5:48 PM Monday12 - October 2026
ಬ್ರೇಕಿಂಗ್ ನ್ಯೂಸ್
ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು

ಇತ್ತೀಚಿನ ಸುದ್ದಿ

ಕೊಟ್ಟಾಯಂ: ಅತಿ ದೊಡ್ಡ ವೈಫ್ ಸ್ವ್ಯಾಪಿಂಗ್ ಜಾಲ ಬಯಲು…!; ಹಣ, ಸೆಕ್ಸ್ ಗಾಗಿ ಹೆಂಡತಿಯರನ್ನೇ ಅದಲು ಬದಲು ಮಾಡಿಕೊಳ್ಳುವ ಗ್ಯಾಂಗ್ 

11/01/2022, 10:07

ತಿರುವನಂತಪುರ(reporterkarnataka.com):

ಕೇರಳದಲ್ಲಿ ವೈಫ್ ಸ್ವ್ಯಾಪಿಂಗ್ ಅಥವಾ ಸೆಕ್ಸ್​​​ , ಹಣಗಾಗಿ ಪತ್ನಿಯರನ್ನು ಪರಸ್ಪರ ಹಂಚಿಕೊಳ್ಳುವ ದೊಡ್ಡ ಜಾಲವೊಂದು ಬಯಲಾಗಿ ಇಡೀ ದೇಶಕ್ಕೆ ದೊಡ್ಡ ಶಾಕ್ ನೀಡಿದೆ. ಸಾವಿರಾರು ಮಂದಿ ಇದರಲ್ಲಿ ಭಾಗಿಯಾದ ಬಗ್ಗೆ ಗುಮಾನಿ ಇದೆ.

ಬಹುಕಾಲದಿಂದ ವೈಫ್​​ ಸ್ವ್ಯಾಪಿಂಗ್​ ಎಂಬ ದೊಡ್ಡ ಸ್ಕ್ಯಾಮ್ ಸುದ್ದಿಯಾಗಿರಲಿಲ್ಲ. ಅಲ್ಲಲ್ಲಿ ಸಣ್ಣ ಪುಟ್ಟ ವರದಿಗಳಾಗುತ್ತಿದ್ದರೂ ಅದೇನು ಅಂತಹ ದೊಡ್ಡ ಗಾತ್ರದ ಜಾಲಗಳಾಗಿರಲಿಲ್ಲ. ಆದರೆ ಇದೀಗ ಭಯಾನಕ ಸ್ವರೂಪದಲ್ಲಿ ಹೊರಬಿದ್ದಿದೆ.

ಚಂಗನಾಶ್ಶೇರಿ ಮೂಲದ ಒಬ್ಬ ಮಹಿಳೆಯ ಮೇಲೆ 9 ಮಂದಿ ಅತ್ಯಾಚಾರ ಎಸಗಿರುವುದಾಗಿ ದೂರು ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕೊಟ್ಟಾಯಂ ಜಿಲ್ಲೆಯ ವೈಫ್​​ ಸ್ವ್ಯಾಪಿಂಗ್ ಗ್ಯಾಂಗ್ ​ನ 6 ಸದಸ್ಯರನ್ನು ಕರುಕಾಚಲ ಪೊಲೀಸರು ಬಂಧಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದ್ದು, ಒಬ್ಬಾತ ವಿದೇಶಕ್ಕೆ ತೆರಳಿದ್ದಾನೆ. ಶೀಘ್ರವೇ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಕರುಕಾಚಲ ಪೊಲೀಸರು ತಿಳಿಸಿದ್ದಾರೆ. ಶಂಕಿತರು ಅಲಪ್ಪುಳ, ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳವರು ಎಂದು ತಿಳಿದು ಬಂದಿದೆ.

ಈ ಗ್ಯಾಂಗ್ ಫೇಸ್ಬುಕ್ ಮೆಸೆಂಜರ್ ಮತ್ತು ಟೆಲಿಗ್ರಾಮ್ ಗ್ರೂಪ್ಗಳ ಮೂಲಕ ಕೆಲಸ ಮಾಡುತ್ತಿತ್ತು. ಈ ಗ್ರೂಪ್ ಗಳಲ್ಲಿ ಪತ್ನಿಯರನ್ನು ಪರಸ್ಪರ ಹಂಚಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು.

ಒಂಬತ್ತು ಆರೋಪಿಗಳ ಪೈಕಿ ಐವರು ತಮ್ಮ ಸಂಗಾತಿಯೊಂದಿಗೆ ಸಭೆಗೆ ಬಂದಿದ್ದರು ಎಂದು ಮಹಿಳೆ ಬಹಿರಂಗಪಡಿಸಿದ್ದಾರೆ. ಸಭೆಯ ಸಮಯದಲ್ಲಿ ಸಂಗಾತಿಗಳು ಲೈಂಗಿಕತೆಗಾಗಿ ವಿನಿಮಯ ಮಾಡಿಕೊಂಡಿದ್ದು, ಇತರ ನಾಲ್ವರು ತಮ್ಮ ಪಾಲುದಾರರಿಲ್ಲದೆ ಬಂದಿದ್ದು ಮತ್ತು ಅವರನ್ನು ಸ್ಟಡ್ ಎಂದು ಕರೆಯಲಾಗುತ್ತದೆ. ಮಹಿಳೆಯರೊಂದಿಗೆ ಹಾಸಿಗೆ ಹಂಚಿಕೊಳ್ಳಲು ಸ್ಟಡ್‌ಗಳಿಂದ 14,000 ರೂ. ಹಣ ಸಂಗ್ರಹಿಸಲಾಗಿತ್ತು ಎಂಬ ವಿಚಾರವನ್ನೂ ಮಹಿಳೆ ಬಹಿರಂಗ ಪಡಿಸಿದ್ದಾರೆ.

ಕೇರಳದಲ್ಲಿ ವೈಫ್ ಸ್ವಾಪಿಂಗ್ ದಂಧೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದಾರೆ ಎಂದು ಊಹಿಸಲಾಗಿದೆ. ಟೆಲಿಗ್ರಾಮ್, ವಾಟ್ಸಾಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ‘ಮೀಟಪ್ ಕೇರಳ’, ‘ಕಪಲ್ ಮೀಟ್ ಕೇರಳ’, ‘ಕುಕೋಲ್ಡ್ ಕೇರಳ’, ‘ರಿಯಲ್ ಮೀಟಿಂಗ್’ ಇತ್ಯಾದಿ ಹೆಸರುಗಳಲ್ಲಿ ಗ್ಯಾಂಗ್ ನ ಗ್ರೂಪ್ ಗಳು ಸಕ್ರಿಯವಾಗಿವೆ.

ಈ ಗ್ರೂಪ್ನಲ್ಲಿ ಸದಸ್ಯರು ಪರಸ್ಪರ ಚಾಟ್ ಮಾಡಬಹುದು ಮತ್ತು ಪರಿಚಯ ಮಾಡಿಕೊಳ್ಳಬಹುದು. ಸಂಗಾತಿಯ ವಿನಿಮಯಕ್ಕೆ ಒಪ್ಪಿಗೆಯನ್ನು ಕಳುಹಿಸಿದ ನಂತರ, ಅವರು ಯಾರೊಬ್ಬರ ಮನೆ, ಹೋಂಸ್ಟೇಗಳು, ರೆಸಾರ್ಟ್‌ಗಳು ಇತ್ಯಾದಿಗಳಲ್ಲಿ ಒಟ್ಟುಗೂಡುತ್ತಾರೆ. ಹೆಚ್ಚಿನವರು ಯಾವುದೇ ಅನುಮಾನವನ್ನು ತಪ್ಪಿಸಲು ಮಕ್ಕಳೊಂದಿಗೆ ಬರುತ್ತಾರೆ. ತನ್ನ ಪತಿ ಏಕಕಾಲದಲ್ಲಿ ಅನೇಕ ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾನೆ ಎಂದು ಮಹಿಳೆ ಬಹಿರಂಗಪಡಿಸಿದ್ದಾರೆ.

ಬೇರೆ ಪುರುಷರಿಗೆ ಲೈಂಗಿಕತೆಯನ್ನು ನಿರಾಕರಿಸಿದರೆ ಅಥವಾ ಯಾರೊಂದಿಗಾದರೂ ವಿಷಯವನ್ನು ಹಂಚಿಕೊಂಡರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಆಕೆಯ ಪತಿ ಮಹಿಳೆಯನ್ನು ಬ್ಲಾಕ್ ಮೇಲ್ ಮಾಡಿರುವುದಾಗಿಯೂ ದೂರಲಾಗಿದೆ. ಹೀಗಾಗಿ ಈ ಗ್ರೂಪ್ ಗಳ ಹಿಂದೆ ದೊಡ್ಡ ಜಾಲವೇ ಇದೆ ಎಂದು ಪೊಲೀಸರು ಶಂಕಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು