7:00 PM Monday19 - October 2026
ಬ್ರೇಕಿಂಗ್ ನ್ಯೂಸ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣ | ವಿಜಯದಶಮಿಯೊಳಗೆ ಆರೋಪಿಗಳ ಬಂಧಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ:… ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ… ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ…

ಇತ್ತೀಚಿನ ಸುದ್ದಿ

*3 ಕೊಲೆ, 37 ವರ್ಷ ಶಿಕ್ಷೆ: ದೇಶದಲ್ಲೇ ದೀರ್ಘಾವಧಿ ಜೈಲುವಾಸ ಅನುಭವಿಸಿ ಹೊರಬಂದ ಕಲಬುರಗಿಯ ಸಾಯ್ಬಣ್ಣ..!*

06/07/2026, 12:37

ಕಲಬುರಗಿ(reporterkarnataka.com): ದೇಶದಲ್ಲೇ ಅತ್ಯಂತ ದೀರ್ಘಾವಧಿಯ ಜೈಲು ಶಿಕ್ಷೆ ಅನುಭವಿಸಿದ ಇತಿಹಾಸ ಹೊಂದಿರುವ ಕಲಬುರಗಿ ಜಿಲ್ಲೆಯ ಜೇವರ್ಗಿಯ ಸಾಯಿಬಣ್ಣ ಲಿಂಗಪ್ಪ ನಟೇಕರ್ (72) ಇತ್ತೀಚೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಸನ್ನಡತೆಯ ಆಧಾರದ ಮೇಲೆ ಮುಕ್ತಿ ಹೊಂದಿದ 24 ಜೀವಾವಧಿ ಕೈದಿಗಳಲ್ಲಿ ಈತ ಕೂಡ ಒಬ್ಬನಾಗಿದ್ದು, ಬರೋಬ್ಬರಿ 37 ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಹೊರಬಂದಿದ್ದಾನೆ.
ಸಾಯಿಬಣ್ಣನ ಇತಿಹಾಸ 1988ರಲ್ಲಿ ಆರಂಭವಾಗಿತ್ತು. ತನ್ನ ಮೊದಲ ಪತ್ನಿ ಮಲ್ಕವ್ವ ಬೇರೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಸಂಶಯದ ಮೇಲೆ ಆಕೆಯನ್ನು ಕೊಲೆ ಮಾಡಿದ್ದ ಈತನಿಗೆ 1993ರಲ್ಲಿ ಶಿಕ್ಷೆಯಾಗಿತ್ತು. ಆದರೆ, ಜೈಲಿನಲ್ಲಿದ್ದಾಗ ಪೆರೋಲ್ (ತಾತ್ಕಾಲಿಕ ಬಿಡುಗಡೆ) ಮೇಲೆ ಹೊರಬಂದ ಈತ ನಾಗಮ್ಮ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದನು. 1994ರಲ್ಲಿ ಎರಡನೇ ಪತ್ನಿಯೂ ಮತ್ತೊಬ್ಬನ ಜೊತೆ ಇರುವುದನ್ನು ಕಂಡು ಆಕ್ರೋಶಗೊಂಡು ಆಕೆಯನ್ನೂ ಹಾಗೂ ತಡೆಯಲು ಬಂದ ತನ್ನದೇ ಮಗು ವಿಜಯಲಕ್ಷ್ಮಿಯನ್ನೂ ಕೊಂದಿದ್ದನು. ಮಗಳು ಮತ್ತು ಹೆಂಡತಿಯ ಕ್ರೂರ ಕೊಲೆ ಪ್ರಕರಣಕ್ಕೆ ನ್ಯಾಯಾಲಯ ಈತನಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಈತ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ರಾಷ್ಟ್ರಪತಿಗಳ ಬಳಿ 7 ವರ್ಷಗಳಿಗೂ ಹೆಚ್ಚು ಕಾಲ ಬಾಕಿ ಇತ್ತು. ಸುದೀರ್ಘ ವಿಳಂಬ ಮತ್ತು ಒಂದು ದಶಕಕ್ಕೂ ಹೆಚ್ಚು ಕಾಲ ಕಾನೂನುಬಾಹಿರವಾಗಿ ಏಕಾಂತ ಕಾರಾಗೃಹ ವಾಸದಲ್ಲಿದ್ದ ಅಂಶವನ್ನು ಪರಿಗಣಿಸಿ, ಕರ್ನಾಟಕ ಹೈಕೋರ್ಟ್ ಈತನ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಡಿಸಿತ್ತು.
ಪ್ರಸ್ತುತ 37 ವರ್ಷಗಳ ಸುದೀರ್ಘ ಸೆರೆವಾಸ ಮುಗಿಸಿ ವೃದ್ಧಾಪ್ಯದಲ್ಲಿ ಹೊರಬಂದಿರುವ ಸಾಯಿಬಣ್ಣನಿಗೆ ತಾನು ಮಾಡಿದ ಮೂರು ಕೊಲೆಗಳ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲದಿರುವುದು ಸಾರ್ವಜನಿಕರಲ್ಲಿ ತೀವ್ರ ಆಶ್ಚರ್ಯ ಮೂಡಿಸಿದೆ. ಜೈಲಿನ ನಿಯಮಗಳ ಪ್ರಕಾರ ಸನ್ನಡತೆ ತೋರಿದರೂ, ಮಾನಸಿಕವಾಗಿ ಈತನ ಕ್ರೂರ ಮತ್ತು ಪಶ್ಚಾತ್ತಾಪವಿಲ್ಲದ ವಿಚಿತ್ರ ಮನಸ್ಥಿತಿ ಹಾಗೇ ಉಳಿದಿರುವುದು ಈ ಇಡೀ ಕಥೆಯ ಕರಾಳ ಮುಖವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು