ಇತ್ತೀಚಿನ ಸುದ್ದಿ
ಚಿಕ್ಕಮಗಳೂರು | ಕೊಟ್ಟಿಗೆಹಾರ: ಗಾಯಕ ಸಂದೇಶ್ ನೀರ್ ಮಾರ್ಗ ಅವರಿಗೆ ಗ್ರಾಮಸ್ಥರ, ಅಭಿಮಾನಿಗಳ ಸನ್ಮಾನ
14/09/2026, 21:15
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಗಾಯಕ ಸಂದೇಶ್ ನೀರ್ ಮಾರ್ಗ ಅವರಿಗೆ ಕೊಟ್ಟಿಗೆಹಾರದಲ್ಲಿ ಗ್ರಾಮಸ್ಥರು ಮತ್ತು ಅಭಿಮಾನಿಗಳು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಮಾರ್ಗಮಧ್ಯೆ ಕೊಟ್ಟಿಗೆಹಾರದಲ್ಲಿ ಅವರನ್ನು ಈ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸನ್ಮಾನ ಕಾರ್ಯಕ್ರಮದ ಮುಖ್ಯಾಂಶಗಳು:
ಸಂಗೀತ ಕ್ಷೇತ್ರದ ಸಾಧನೆಗೆ ಗೌರವ: ಗಾಯಕ ಸಂದೇಶ್ ನೀರ್ ಮಾರ್ಗ ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ, ಅವರ ಕಲಾ ಸೇವೆ ಮತ್ತು ಸಾಧನೆ ಇನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಈ ವೇಳೆ ಶುಭ ಹಾರೈಸಲಾಯಿತು.
ಸ್ಥಳ: ಕೊಟ್ಟಿಗೆಹಾರ, ಚಿಕ್ಕಮಗಳೂರು ಜಿಲ್ಲೆ.
ಉಪಸ್ಥಿತರಿದ್ದ ಪ್ರಮುಖರು: ಸಮಾಜ ಸೇವಕರಾದ ಸಂಜಯ್ ಕೊಟ್ಟಿಗೆಹಾರ, ಅಭಿಲಾಷ್, ಸಾಗರ್, ಗಿರೀಶ್, ವಿನಯ್, ಆದ್ಯ ಹಾಗೂ ಗ್ರಾಮಸ್ಥರು. ಇದ್ದರು.












