8:01 PM Saturday29 - August 2026
ಬ್ರೇಕಿಂಗ್ ನ್ಯೂಸ್
ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ

ಇತ್ತೀಚಿನ ಸುದ್ದಿ

ಪುತ್ತೂರು ಜೆರಾಕ್ಸ್ ಪ್ರಕರಣ | ನಮ್ಮ ವಿಚಾರ ಮುಂದಿಟ್ಟು ರಾಜಕೀಯ ಲಾಭ ಪಡೆಯುವುದು ಬೇಡ: ಸಂತ್ರಸ್ತ ಯುವತಿ

29/08/2026, 19:55

ಪುತ್ತೂರು(reporterkarnataka.com): ದರ್ಬೆಯ ಜೆರಾಕ್ಸ್ ಅಂಗಡಿಯಲ್ಲಿ ಹಲ್ಲೆ ಪ್ರಕರಣ ನಡೆದಿದ್ದು, ಜೆರಾಕ್ಸ್ ಅಂಗಡಿಯಲ್ಲಿ ದಾಖಲೆ ಸುಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೇವಲ 300 ರೂಪಾಯಿಗಾಗಿ ನಡೆದ ವಾಗ್ವಾದ , ಹಲ್ಲೆ ಕೋಮು ವೈಷಮ್ಯ ಕ್ಕೆ ತಿರುಗಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧಿಸಿದಂತೆ ಸಂತ್ರಸ್ಥೆ ಮುಬಾಶಿರಾ ಸ್ಫೋಟಕ ಟ್ವಿಸ್ಟ್ ನೀಡಿದ್ದಾರೆ. ಬೇಕಿದ್ರೆ ಕೇಸ್ ವಾಪಸ್ ತೆಗೆದುಕೊಳ್ಳುತ್ತೇವೆ ಗಲಭೆ ಬೇಡ. ನಮ್ಮ ವಿಚಾರ ಮುಂದಿಟ್ಟು ರಾಜಕೀಯ ಲಾಭ ಪಡೆಯುವುದು ಬೇಡ.
ಹಿಂದೂ ಮುಸ್ಲಿಂ, ಕಾಂಗ್ರೆಸ್ , ಬಿಜೆಪಿ , ಎಸ್ ಡಿ ಪಿ ಐ ಮಡುವುದು ಬೇಡ. ನಮಗಿದೆಲ್ಲ ಬೇಕಿಲ್ಲ ಇಷ್ಟು ಚಿಕ್ಕ ವಿಷಯ ಇಷ್ಟು ದೊಡ್ಡದಾಗುತ್ತೆ ಅಂತ ಗೊತ್ತಿರಲಿಲ್ಲ. ಈ ನಡುವೆ ಘಟನೆಯ ಸಂಬಂಧ ಸಂತ್ರಸ್ತೆ ಯುವತಿ ಮುಬಾಶಿರಾ ಮನವಿ ಮಾಡಿಕೊಂಡಿದ್ದಾರೆ.ಈ ಪ್ರಕರಣವನ್ನು ಇಲ್ಲಿಗೆ ಕೈಬಿಡಿ. ಗಲಾಟೆ ಬೇಡ ಎಂದು ಮುಬಾಶಿರಾ ಮನವಿ ಮಾಡಿಕೊಂಡಿದ್ದಾರೆ. ಘಟನೆ ನಡೆದಾಗ ಅಂಗಡಿಯವರೇ ನಮಗೆ ಹೊಡೆದಿದ್ದು, ನಾವು ಅಲ್ಲಿ ಏನೂ ಮಾಡಿಲ್ಲ. ನಾವು ನೇರ ಆಸ್ಪತ್ರೆಗೆ ಬಂದು ದಾಖಲಾಗಿದ್ದೇವೆ‌. ಆ ಬಳಿಕ ಅಲ್ಲೇನು ನಡೆದಿದೆ ನಮಗೆ ಗೊತ್ತಿಲ್ಲ. ಅಲ್ಲಿ ಗಲಾಟೆ ನಡೆಸಿದವರು ನಮ್ಮ ಪರಿಚಯದವರೂ ಅಲ್ಲ‌ , ನಮ್ಮ ಊರಿನವರೂ ಅಲ್ಲ. ಆದ್ದರಿಂದ ಈ ಬಗ್ಗೆ ಯಾರೂ ರಾಜಕೀಯ ಮಾಡುವುದು ಬೇಡ. ಹಿಂದೂ ಮುಸ್ಲಿಂ ಗಲಾಟೆ ಆಗಬೇಕೆಂಬ ಇಷ್ಟವೂ ಇಲ್ಲ. ನಮಗೆ ಹೊಡೆದವನು ಅರೆಸ್ಟ್ ಆಗಿದ್ದಾನೆ. ನಮ್ಮ ಆಸ್ಪತ್ರೆ ಖರ್ಚುವೆಚ್ಚ ನೀಡಿದರೆ ಸಾಕು ,ಬೇರೇನೂ ಬೇಡ ಎಂದು ಸಂತ್ರಸ್ತೆ ಯುವತಿ ಮುಬಾಶಿರಾ ಹೇಳಿಕೆ ನೀಡಿದ್ದಾರೆ. ಜೆರಾಕ್ಸ್ ಅಂಗಡಿಯಲ್ಲಿ ಲ್ಯಾಮಿನೇಷನ್ ಗಾಗಿ ಜನನ ಸರ್ಟಿಫಿಕೇಟ್ ಮುಬಾಶೀರಾ ಕುಟುಂಬ ನೀಡಿತ್ತು. ಟೆಕ್ನಿಕಲ್ ಸಮಸ್ಯೆಯಿಂದ ಸರ್ಟಿಫಿಕೇಟ್ ಸುಟ್ಟು ಹೋಗಿತ್ತು. ಈ ವೇಳೆ ಎರಡು ಕಡೆ ಮಾತಿನ ಚಕಮಕಿ ಆಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು