5:59 AM Monday31 - August 2026
ಬ್ರೇಕಿಂಗ್ ನ್ಯೂಸ್
*ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ

ಇತ್ತೀಚಿನ ಸುದ್ದಿ

ಜರ್ಮನಿಯಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದ ಕುಂಜತ್‌ಬೈಲ್‌ನ ವಿದ್ಯಾರ್ಥಿ ನೀರುಪಾಲು

05/07/2026, 21:19

ಮಂಗಳೂರು(reporterkarnataka.com): ಜರ್ಮನಿಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಮರಕಡ-ಕುಂಜತ್‌ಬೈಲ್‌ನ ವಿದ್ಯಾರ್ಥಿ ಮೊಹಮ್ಮದ್ ಅನಿಜ್‌ ಅಬೂಬಕ್ಕರ್(21) ಎಂಬಾತ ನೀರುಪಾಲಾಗಿದ್ದಾನೆ.
ಜರ್ಮನಿಯ ಹಾಲೆಯ ರಹ್ನ್ ಶಿಕ್ಷಣ ಸಂಸ್ಥೆಯಲ್ಲಿ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (BBA) ಪದವಿಯ ಮೂರನೇ ಸೆಮಿಸ್ಟರ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಗುರುವಾರ ಸ್ನೇಹಿತರೊಂದಿಗೆ ಸೇರಿ ಲೀಪ್‌ಜಿಗ್ ಪ್ರಾಂತ್ಯದ ಬಳಿ ವಿಹಾರಕ್ಕೆಂದು ಹೊರಟಿದ್ದು, ಈ ವೇಳೆ ಸಾವನ್ನಪ್ಪಿದ್ದು, ನೀರಿನಲ್ಲಿ ಮುಳುಗಿ ಈ ಘಟನೆ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

*ಏನಿದು ಘಟನೆ?:*
ಗುರುವಾರ ಬೆಳ್ಳಿಗೆ ಸ್ನೇಹಿತರೊಂದಿಗೆ ಸೇರಿ ಅನಿಜ್ ಟ್ರಕ್ಕಿಂಗ್‌ ಮಾಡಲು ಹೊರಟಿದ್ದು, ಚಾರಣದ ಬಳಿಕ ಈತ ಹಾಗೂ ಈತನ ಸ್ನೇಹಿತರು ಜೊತೆಗೂಡಿ ಲೀಪ್‌ಜಿಗ್‌ನ ರೆಡ್ ಬುಲ್ ಅರೆನಾ ಬಳಿ ಇರುವ ನೀರಿನ ಮನರಂಜನಾ ಪ್ರದೇಶಕ್ಕೆ ತೆರಳಿದ್ದು, ಈ ಘಟನೆ ನಡೆದಿದೆ. ಸ್ವಲ್ಪ ಸಮಯದ ಬಳಿಕ ಹೀಗೆ ಅನಿಜ್‌ ಕಾಣೆಯಾಗಿರುವುದು ತಿಳಿದುಬರುತ್ತಿದ್ದಂತೆ ಲ್ಯಾಂಡೌರ್ ಸೇತುವೆ ಪ್ರದೇಶದ ತುರ್ತು ಸೇವೆಗಳಿಗೆ ಮಾಹಿತಿ ನೀಡಲಾಗಿದ್ದು, ತಕ್ಷಣವೇ ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು, ಶೋಧ ಕಾರ್ಯನಡೆಸಿ, ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು