11:07 PM Friday25 - September 2026
ಬ್ರೇಕಿಂಗ್ ನ್ಯೂಸ್
ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಸಿದ್ದರಾಮಯ್ಯ!: ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಕೊಟ್ಟ ಮಾಜಿ ಸಿಎಂ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ವಿಜಯನಗರ | ಹೊಸಪೇಟೆ ಬಳಿ ರೈಲು ಡಿಕ್ಕಿಯಾಗಿ 8 ಎಮ್ಮೆಗಳು ಸ್ಥಳದಲ್ಲಿಯೇ ಸಾವು *ಕಾಡಾನೆ ನಿಯಂತ್ರಣ ಚಟುವಟಿಕೆಗೆ ವಾಹನಗಳ ಕೊಡುಗೆ: ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಕೇಂದ್ರ ಹಣಕಾಸು… ಬಂಗಾಳ ಕೊಲ್ಲಿಯಲ್ಲಿ ವಾಯಭಾರ ಕುಸಿತ: ಮಂಗಳೂರು ಸೇರಿದಂತೆ ಕರಾವಳಿ, ಮಲೆನಾಡಿನಲ್ಲಿ ಮಳೆ ಅ.11ರಿಂದ ಕೆಆರ್‌ಎಸ್‌ನಲ್ಲಿ ಸಂಪ್ರದಾಯಬದ್ಧ ಕಾವೇರಿ ಆರತಿ: ಮುಖ್ಯಮಂತ್ರಿ ಉದ್ಘಾಟನೆ *ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ*

ಇತ್ತೀಚಿನ ಸುದ್ದಿ

ಕಾಶ್ಮೀರ ಪಹಲ್ಗಾಮ್‌ ದುಷ್ಕೃತ್ಯ ಮಾನವತೆಗೆ ಕಳಂಕ: ಮಂಗಳೂರು ಬಿಷಪ್‌ ಡಾ.ಪೀಟರ್‌ ಪಾವ್ಲ್‌ ಸಲ್ಡಾನಾ ಖೇದ

24/04/2025, 14:29

ಮಂಗಳೂರು(reporterkarnataka.com): ಭಾರತದ ಮುಕುಟಮಣಿ ಎನ್ನಿಸಿರುವ ಕಾಶ್ಮೀರದಲ್ಲಿ ಪ್ರವಾಸಕ್ಕಾಗಿ ತೆರಳಿದ್ದ ಅಮಾಯಕ ನಾಗರಿಕರನ್ನು ಹತ್ಯೆ ಮಾಡಿದ ಉಗ್ರಗಾಮಿಗಳ ಕೃತ್ಯ ಅತ್ಯಂತ ಖಂಡನೀಯ. ಯಾವುದೇ ತಪ್ಪೆಸಗದವರ ಮೇಲೆ ಏಕಾಏಕಿ ಗುಂಡಿಟ್ಟು ಕೊಂದಿರುವುದು ಮಾನವತೆಗೆ ಕಳಂಕ ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ಅತಿ ವಂದನೀಯ ಡಾ.ಪೀಟರ್‌ ಪಾವ್ಲ್‌ ಸಾಲ್ಡನ್ಹಾ ಅವರು ಖೇದ ವ್ಯಕ್ತಪಡಿಸಿದ್ದಾರೆ.
ರಜೆಯಲ್ಲಿ ಕುಟುಂಬಗಳು, ಮಹಿಳೆಯರು ಮಕ್ಕಳ ಸಹಿತ ಕಾಶ್ಮೀರ ಪಹಲ್ಗಾಮ್‌ಗೆ ಪ್ರವಾಸ ತೆರಳಿದ್ದರು. ಅಲ್ಲಿ ಮುಖ್ಯವಾಗಿ ಪುರುಷರನ್ನೇ ಗುರಿಯಾಗಿಸಿ ಉಗ್ರರು 26 ಮಂದಿಯ ತಲೆಗೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇಂತಹ ಪಾಪಕೃತ್ಯ ಯಾವುದೇ ನಾಗರಿಕರು ಒಪ್ಪುವಂಥದ್ದಲ್ಲ.
ಜೀವ ಕಳೆದುಕೊಂಡವರಿಗೆ ಚಿರಶಾಂತಿ ಲಭಿಸಲಿ, ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ. ಮೃತರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಇದಕ್ಕೆ ಕಾರಣರಾದ ಯಾರನ್ನೂ ಬಿಡದೆ ಸರಕಾರ ಕ್ರಮ ಜರಗಿಸುವಂತೆ ಆಗ್ರಹಿಸುವುದಾಗಿ ಬಿಷಪ್‌ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು