5:56 PM Wednesday27 - November 2024
ಬ್ರೇಕಿಂಗ್ ನ್ಯೂಸ್
ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​

ಇತ್ತೀಚಿನ ಸುದ್ದಿ

ಕೋವಿಡ್ ಲಸಿಕೆ ವಿರುದ್ಧ ಪ್ರತಿಭಟನೆ: ಫ್ರಾನ್ಸ್, ಜರ್ಮನಿ, ಆಸ್ಟ್ರಿಯ, ಇಟಲಿಯಲ್ಲಿ ಬೀದಿಗಿಳಿದ ನಾಗರಿಕರು

11/01/2022, 00:00

ಪ್ಯಾರಿಸ್(reporterkarnataka.com):

ಕೋವಿಡ್ ಲಸಿಕೆ ಕಡ್ಡಾಯಗೊಳಿಸಿರುವುದರ ವಿರುದ್ಧ ಪಶ್ಚಿಮ ಯುರೋಪ್‌ ನಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ. ಜನರು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಫ್ರಾನ್ಸ್, ಜರ್ಮನಿ, ಆಸ್ಟ್ರಿಯ ಹಾಗೂ ಇಟಲಿಯಲ್ಲಿ ಜನರು ಬೀದಿಗಿಳಿದಿದ್ದಾರೆ.

ಫ್ರಾನ್ಸ್ ನಲ್ಲಿ 1 ಲಕ್ಷಕ್ಕೂ ಅಧಿಕ ಜನರು ಲಸಿಕೆ ತೆಗೆದುಕೊಳ್ಳದವರ ಹಕ್ಕುಗಳನ್ನು ನಿರ್ಬಂಧಿಸುವ ಸರಕಾರದ ಯೋಜನೆಗಳನ್ನು ವಿರೋಧಿಸಿ ರ್ಯಾಲಿ ನಡೆಸಿದ್ದಾರೆ. ರಾಜಧಾನಿ ಪ್ಯಾರಿಸ್ ನಲ್ಲಿ ಪ್ರತಿಭಟನಕಾರರು (ಹೆಚ್ಚಿನವರು ಮಾಸ್ಕ್ ಧರಿಸಿಲ್ಲ) ಮಳೆ, ಚಳಿ ಲೆಕ್ಕಿಸದೆ ಶನಿವಾರ ರ‍್ಯಾಲಿ ನಡೆಸಿದರು. ಅವರು ‘ಸತ್ಯ’, ‘ಸ್ವಾತಂತ್ರ’ ಹಾಗೂ ‘ಲಸಿಕೆ ಪಾಸ್ ಗೆ ಧಿಕ್ಕಾರ’ ಮೊದಲಾದ ಪ್ರದರ್ಶನಾ ಫಲಕಗಳನ್ನು ಹಿಡಿದುಕೊಂಡಿದ್ದರು.

ಲಸಿಕೆ ಪಡೆದುಕೊಳ್ಳದವರ ಬದುಕು ಹೇಗೆ ದುಸ್ತರವಾಗಿ ಮಾಡುತ್ತೇನೆಂದರೆ, ಅವರು ಕೊನೆಗೆ ಲಸಿಕೆ ತೆಗೆದುಕೊಳ್ಳಬೇಕಾದ ದುಸ್ಥಿತಿ ಬರುತ್ತದೆ ಎಂದು ಕಳೆದ ವಾರ ಹೇಳಿಕೆ ನೀಡುವ ಮೂಲಕ ಕೋಲಾಹಲಕ್ಕೆ ಕಾರಣವಾಗಿದ್ದ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಅವರನ್ನು ಪ್ರತಿಭಟನಕಾರರು ತರಾಟೆಗೆ ತೆಗೆದುಕೊಂಡಿದ್ದಾರೆ.

ಫ್ರಾನ್ಸ್ ನಲ್ಲಿ ಆಹಾರ ಸೇವನೆ ಸ್ಥಳಕ್ಕೆ ಆಗಮಿಸುವ, ಅಂತರ್ನಗರ ರೈಲುಗಳಲ್ಲಿ ಪ್ರಯಾಣಿಸುವ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮುನ್ನ ಕೋವಿಡ್ ವಿರುದ್ಧ ಸಂಪೂರ್ಣ ಲಸಿಕೆ ತೆಗೆದುಕೊಂಡಿರುವುದನ್ನು ಜನರು ಸಾಬೀತುಪಡಿಸಬೇಕೆಂಬ ಸರಕಾರದ ವಿಧೇಯಕಕ್ಕೆ ದೇಶದ ಕೆಳಮನೆ ಅನುಮೋದನೆ ನೀಡಿದ ಹಾಗೂ ಶುಕ್ರವಾರ ಒಂದೇ ದಿನ 300,000ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗುತ್ತಿರುವಂತೆ ಈ ಪ್ರತಿಭಟನೆ ನಡೆದಿದೆ.

ಜನವರಿ ಒಳಗೆ ಹೊಸ ನಿಯಮಗಳನ್ನು ನಿರೀಕ್ಷಿಸಿದೆ. ಆದರೆ ಸೆನೆಟ್ ಲ್ಲಿರುವ ಶಾಸಕರು ಈ ಪ್ರಕ್ರಿಯೆಯನ್ನು ವಿಳಂಬ ಮಾಡಬಹುದು ಎಂದು ಸರಕಾರ ತಿಳಿಸಿದೆ.

ಫ್ರಾನ್ಸ್ ನಾದ್ಯಂತ ಶನಿವಾರ ನಡೆದ ಪ್ರತಿಭಟನೆಯಲ್ಲಿ 105,200 ಜನರು ಪಾಲ್ಗೊಂಡಿದ್ದಾರೆ. ಪ್ಯಾರೀಸ್ ನಗರವೊಂದರಲ್ಲೇ 18,000 ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. 10 ಮಂದಿ ಪ್ರತಿಭಟನಕಾರರನ್ನು ಬಂಧಿಸಲಾಗಿದೆ. ಮೂವರು ಅಧಿಕಾರಿಗಳಿಗೆ ಗಾಯಗಳಾಗಿವೆ ಎಂದು ಪೊಲೀಸರು ವರದಿ ಮಾಡಿದ್ದಾರೆ ಎಂದು ಫ್ರಾನ್ಸ್ ನ ಗೃಹ ಸಚಿವಾಲಯ ತಿಳಿಸಿದೆ.

ಇನ್ನೊಂದೆಡೆ 24 ಮಂದಿಯನ್ನು ಬಂಧಿಸಲಾಗಿದೆ ಹಾಗೂ 7 ಪೊಲೀಸರಿಗೆ ಅಲ್ಪಸ್ಪಲ್ಪ ಗಾಯಗಳಾಗಿವೆ ಎಂದು ಸಚಿವಾಲಯ ತಿಳಿಸಿದೆ.

ಟೌಲೋನ್ ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಸುಮಾರು 6,000 ಪ್ರತಿಭಟನಾಕಾರರು ಪಾಲ್ಗೊಂಡಿದ್ದಾರೆ. ಇಲ್ಲಿ ಪ್ರತಿಭಟನಕಾರರೊಂದಿಗೆ ಘರ್ಷಣೆ ನಡೆದ ಸಂದರ್ಭ ಮೋಂಟ್ಪೆಲ್ಲಿಯರ್ ಪೊಲೀಸರು ಅಶ್ರುವಾಯು ಸೆಲ್ ಗಳನ್ನು ಸಿಡಿಸಿದ್ದಾರೆ.

ಕೋವಿಡ್ ಲಸಿಕೆಯನ್ನು ಮುಂದಿನ ತಿಂಗಳಿಂದ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಆಸ್ಟ್ರೇಲಿಯಾದ ರಾಜಧಾನಿ ವಿಯೆನ್ನಾದಲ್ಲಿ 40,000ಕ್ಕೂ ಅಧಿಕ ಜನರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಶಾಂತಿಯುತವಾಗಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜರ್ಮನಿಯಲ್ಲಿ ಪ್ರತಿಭಟನಕಾರರು ಹಲವು ನಗರಗಳಲ್ಲಿ ಶನಿವಾರ ರ‍್ಯಾಲಿ ನಡೆಸಿದ್ದಾರೆ. ಹಂಬರ್ಗ್ ನಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, 16,000 ಪ್ರತಿಭಟನಾಕಾರರು ಪಾಲ್ಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘‘ಸಾಕು! ನಮ್ಮ ಮಕ್ಕಳ ಮೇಲಿಂದ ಕೈ ತೆಗೆಯಿರಿ’’ ಸಂಘಟನೆಯ ಅಡಿಯಲ್ಲಿ ಪ್ರತಿಭಟನೆ ನಡೆಯಿತು.  

ಲಸಿಕೆ ಕಡ್ಡಾಯಗೊಳಿಸಲು ಬಯಸುತ್ತಿರುವ ಜರ್ಮನಿ ಕಳೆದ ತಿಂಗಳಿಂದ 5ರಿಂದ 11 ವರ್ಷಗಳ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಪ್ರಾರಂಭಿಸಿದೆ. ಓರ್ವ ಪ್ರತಿಭಟನಾಕಾರನು ಯೆಹೂದಿ ಧರ್ಮದ ಸಂಕೇತವಾದ ‘ಸ್ಟಾರ್ ಆಫ್ ಡೆವಿಡ್’ ಲಾಂಛನವನ್ನು ‘ಲಸಿಕೆ ಪಡೆದುಕೊಂಡಿಲ್ಲ’ ಎಂಬ ಬರಹದೊಂದಿಗೆ ಧರಿಸಿದ್ದನು ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರ್ಲಿನ್ ನಲ್ಲಿ ಕೋವಿಡ್ ಲಸಿಕೆಯ ವಿರುದ್ಧ ಕಾರು ಹಾಗೂ ಬೈಕ್ ಗಳ ರ‍್ಯಾಲಿ ನಡೆಸಲಾಯಿತು. 100 ವಾಹನಗಳು, 70 ಬೈಕ್ ಗಳು ಹಾಗೂ ಸರಿಸುಮಾರು 200 ಜನರು ಪಾಲ್ಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಲಸಿಕೆ ವಿರೋಧಿಸುತ್ತಿರುವವರು ಹಾಗೂ ಕೊರೋನ ವೈರಸ್ ಅನ್ನು ನಿರಾಕರಿಸುತ್ತಿರುವವರು ವಾದಗಳಲ್ಲಿ ಹುರುಳಿಲ್ಲ ಎಂದು ಜರ್ಮನ್ ನ ಆರೋಗ್ಯ ಸಚಿವ ಕಾರ್ಲ್ ಲೌಟರ್ಬೇಕ್ ತಿಳಿಸಿದ್ದಾರೆ.

 ‘‘’ಒಂದು ಸಣ್ಣ ಗುಂಪು ಎಲ್ಲಾ ವೈಜ್ಞಾನಿಕ ಜ್ಞಾನವನ್ನು ಅಲ್ಲಗಳೆಯುತ್ತಿದೆ ಹಾಗೂ ಸ್ವಯಂಪ್ರೇರಿತವಾಗಿ ಸುಳ್ಳಿನ ಗುಳ್ಳೆ ಮೇಲೆ ತೇಲಾಡುತ್ತಿದೆ’ ಎಂದು ಅವರು ‘ವೆಲ್ಟ್ ಆ್ಯಮ್ ಸೊಂಟೇಜ್’ ಪತ್ರಿಕೆಗೆ ತಿಳಿಸಿದ್ದಾರೆ. ಇಟಲಿಯಲ್ಲಿ ಕೂಡ ಪ್ರತಿಭಟನೆ ನಡೆದಿದೆ. 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಟುರಿನ್ ನ ನಗರದಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು