ಇತ್ತೀಚಿನ ಸುದ್ದಿ
ಜರ್ಮನಿಯಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದ ಕುಂಜತ್‌ಬೈಲ್‌ನ ವಿದ್ಯಾರ್ಥಿ ನೀರುಪಾಲು
05/07/2026, 21:19
ಮಂಗಳೂರು(reporterkarnataka.com): ಜರ್ಮನಿಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಮರಕಡ-ಕುಂಜತ್‌ಬೈಲ್‌ನ ವಿದ್ಯಾರ್ಥಿ ಮೊಹಮ್ಮದ್ ಅನಿಜ್ ಅಬೂಬಕ್ಕರ್(21) ಎಂಬಾತ ನೀರುಪಾಲಾಗಿದ್ದಾನೆ.
ಜರ್ಮನಿಯ ಹಾಲೆಯ ರಹ್ನ್ ಶಿಕ್ಷಣ ಸಂಸ್ಥೆಯಲ್ಲಿ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (BBA) ಪದವಿಯ ಮೂರನೇ ಸೆಮಿಸ್ಟರ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಗುರುವಾರ ಸ್ನೇಹಿತರೊಂದಿಗೆ ಸೇರಿ ಲೀಪ್‌ಜಿಗ್ ಪ್ರಾಂತ್ಯದ ಬಳಿ ವಿಹಾರಕ್ಕೆಂದು ಹೊರಟಿದ್ದು, ಈ ವೇಳೆ ಸಾವನ್ನಪ್ಪಿದ್ದು, ನೀರಿನಲ್ಲಿ ಮುಳುಗಿ ಈ ಘಟನೆ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
*ಏನಿದು ಘಟನೆ?:*
ಗುರುವಾರ ಬೆಳ್ಳಿಗೆ ಸ್ನೇಹಿತರೊಂದಿಗೆ ಸೇರಿ ಅನಿಜ್ ಟ್ರಕ್ಕಿಂಗ್ ಮಾಡಲು ಹೊರಟಿದ್ದು, ಚಾರಣದ ಬಳಿಕ ಈತ ಹಾಗೂ ಈತನ ಸ್ನೇಹಿತರು ಜೊತೆಗೂಡಿ ಲೀಪ್‌ಜಿಗ್‌ನ ರೆಡ್ ಬುಲ್ ಅರೆನಾ ಬಳಿ ಇರುವ ನೀರಿನ ಮನರಂಜನಾ ಪ್ರದೇಶಕ್ಕೆ ತೆರಳಿದ್ದು, ಈ ಘಟನೆ ನಡೆದಿದೆ. ಸ್ವಲ್ಪ ಸಮಯದ ಬಳಿಕ ಹೀಗೆ ಅನಿಜ್ ಕಾಣೆಯಾಗಿರುವುದು ತಿಳಿದುಬರುತ್ತಿದ್ದಂತೆ ಲ್ಯಾಂಡೌರ್ ಸೇತುವೆ ಪ್ರದೇಶದ ತುರ್ತು ಸೇವೆಗಳಿಗೆ ಮಾಹಿತಿ ನೀಡಲಾಗಿದ್ದು, ತಕ್ಷಣವೇ ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು, ಶೋಧ ಕಾರ್ಯನಡೆಸಿ, ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ.












