11:09 PM Wednesday30 - September 2026
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಸಿದ್ದರಾಮಯ್ಯ!: ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಕೊಟ್ಟ ಮಾಜಿ ಸಿಎಂ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ…

ಇತ್ತೀಚಿನ ಸುದ್ದಿ

ಎಂಆರ್ ಪಿಎಲ್ ಸ್ಫೋಟ ಕಂಪೆನಿಯ ನಿರ್ಲಕ್ಷ್ಯ, ದುರಹಂಕಾರ, ಜನಪ್ರತಿನಿಧಿಗಳ ಬೇಜವಾಬ್ದಾರಿತನದ ಪ್ರತಿಫಲ: ಸಿಪಿಎಂ ಆರೋಪ

30/09/2026, 23:00

ಮಂಗಳೂರು(reporterkarnataka.com): ಎಂಆರ್ ಪಿಎಲ್ ನ ಮೂರನೆ ಹಂತದ ಘಟಕದಲ್ಲಿ ನಡೆದಿರುವ ಸ್ಫೋಟ ಹಾಗು ಹಾನಿಯು ಕಂಪೆನಿ ಹಾಗು ಜಿಲ್ಲಾಡಳಿತ ನೀಡುತ್ತಿರುವ ವಿವರಣೆಗಳಿಗಿಂತ ಹಲವು ಪಟ್ಟು ಗಂಭೀರವಾಗಿದೆ. ಕಂಪೆನಿಯು ಸ್ಪೋಟದ ತೀವ್ರತೆಯನ್ನು ಎಂದಿನಂತೆ ಲಘುಗೊಳಿಸಲು ಯತ್ನಿಸುತ್ತಿದೆ. ಈ ಹಿಂದೆಯು ಎಮ್ಆರ್ ಪಿಎಲ್ ಒಳಗಡೆ ಹಲವು ಅವಘಡಗಳು ನಡೆದಿವೆ, ಪ್ರಾಣ ಹಾ‌ನಿ ಸಂಭವಿಸಿದೆ. ಪರಿಸರ ನಿಯಮ, ಸುರಕ್ಷತಾ ನಿಯಮಗಳನ್ನು ಸತತವಾಗಿ ಉಲ್ಲಂಘಿಸಲಾಗಿದೆ. ಕಂಪೆನಿಯ ನಿರ್ಲಕ್ಷ್ಯ, ದುರಹಂಕಾರದ ನಡೆ, ಕಂಪೆನಿಯ ನಿಯಮ ಉಲ್ಲಂಘನೆ ಕುರಿತಾಗಿ ಜಿಲ್ಲಾಡಳಿತದ ಮೃದು ಧೋರಣೆ, ಜನಪ್ರತಿನಿಧಿಗಳ ಬೇಜವಾಬ್ದಾರಿ ನಡೆಗಳು ಇಂದಿನ ಭೀಕರ ಸ್ಪೋಟಕ್ಕೆ ಕಾರಣ ಎಂದು ಸಿಪಿಎಂ ದ.ಕ. ಜಿಲ್ಲಾ ಸಮಿತಿ ಆರೋಪಿಸಿದೆ.
ಇಂದು ಸ್ಪೋಟ ಸಂಭವಿಸಿರುವ ಮೂರನೆ ಹಂತದ ಕೋಕ್ ಸಲ್ಪರ್ ಘಟಕವಂತು ನಿಯಮಗಳ ಉಲ್ಲಂಘನೆಗೆ ಕುಖ್ಯಾತವಾಗಿದೆ. ಬಹುಷ, ಕಡ್ಡಾಯ ಹಸಿರು ವಲಯ ಇಲ್ಲದೆ ಕಾರ್ಯಾಚರಿಸುತ್ತಿರುವ ದೇಶದ ಏಕೈಕ ಬೃಹತ್ ಕೈಗಾರಿಕಾ ಘಟಕ ಇದಾಗಿದೆ. ಈ ಘಟಕ ಕಾರ್ಯಾಚರಣೆ ಆರಂಭಿಸಿದ 2014 ರಿಂದಲೂ ಸುತ್ತಲಿನ ಗ್ರಾಮಸ್ಥರ ಜೀವನದೊಂದಿಗೆ ಚೆಲ್ಲಾಟವಾಡುತ್ತಲೆ ಬಂದಿದೆ. ಜೋಕಟ್ಟೆ, ಕಳವಾರು ಗ್ರಾಮಗಳಂತು ಈ ಘಟಕದ ಮಾಲಿನ್ಯದಿಂದ ನರಕ ಸದೃಶ್ಯವಾಗಿದೆ. ಮಾರಕ ರೋಗಗಳ ಗೂಡಾಗಿದೆ. ಈ ಕುರಿತು 2016ರಲ್ಲಿ ಗ್ರಾಮಸ್ಥರ ಹೋರಾಟದ ಫಲವಾಗಿ ರಾಜ್ಯ ಸರಕಾರ ಹೊರಡಿಸಿದ ಆರು ಅಂಶಗಳ ಆದೇಶವನ್ನು ಕಂಪೆನಿ ಜಾರಿಗೊಳಿಸದೆ ಸತಾಯಿಸುತ್ತಿದೆ. ಜಿಲ್ಲಾಡಳಿತವು ಸಂತ್ರಸ್ತ ಗ್ರಾಮಸ್ಥರ ಬದಲಿಗೆ ಕಂಪೆನಿಯ ಪರವಾಗಿ ಮೃದುಧೋರಣೆ ತಾಳುತ್ತಾ ಬಂದಿದೆ. ಕಂಪೆನಿಯ ಕುರಿತಾದ ದೂರುಗಳನ್ನು ನಿರ್ಲಕ್ಷ್ಯವಹಿಸುತ್ತಾ ಬಂದಿದೆ. ಇದೆಲ್ಲದರ ಒಟ್ಟು ಪರಿಣಾಮ ಇಂದಿನ ಸ್ಪೋಟದ ಮೂಲಕ ಹೊರಬಂದಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಆಪಾದಿಸಿದೆ. ಈಗಿನ ತೀವ್ರತರದ ಸ್ಪೋಟದ ಕುರಿತು ಪಾರದರ್ಶಕ ತನಿಖೆ ನಡೆಸುವಂತೆ, ಸಾರ್ವಜನಿಕರ ಮನೆ, ಕಟ್ಟಡಗಳಿಗೆ ಆಗಿರುವ ಹಾನಿಗೆ ಕಂಪೆನಿಯಿಂದ ಸೂಕ್ತ ಪರಿಹಾರ ಒದಗಿಸುವಂತೆ ಸಿಪಿಎಂ ಆಗ್ರಹಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು