12:50 PM Friday2 - October 2026
ಬ್ರೇಕಿಂಗ್ ನ್ಯೂಸ್
ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ…

ಇತ್ತೀಚಿನ ಸುದ್ದಿ

Mangaluru | ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಫ್ಲೇವಿ ಜೆಸಿಂತಾ ಮಿರಾಂದಾಗೆ ಸನ್ಮಾನ

02/10/2026, 12:49

ವರದಿ/ಚಿತ್ರ ಅನುಷ್ ಪಂಡಿತ್ ಮಂಗಳೂರು

ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ, ಮಲ್ಲೂರು ಬದ್ರಿಯಾ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಫ್ಲೇವಿ ಜೆಸಿಂತಾ ಮಿರಾಂದಾ ಅವರಿಗೆ ಮಲ್ಲೂರು ಗ್ರಾಮ ಬದ್ರಿಯಾ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.




ಸನ್ಮಾನವನ್ನು ಸ್ವೀಕರಿಸಿದ ಶಿಕ್ಷಕಿ ಫ್ಲೇವಿ ಜೆಸಿಂತಾ ಮಿರಾಂದಾ ಮಾತನಾಡಿ ಇಲಾಖೆ ನಮಗೆ ಅನೇಕ ಅವಕಾಶಗಳನ್ನು ನೀಡುತ್ತದೆ. ಪಾಲಿಗೆ ಬಂದ ಅವಕಾಶಗಳನ್ನು ಕರ್ತವ್ಯ ನಿಷ್ಠೆ ಮತ್ತು ಶ್ರದ್ಧಾ ಭಕ್ತಿಯಿಂದ ಬಳಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಇದಕ್ಕೆ ನಾನೇ ಒಂದು ನಿದರ್ಶನ. ದೇವರು ನಮಗೆ ವರವನ್ನಾಲಿ ಶಾಪವನ್ನಾಗಲಿ.
ನೀಡುವುದಿಲ್ಲ.ಆದರೆ ಅವರು ನಮಗೆ ನಮ್ಮ ಜೀವನ ಪಯಣದಲ್ಲಿ ಅನೇಲಕಅವಕಾಶಗಳನ್ನು ಕೊಡುತ್ತಾರೆ.ಬಂದ ಅವಕಾಶಗಳನ್ನು ಅಂಜದೆ ಹೆದರದೆ ಅರ್ಥೈಸಿಕೊಂಡು ದೇವರ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ಮುಂದುವರಿಯಬೇಕು. ಸಾಧನೆಯ ಹಾದಿಯಲ್ಲಿ ಕಲ್ಲು ಮುಳ್ಳುಗಳು ಕಷ್ಟ ನೋ ವುಗಳು ಸೋಲು ದುಮ್ಮಾನಗಳು ಸಹಜ.
ಹಾಗಂತ ಊಟದಲ್ಲಿರುವ ಕಲ್ಲುಗಳನ್ನು ಹೆಕ್ಕಬ ಕೆ ಹೊ ರತು
ಊಟವನ್ನೇ ಬಿಸಾಡಬಾರದು.ಏಕೆಂದರೆ ಜೀವನದಲ್ಲಿ ಆಸೆಯನ್ನು ಕಳೆದುಕೊಂಡರೆ ಬದುಕಬಹುದು.ಆದರೆ ಆಸಕ್ತಿಯನ್ನು
ಕಳೆದುಕೊಂಡರೆ ಬದುಕನ್ನೇ ಕಳೆದುಕೊಂಡತ್ತಾಗುತ್ತದೆ.
ಪಾಲಿಗೆ ಬಂದದ್ದು ಪಂಚಾಮೃತ ಎಂಬ ಮಾತಿನಂತೆ ತಮಗೆ ಒದಗಿ ಬಂದ ಅವಕಾಶಗಳನ್ನು ಅತ್ಯಂತ ಆಸಕ್ತಿಯಿಂದ ಬಳಸಿಕೊಳ್ಳಿ. ಧೈರ್ಯ ದಿಂದ ಮುನ್ನುಗ್ಗಿರಿ. ದೇವರ ಮೇಲೆ ನಂಬಿಕೆ ಇಟ್ಟು ಗುರಿಯನ್ನು ಸಾಧಿಸಲು ಶ್ರಮಿಸಿರಿ.
ಖಂಡಿತವಾಗಲೂ ಯಶಸ್ಸು ನಿಮ್ಮದಾಗುವುದು.ನನಗೆ ಇಂದು ಗೌರವಿಸಿ ಸನ್ಮಾನಿಸಿದ ಸರ್ವರಿಗೂ ನಾನು ಚಿರಋಣಿ. ನಿಮ್ಮ ಪ್ರೀತಿಪೂರ್ವಕ ಗೌರವಕ್ಕೆ ನನ್ನ ಮನಸ್ಸಿನಲ್ಲಿ ಮೂಡುವ ಭಾವನೆ ಒಂದೇ ಅಪಾರ ಕೃತಜ್ಞತೆ.
ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಅವರು ಹೇಳಿದರು.
ಸಭೆಯಲ್ಲಿ ಶಾಲಾ ಗೌರವಾಧ್ಯಕ್ಷ ಎಂ.ಕೆ.ಯೂಸೂಫ್ ಅವರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾದ ಶೀಲಾವತಿ,ನಿಕಟಪೂರ್ವ ಮುಖ್ಯ ಗುರುಗಳು ಹಾಗೂ ಸಹೋದ್ಯೋಗಿ ಶಿಕ್ಷಕ ಬಂದುಗಳು. ಎಸ್ ಡಿಎಂಸಿ ಅಧ್ಯಕ್ಷೆ ಮೈನಾಜ್ ಮತ್ತು ಸರ್ವ ಸದಸ್ಯರು ನಿಕಟ ಪೂರ್ವ ಎಸ್ ಡಿಎಂ ಸಿ ಅಧ್ಯಕ್ಷರುಗಳು, ಮೌಲಾನ
ಆಂಗ್ಲಮಾಧ್ಯಮ ಮಾದರಿ ಶಾಲಾ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು. ವಿದ್ಯಾ ರ್ಥಿ ಬಳಗ, ಬದ್ರಿಯಾ ನಗರ ಶಾಲಾ ಮುಖ್ಯ ಗುರುಗಳು ಅತಿಥಿ ಶಿಕ್ಷಕರು ವಿದ್ಯಾ ರ್ಥಿ ಬಳಗ ಮತ್ತು ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು