3:11 AM Saturday15 - August 2026
ಬ್ರೇಕಿಂಗ್ ನ್ಯೂಸ್
ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ

ಇತ್ತೀಚಿನ ಸುದ್ದಿ

ಗೋಧಿ ಖರೀದಿ ಶೇ.24ರಷ್ಟು ಹೆಚ್ಚಳ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

01/05/2025, 20:08

* ದೇಶದಲ್ಲಿ ಈವರೆಗೆ 256 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹ
* 21.03 ಲಕ್ಷ ರೈತರಿಗೆ ₹ 62,155 ಕೋಟಿ ಬೆಂಬಲ ಬೆಲೆ

ನವದೆಹಲಿ(reporterkarnataka.com): ಕೇಂದ್ರ ಸರ್ಕಾರ ಪ್ರಸ್ತುತ 256 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ಗೋಧಿ ಸಂಗ್ರಹಿಸಿದ್ದು, ಪ್ರಸಕ್ತ ವರ್ಷ, ಗೋಧಿ ಖರೀದಿಯಲ್ಲಿ ಶೇ.24.78ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಗೋಧಿ ಬೆಳೆಯುವ ದೇಶದ 5 ಪ್ರಮುಖ ರಾಜ್ಯಗಳಾದ ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಿಂದ ಗೋಧಿ ಹರಿವು ಹೆಚ್ಚಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಗೋಧಿ ಸಂಗ್ರಹಿಸಲಾಗಿದೆ ಎಂದಿದ್ದಾರೆ.
ವಿವಿಧ ರಾಜ್ಯಗಳಿಂದ ಈ ಬಾರಿ ಏಪ್ರಿಲ್ 30ರವರೆಗೆ ಒಟ್ಟಾರೆ 256.31 LMT ಗೋಧಿಯನ್ನು ಸಂಗ್ರಹಿಸಲಾಗಿದೆ. ಕಳೆದ ವರ್ಷ ಈ ಅವಧಿಗೆ 205.41 LMT ಸಂಗ್ರಹಿಸಿತ್ತು. ಪ್ರಸ್ತುತ ಗೋಧಿ ಸಂಗ್ರಹ ಕಳೆದ ವರ್ಷಕ್ಕಿಂತ ಶೇ.24.78ರಷ್ಟು ಹೆಚ್ಚಳವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

*312 LMT ಗೋಧಿ ಖರೀದಿ ಗುರಿ:*
ಪ್ರಸಕ್ತ ವರ್ಷ ಸುಮಾರು 312 LMT ಗೋಧಿ ಖರೀದಿ ಗುರಿ ಹೊಂದಿದ್ದು, ಈವರೆಗೆ 256.31 LMT ಗೋಧಿ ಖರೀದಿಸಲಾಗಿದೆ. ದೇಶದಲ್ಲಿ ಹೆಚ್ಚಿನ ಗೋಧಿ ಹರಿವಿರುವ ರಾಜ್ಯಗಳಲ್ಲಿ ಬೆಂಬಲ ಬೆಲೆಯಲ್ಲಿ ಗೋಧಿ ಖರೀದಿ ಸುಗಮವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಗೋಧಿ ಸಂಗ್ರಹಕ್ಕೆ ಪ್ರಮುಖ ಕೊಡುಗೆ ನೀಡಿವೆ.

*ಎಲ್ಲೆಲ್ಲಿ ಎಷ್ಟೆಷ್ಟು ಖರೀದಿ:*
ಪಂಜಾಬ್‌ನಿಂದ ಅತಿ ಹೆಚ್ಚು 103.89 ಲಕ್ಷ ಮೆಟ್ರಿಕ್‌ ಟನ್‌ ಗೋಧಿ ಖರೀದಿಸಿದ್ದರೆ, ಹರಿಯಾಣದಿಂದ 65.67 ಎಲ್‌ಎಂಟಿ, ಮಧ್ಯಪ್ರದೇಶದಿಂದ 67.57 ಎಲ್‌ಎಂಟಿ, ರಾಜಸ್ಥಾನದಿಂದ 11.44 ಎಲ್‌ಎಂಟಿ ಹಾಗೂ ಉತ್ತರ ಪ್ರದೇಶದಿಂದ 7.55 ಎಲ್‌ಎಂಟಿ ಗೋಧಿಯನ್ನು ಸದ್ಯ ಖರೀದಿಸಲಾಗಿದೆ. 2025-26ನೇ ಸಾಲಿನ ಗೋಧಿ ಖರೀದಿ ಅವಧಿ ಇನ್ನೂ ಸಾಕಷ್ಟಿದ್ದು, ಕೇಂದ್ರೀಯ ಗೋಧಿ ಸಂಗ್ರಹಣಾ ನಿಧಿಯಿಂದ ಗಣನೀಯ ಪ್ರಮಾಣದಲ್ಲಿ ಗೋಧಿ ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

*₹ 62,155 ಕೋಟಿ ಬೆಂಬಲ ಬೆಲೆ:*
2025-26ರ ಆರ್‌ಎಂಎಸ್ ಅವಧಿಯಲ್ಲಿ ದೇಶದ 21.03 ಲಕ್ಷ ಗೋಧಿ ಬೆಳೆಗಾರರು ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಾರೆ. ಈ ರೈತರಿಗೆ ₹62155.96 ಕೋಟಿ ಕನಿಷ್ಠ ಬೆಂಬಲ ಬೆಲೆ ನೀಡಲಾಗುತ್ತಿದೆ. ರೈತರಿಂದ ಗೋಧಿ ಖರೀದಿಸಿದ 24ರಿಂದ 48 ಗಂಟೆಗಳಲ್ಲಿ MSP ಪಾವತಿ ಮಾಡಲಾಗುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.
ಈ ವರ್ಷ ದೇಶಾದ್ಯಂತ ಹೆಚ್ಚಿನ ಗೋಧಿ ಸಂಗ್ರಹಣೆಗೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕ್ರಮ ಕೈಗೊಂಡಿದ್ದು, ಗೋಧಿ ದಾಸ್ತಾನು ಪೋರ್ಟಲ್ ಮೂಲಕ ದಾಸ್ತಾನು ಮಿತಿ ಕಡ್ಡಾಯ, ಸಕಾಲಿಕ ಅನುಮೋದನೆ, FAQ ಮಾನದಂಡಗಳು ಮತ್ತು ಸಕಾಲಿಕವಾಗಿ ಅಧಿಕಾರಿಗಳ ಕ್ಷೇತ್ರ ಭೇಟಿಗೆ ಅವಕಾಶ ಕಲ್ಪಿಸಿದ್ದರಿಂದ ಹೆಚ್ಚಿನ ಪ್ರಮಾಣದ ಗೋಧಿ ಸಂಗ್ರಹ ಸಾಧ್ಯವಾಗಿದೆ ಹಾಗೂ ರೈತರಿಗೂ ಅನುಕೂಲವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು