2:00 AM Saturday5 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

Cormorant‌ | ಇದ್ದಕ್ಕಿದಂತೆ ನೀರಿಗೆ ಧುಮುಕಿ ಮೀನಿನೊಂದಿಗೆ ಹಾರುವ ಚತುರ ಈಜುಗಾರ ಈ ನೀರು ಕಾಗೆ!

29/08/2026, 09:47

ಕಾಗೆಯಂತೆ ಕಪ್ಪು ಮೈ ಬಣ್ಣ, ಬಾತು ಕೋಳಿಯಂತೆ ಈಜಾಡ ಬಲ್ಲ ಹಕ್ಕಿ ನೀರು ಕಾಗೆ.ಮಧ್ಯಮ ಗಾತ್ರದ ಈ ಹಕ್ಕಿ ಹಾವಿನಾಕರಾದ ಉದ್ದನೇಯ ಕುತ್ತಿಗೆಯಿಂದ ಸುಲಭವಾಗಿ ಗುರುತಿಸಬಹುದು.


ನೀಲಿಕಣ್ಣು, ಚಪ್ಪಟೆ ತಲೆ, ಉದ್ದನೇಯ ಕೊಕ್ಕು,ತುದಿ ಭಾಗದಲ್ಲಿ ಚೂಪಾಗಿ ಕೊಕ್ಕೆಯಂತೆ ಬಾಗಿರುತ್ತದೆ. ಜಾಲವನ್ನು ಹೊಂದಿರುವ ಬಲವಾದ ಕಾಲುಗಳು ( ಜಾಲ ಪಾದ )ಅಗಲವಾದ ರೆಕ್ಕೆ ಈಜಲು ಹಾಗೂ ಹಾರಲು ಸಹಕಾರಿಯಾಗಿದೆ. ಸದೃಢವಾದ ಕೊಕ್ಕು ಹಾಗೂ ಚುರುಕಾದ ಕಣ್ಣುಗಳು ಮೀನನ್ನು ಬೇಟೆಯಾಡಲು ಪೂರಕವಾಗಿದೆ.
ನೀರು ಕಾಗೆಗಳು ಹೆಚ್ಚಾಗಿ ನದಿಗಳು ಹಾಗೂ ಕೆರೆಗಳ ಸುತ್ತಲೂ ಒಂಟಿಯಾಗಿ ಅಥವಾ ಗುಂಪುಗಳಲ್ಲಿ ಕಾಣಸಿಗುತ್ತದೆ. ನೀರಿನಲ್ಲಿ ಇದ್ದಕ್ಕಿದಂತೆ ಧುಮುಕಿ, ನೀರಿನಲ್ಲೇ ಮುಳುಗಿ ಬಹುದೂರ ಈಜುತ್ತಾ ಮೀನನ್ನು ಬೇಟೆಯಾಡಿ, ಮೀನಿನೊಂದಿಗೆ ಮೇಲೆ ಹಾರುತ್ತಾ ಬರುವ ಪರಿ ಸೋಜಿಗವೇ ಸರಿ. 2 ರಿಂದ 3 ನಿಮಿಷಗಳ ಕಾಲ ನೀರಿನೊಳಗೆ ಇರಬಲ್ಲ ಚತುರ ಈಜುಗಾರ ಈ ಹಕ್ಕಿ. ಆಗಾಗ್ಗೆ ಬಂಡೆಯ ಮೇಲೆ ಕೂತು ರೆಕ್ಕೆಯನ್ನು ಬಿಚ್ಚಿ ಗರಿಗಳನ್ನು ಒಣಗಿಸುವ ರೀತಿ, ತಪಸ್ಸು ಮಾಡುವತ್ತಿರುವಂತೆ ಅನಿಸುತ್ತದೆ.
ಸಂತಾನೋತ್ಪತ್ತಿ ಸಮಯದಲ್ಲಿ ನೀರಿನ ಹತ್ತಿರವಿರುವ ಎತ್ತರದ ಮರದ ಮರದ ಕೊಂಬೆಗಳಲ್ಲಿ, ಮರದ ಕಡ್ಡಿ ಗಳಿಂದ ವೃತ್ತಾಕಾರದ ಗೂಡು ಕಟ್ಟುತ್ತದೆ. 3 ರಿಂದ 5 ನೀಲಿ ಮಿಶ್ರಿತ ಹಸುರು ಬಣ್ಣದ ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ. ಇವುಗಳ ಗಂಟಲಿನಲ್ಲಿರುವ ಚೀಲದೊಳಗೆ ಬೇಟೆಯಾಡಿದ ಮೀನುಗಳನ್ನು ಶೇಖರಿಸಿ ಮರಿಗಳಿಗೆ ತಂದು ತಿನ್ನಿಸುತ್ತದೆ. ಮರಿಗಳಿಗೆ ಮೊದಲು ಈಜಾಡುವುದನ್ನು ಕಲಿಸಿ ನಂತರ ಹಾರಲು ಕಲಿಸುತ್ತದೆ. ಶುದ್ಧವಾದ ಹರಿಯುವ ನೀರು ಹಾಗೂ ಮತ್ಸ್ಯ ಸಂಪತ್ತು ಇವುಗಳ ಉಳಿವಿಗೆ ಅತ್ಯಗತ್ಯ.

ಇತ್ತೀಚಿನ ಸುದ್ದಿ

ಜಾಹೀರಾತು