2:53 AM Sunday13 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ಮಂಗಳೂರು: ರಾಜ್ಯಮಟ್ಟದ ಒಂದು ದಿನದ “ದೀಕ್ಷಾ” ಪಿಎಸ್ ಟಿ ತರಬೇತಿ ಕಾರ್ಯಾಗಾರ

23/06/2024, 22:15

ಮಂಗಳೂರು(reporterkarnataka.com):ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ಆತಿಥ್ಯದಲ್ಲಿ ಕರ್ನಾಟಕ ರಾಜ್ಯಮಟ್ಟದ ಒಂದು ದಿನದ “ದೀಕ್ಷಾ” ಪಿಎಸ್ ಟಿ ತರಬೇತಿ ಕಾರ್ಯಾಗಾರ ನಗರದ ಮಲ್ಲಿಕಟ್ಟೆ ಲಯನ್ಸ್ ಸೇವಾ ಭವನದಲ್ಲಿ ಭಾನುವಾರ ನಡೆಯಿತು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ ರಾಷ್ಟೀಯ ಅಧ್ಯಕ್ಷ ಚಿತ್ರ ಕುಮಾರ್ , ಕರ್ನಾಟಕ ರಾಜ್ಯದ ವಿವಿಧ ಪ್ರಾದೇಶಿಕ ಘಟಕಗಳ ಪರಿಚಯ ಮತ್ತು ಸಾಧನೆ ಬಗ್ಗೆ ವಿವರಿಸಿದರು. ತರಬೇತಿಗೆ ಆಗಮಿಸಿದ ಪ್ರಾದೇಶಿಕ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಜಿ, ಘಟಕದ ಪದಾಧಿಕಾರಿಗಳು ಹಾಗೂ ಮಹಿಳಾ ಘಟಕದ ಸದಸ್ಯರುಗಳ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ತಿಳಿ ಹೇಳಿದರು . ಕರ್ನಾಟಕದ ಇನ್ನುಳಿದ ಪ್ರದೇಶಗಳಲ್ಲಿ ಹೊಸ ಘಟಕಗಳ ಆರಂಭ ಮತ್ತು ವಿಸ್ತರಣೆಯ ಕಾರ್ಯಯೋಜನೆ ಬಗ್ಗೆ ಗಮನ ಸೆಳೆದರು. ಮುಂದಿನ ದಿನಗಳಲ್ಲಿ ಆಂಧ್ರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಪ್ರಾದೇಶಿಕ ಘಟಕಗಳ ವಿಸ್ತರಣೆ ಬಗ್ಗೆ ತಿಳಿಸಿದರು.
ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಒಂದಾದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನಕ್ಕೆ ಪಿಪಿಎಫ್ ದೇಣಿಗೆ ನೀಡಿದ ಘಟಕದ ಸದಸ್ಯರಿಗೆ ಗೌರವಂದನೆಯನ್ನು ಸಲ್ಲಿಸಿದರು.
ಸಂಸ್ಥೆಯ ಆಡಳಿತ ವಿಭಾಗ ರಾಷ್ಟ್ರೀಯ ನಿರ್ದೇಶಕ ನವೀನ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಪೂರ್ವ ರಾಷ್ಟ್ರೀಯ ಅಧ್ಯಕ್ಷರು ಮತ್ತು ಮುಖ್ಯ ತರಬೇತಿದಾರ ಡಾ. ಕೇದಿಗೆ ಅರವಿಂದ ರಾವ್, ಎಸ್ ಸಿ ಐ ರಾಷ್ಟ್ರೀಯ ಕಾನೂನು ಸಲಹೆಗಾರ ನಾಗೇಶ್, ರಾಷ್ಟ್ರೀಯ ಉಪಾಧ್ಯಕ್ಷರಾದ ಡಿ. ಕಿಶೋರ್ ಫರ್ನಾಂಡಿಸ್, ಬಿ. ಹುಸೇನ್ ಹೈಕಾಡಿ, ಪುಷ್ಪಾ ಶೆಟ್ಟಿ, ಡಾ. ಶಿವಕುಮಾರ್, ರಾಷ್ಟ್ರೀಯ ನಿರ್ದೇಶಕ ಓರಿಯಂಟೇಶನ್ ಕೆಪಿಎ ರೆಹಮಾನ್, ಮಂಗಳೂರು ಘಟಕ ನಿಕಟ ಪೂರ್ವ ಅಧ್ಯಕ್ಷ ಅಶೋಕ್ ಎಂಕೆ, ಮಂಗಳೂರು ಘಟಕ ಕಾರ್ಯದರ್ಶಿ ಸುನಂದ ಶಿವರಾಂ, ಪಿಎಸ್ ಟಿ ತರಬೇತಿ ಕಾರ್ಯಕ್ರಮದ ಕಾರ್ಯಕ್ರಮ ನಿರ್ದೇಶಕ ವಿಕಾಸ್ ಶೆಟ್ಟಿ ಉಪಸ್ಥಿತರಿದ್ದರು.
ಎಸ್ ಸಿಐ ಮಂಗಳೂರು ಘಟಕದ ಅಧ್ಯಕ್ಷ ದತ್ತಾತ್ರೇಯ ಬಾಳ ಸ್ವಾಗತಿಸಿದರು. ಅನಿಲ್ ಪಿಂಟೊ ಹಾಗೂ ಹರೀಶ್ ಎ. ಅತಿಥಿ ಪರಿಚಯ ಮಾಡಿದರು. ರಾಷ್ಟ್ರೀಯ ಖಜಾಂಜಿ ಜೋಸ್ ಖಂಡೋತ್ ವಂದಿಸಿದರು.
ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯದ 70 ಘಟಕಗಳಿಂದ 300 ಘಟಕಧಿಕಾರಿಗಳು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು