ಇತ್ತೀಚಿನ ಸುದ್ದಿ
Mangaluru | ಅಕ್ಟೋಬರ್ 2: ಅಂಜೆಲೋರ್ ಚರ್ಚ್ ವಾರ್ಷಿಕ ಹಬ್ಬ
01/10/2026, 19:43
ಮಂಗಳೂರು(reporterkarnataka.com): ನಗರದ ನಾಗುರಿಯ ಆಂಜೆಲೋರ್ ನ ಗಾರ್ಡಿಯನ್ ಏಂಜೆಲ್ ಚರ್ಚ್ ನ ವಾರ್ಷಿಕ ಹಬ್ಬ ಅಕ್ಟೋಬರ್ 2ರಂದು ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ನಡೆಯುವ ಹಬ್ಬದ ಸಂಭ್ರಮದ ಬಲಿ ಪೂಜೆಯ ನೇತೃತ್ವವನ್ನು ಮಂಗಳೂರು ಧರ್ಮ ಪ್ರಾಂತ್ಯದ ಸಿಟಿ ವಲಯದ ಪ್ರಧಾನ ಗುರು ಹಾಗೂ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ವಹಿಸಿ ಸಂದೇಶ ನೀಡಲಿದ್ದಾರೆ. ಆಂಜೆಲೋರ್ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಫ್ರೆಡ್ರಿಕ್ ಮೊಂತೇರೊ ಮತ್ತು ಸಹಾಯಕ ಗುರು ವಂದನೀಯ ಫಾ. ಅವಿಲ್ ಸಾಂತ್ ಮಯೋರ್ ಹಾಗೂ ಇತರ ಗುರುಗಳು ಭಾಗವಹಿಸಲಿದ್ದಾರೆ.












