ ಬರಬೇಕಾದ ಪರಿಹಾರವನ್ನೂ ಪಡೆದುಕೊಳ್ಳಲು ಸಾಧ್ಯವಾಗದಿರುವುದು, ವ್ಯವಸ್ಥೆಯ ದೌರ್ಬಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

2020ರಲ್ಲಿ ಕಬ್ಬಿನ ಬಾಕಿ ಬಿಲ್‌ಗಾಗಿ ಒತ್ತಾಯಿಸಿ ಸಮಾಧಿ ಅಗೆದು ಪ್ರತಿಭಟನೆ ಮಾಡಿದ್ದ ಘಟನೆಯನ್ನು ನಾವು ಇಲ್ಲಿ ಸ್ಮರಿಸಬಹುದು.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ನಿಟ್ಟಿನಲ್ಲಿ ಗಮನಹರಿಸಿ, ರೈತ ಬಸವರಾಜ ದೊಡ್ಡಮನಿ ಅವರಿಗೆ ಬರಬೇಕಾದ ಪರಿಹಾರವನ್ನು ಒದಗಿಸಬೇಕು ಎಂಬುದು ಬಾಗಲಕೋಟೆ ಜನರ ಆಗ್ರಹವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು