6:28 AM Monday14 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ಫೋಟೋ ಜರ್ನಲಿಸ್ಟ್ ದಯಾ ಕುಕ್ಕಾಜೆಗೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ

13/12/2022, 22:41

ಪುತ್ತೂರು(reporterkarnataka.com): ಗ್ಲೋಬಲ್ ಟ್ಯಾಲೆಂಟ್ ಸರ್ಚ್ ಫರ್ಮ್ ಇನ್ನೋವೈಜ್ ಆರ್ಟ್ಸ್ ಆಂಡ್ ಕಲ್ಟರ್ ಸಂಸ್ಥೆ ಆಯೋಜಿಸಿದ್ದ 2022ರ ಜಾಗತಿಕ ಛಾಯಾಗ್ರಹಣ ಸ್ಪರ್ಧೆಯ ಸೀಸನ್-3ರಲ್ಲಿ ಮಂಗಳೂರಿನ ಖ್ಯಾತ ಫೋಟೋ ಜರ್ನಲಿಸ್ಟ್ ದಯಾನಂದ ಕುಕ್ಕಾಜೆ ‘ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ’ ಪಡೆದಿದ್ದಾರೆ.

ದಯಾನಂದ ಕುಕ್ಕಾಜೆ ಅವರಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಗೌರವಿಸಲಾಗಿದೆ. ಈ ಹಿಂದೆ ಅವರು ಅತ್ಯುತ್ತಮ ಕ್ಯಾಂಡಿಡ್ ಆಕ್ಷನ್ ಛಾಯಾಗ್ರಹಣ ಪ್ರಶಸ್ತಿ ಮತ್ತು ಅತ್ಯುತ್ತಮ ಕ್ಯಾಂಡಿಡ್ ಛಾಯಾಗ್ರಹಣ ಪ್ರಶಸ್ತಿ ಪಡೆದಿದ್ದರು. ಗ್ಲೋಬಲ್ ಫೋಟೋಗ್ರಫಿ ಕಾಂಟೆಸ್ಟ್ 2022 ರ ಸೀಸನ್-3 ನ್ನು ಭಾರತದ ಛಾಯಾಗ್ರಾಹಕರು ಮತ್ತು ಹಲವಾರು ದೇಶಗಳ ಎನ್‌ಆರ್‌ಐಗಳ ನಡುವೆ ನಡೆಸಲಾಗಿತ್ತು.

ಕುಕ್ಕಾಜೆ ಅವರು 12ಕ್ಕೂ ಹೆಚ್ಚು ಛಾಯಾಚಿತ್ರ ಪ್ರದರ್ಶನಗಳನ್ನು ಆಯೋಜಿಸಿದ್ದು ಅವರು ತಮ್ಮ ಛಾಯಾಗ್ರಹಣ ಕೌಶಲ್ಯವನ್ನು ಪ್ರದರ್ಶಿಸಲು ಆರಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದಾರೆ. ಮಾಣಿಲ ಗ್ರಾಮದ ಕುಕ್ಕಾಜೆ ನಿವಾಸಿಯಾಗಿರುವ ದಯಾರವರು ಡೈಜಿವರ್ಲ್ಡ್ ವಾಹಿನಿಯ ಪ್ರಮುಖ ಛಾಯಾಗ್ರಾಹಕರಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು