1:35 PM Sunday11 - October 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:…

ಇತ್ತೀಚಿನ ಸುದ್ದಿ

ಜೂ.9ರಿಂದ ರಾಜ್ಯಾದ್ಯಂತ ‘ಪಿಯು ಕಾಲೇಜು’ ಆರಂಭ:  ಮೇ 20ರಿಂದ ಪ್ರಥಮ ಪಿಯು ದಾಖಲಾತಿ

19/05/2022, 08:31

ಬೆಂಗಳೂರು(reporterkarnataka.com): 2022-23ನೇ ಸಾಲಿನ ಪಿಯು ಕಾಲೇಜುಗಳನ್ನು ಜೂನ್ 9ರಿಂದ ಆರಂಭಗೊಳ್ಳಲಿದೆ. ಅಲ್ಲದೇ ಮೇ 20ರಿಂದ ಪ್ರಥಮ ಪಿಯು ದಾಖಲಾತಿ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಜೂನ್ 1ರಿಂದ ದ್ವಿತೀಯ ಪಿಯು ಪ್ರಕ್ರಿಯೆ ಆರಂಭಿಸುವಂತೆ ಪಿಯು ಬೋರ್ಡ್  ತಿಳಿಸಿದೆ.

ಈ ಸಂಬಂಧ 128 ಪುಟಗಳ ಮಾರ್ಗಸೂಚಿಯನ್ನು ಪ್ರಕಟಿಸಿರುವಂತ ಪಿಯು ಬೋರ್ಡ್, 2022-23ನೇ ಸಾಲಿನ ಶೈಕ್ಷಣಿಕ ಅವಧಿ ಜೂನ್ 9 ರಿಂದ ಆರಂಭಗೊಂಡು ಸೆಪ್ಟೆಂಬರ್ 30ರವರೆಗೆ ನಡೆಸುವಂತೆ ತಿಳಿಸಿದೆ.

ಇನ್ನೂ 2ನೇ ಅವಧಿ ಅಕ್ಟೋಬರ್ 13ರಿಂದ ಮಾರ್ಚ್ 31, 2023ರವರೆಗೆ ನಡೆಸಲು ನಿಗದಿ ಪಡಿಸಲಾಗಿದೆ. ಅಲ್ಲದೇ ಜೂನ್.30ರವರೆಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ದಾಖಲಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.ಪ್ರಥಮ ಪಿಯುಸಿಗೆ ದಂಡ ಶುಲ್ಕವಿಲ್ಲದೇ ಜೂನ್.15 ಕೊನೆಯ ದಿನವಾಗಿದೆ. ಜೂನ್.1 ರಿಂದ 15ರವರೆಗೆ ದ್ವಿತೀಯ ಪಿಯು ದಾಖಲಾತಿಗೆ ಅವಕಾಶ ನೀಡಲಾಗಿದೆ. ಜೂನ್ 30 ದಂಡ ಶುಲ್ಕದೊಂದಿಗೆ ದಾಖಲಾಗಲು ಕೊನೆಯ ದಿನವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು