11:32 AM Monday14 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ಕರೆಜ್ಮಾಚಾ ಗಿತಾಂಚಿ ಭಕ್ತಿಕ್ ಸಾಂಜ್: ಪಾಲ್ದನೆ ಚರ್ಚ್ ನಲ್ಲಿ ತಪಸ್ಸು ಕಾಲದ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ

12/03/2026, 20:55

ಮಂಗಳೂರು(reporterkarnataka.com): ತಪಸ್ಸು ಕಾಲವು ಕ್ರೈಸ್ತರಲ್ಲಿ ಪ್ರಾರ್ಥನೆ, ಪಶ್ಚಾತ್ತಾಪ ಮತ್ತು ತ್ಯಾಗದ ಸಮಯವಾಗಿದ್ದು, ಈ ಸಮಯದಲ್ಲಿ ಯೇಸು ಕ್ರಿಸ್ತರ ಶಿಲುಬೆಯ ಮರಣ ಮತ್ತು ಪ್ರೀತಿಯನ್ನು ಸ್ಮರಿಸುವ ಗೀತೆಗಳನ್ನು ಹಾಡಲಾಗುತ್ತದೆ. ಸಾಂಪ್ರದಾಯಿಕ ಮತ್ತು ಸಮಕಾಲೀನ ಕ್ಯಾಥೊಲಿಕ್ ಭಕ್ತಿ ಗೀತೆಗಳು ಪಶ್ಚಾತ್ತಾಪ, ಪ್ರಾಯಶ್ಚಿತ, ತ್ಯಾಗ ಮತ್ತು ಶಿಲುಬೆಯ ಹಾದಿಯ ಮೇಲೆ ಕೇಂದ್ರೀಕರಿಸಿವೆ. 40 ದಿನಗಳ ಅವಧಿಯ ತಪಸ್ಸು ಕಾಲದ ಆಚರಣೆಗೆ ಹಲವಾರು ವರ್ಷಗಳ ಇತಿಹಾಸವಿದೆ.
ಕ್ರಿಸ್ತ ಶಕ 4ನೇ ಶತಮಾನದಿಂದ ಅಂದರೆ ಕ್ರಿ.ಶ. 325ರಿಂದ ತಪಸ್ಸು ಕಾಲ ಅಧಿಕೃತವಾಗಿ ಆರಂಭವಾಯಿತು ಎಂಬುದಾಗಿ ಇತಿಹಾಸದ ಪುಟಗಳಿದ ತಿಳಿದು ಬರುತ್ತದೆ. ಅಂದಿನಿಂದಲೇ ಇದಕ್ಕೆ ಸಂಬಂಧಿಸಿದ ವಿಶೇಷ ಭಕ್ತಿ ಗೀತೆಗಳ ಗಾಯನ ಪದ್ದತಿ ಜಾರಿಯಲ್ಲಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಗಮನದಲ್ಲಿ ಇರಿಸಿ ಮಾರ್ಚ್ 15ರಂದು ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್, ವಾಮಂಜೂರಿನ ಸೈಂಟ್ ಜೋಸೆಫ್ ದಿ ವರ್ಕರ್ ಚರ್ಚ್ ಮತ್ತು ಕೆಲರಾಯ್ ಸಂತ ಅನ್ನಾ ಚರ್ಚ್ ನ ಸಹಯೋಗದಲ್ಲಿ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಸಂಜೆ 6 ಗಂಟೆಗೆ ಕರೆಜ್ಮಾಚಾ ಗಿತಾಂಚಿ ಭಕ್ತಿಕ್ ಸಾಂಜ್ ಎಂಬ ತಪಸ್ಸು ಕಾಲದ ಕೊಂಕಣಿ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ. ಈ ಮೂರು ಚರ್ಚ್ ಗಳ ಗಾಯನ ಮಂಡಳಿಗಳ ಸದಸ್ಯರು ತಲಾ ನಾಲ್ಕು ಗೀತೆಗಳನ್ನು ಅವುಗಳ ವಿವರಣೆಯೊಂದಿಗೆ ಪ್ರಸ್ತುತ ಪಡಿಸಲಿದ್ದಾರೆ ಎಂದು ಚರ್ಚ್ ಪ್ರಕಟಣೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು