3:46 PM Sunday4 - October 2026
ಬ್ರೇಕಿಂಗ್ ನ್ಯೂಸ್
ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ…

ಇತ್ತೀಚಿನ ಸುದ್ದಿ

ರಷ್ಯಾದಿಂದ ಮಂಗಳೂರಿಗೆ ಕಚ್ಚಾತೈಲ ತಂದ ಹಡಗು: ಅನ್‌ಲೋಡಿಂಗ್‌ ಆರಂಭ; ಎಂಆರ್‌ಪಿಎಲ್‌ಗೆ ರವಾನೆ ಶುರು

23/03/2026, 11:58

ಮಂಗಳೂರು(reporterkarnataka.com): ರಷ್ಯಾದ ಪ್ರಿಮೋರ್ಸ್ಕ್ ಎಂಬಲ್ಲಿಂದ “ಉರಾಲ್‌’ ಕಚ್ಚಾತೈಲ ಹೇರಿಕೊಂಡು ಬಂದ “ಅಕ್ವಾ ಟೈಟಾನ್‌’ ಈಗಾಗಲೇ ಮಂಗಳೂರು ಬಂದರಿನ ಹೊರ ವಲಯದಲ್ಲಿ ಸುಮಾರು 12 ನಾಟಿಕಲ್‌ ಮೈಲು ದೂರದ ತೇಲುವ ಜಟ್ಟಿಯಲ್ಲಿ ಲಂಗರು ಹಾಕಿದೆ. ಭಾನುವಾರ ಬೆಳಗ್ಗೆ 7 ಗಂಟೆಯಿಂದ ಕಚ್ಚಾ ತೈಲ ಅನ್‌ ಲೋಡಿಂಗ್‌ ಪ್ರಕ್ರಿಯೆ ಆರಂಭವಾಗಿದೆ. ಅಲ್ಲಿಂದ ಎಂಆರ್‌ಪಿಎಲ್‌ಗೆ ಈ ತೈಲ ರವಾನೆಯಾಗಿ ಸಂಸ್ಕರಣೆಗೊಳ್ಳಲಿದೆ. ಒಂದೆರಡು ದಿನದಲ್ಲಿ ಅನ್‌ ಲೋಡಿಂಗ್‌ ಪೂರ್ಣವಾಗಿ ಬಳಿಕ ಸುಮಾರು ಒಂದು ವಾರದ ಸಂಸ್ಕರಣೆ ಪ್ರಕ್ರಿಯೆ ಎಂಆರ್‌ಪಿಎಲ್‌ನಲ್ಲಿ ನಡೆಯಲಿದೆ. ಸಂಸ್ಕರಣೆ ಆದ ಬಳಿಕ ಪೆಟ್ರೋಲ್‌, ಡೀಸೆಲ್‌ ಉತ್ಪಾದನೆ ಆಗಲಿದೆ. ಎಚ್‌ಪಿಸಿಎಲ್‌ ಸಹಿತ ವಿವಿಧ ಕಂಪೆನಿಗಳು ಇದರ ವಿತರಣೆ ಅವಕಾಶ ಪಡೆಯುವ ಸಾಧ್ಯತೆ ಇದೆ. ರಾಜ್ಯಕ್ಕೆ ಇದು ಪೂರೈಕೆಯಾಗುವ ನಿರೀಕ್ಷೆ ಇದೆ.
ಚೀನದತ್ತ ಹೊರಟಿದ್ದ ಒಟ್ಟು ಏಳು ಕಚ್ಚಾತೈಲ ಹೊತ್ತ ಹಡಗುಗಳು ಭಾರತದತ್ತ ಹಾದಿ ಬದಲಾಯಿಸಿದ್ದು, ಅಕ್ವಾ ಟೈಟಾನ್‌ ಇವುಗಳಲ್ಲಿ ಒಂದು. ಇನ್ನುಳಿದ ಹಡಗುಗಳು ಮುಂದಿನ ದಿನಗಳಲ್ಲಿ ಬರಲಿವೆ ಎನ್ನಲಾಗಿದೆ. ಇವೆಲ್ಲವೂ ರಷ್ಯ ಸರಕಾರದ ನೇರ ನಿಯಂತ್ರಣದಲ್ಲಿರುವ ಹಡಗುಗಳಾ ಗಿದ್ದು, ರಷ್ಯಾದಿಂದ ಕಚ್ಚಾತೈಲ ಆಮದಿಗೆ ನಿರ್ಬಂಧ ತೆರವಾದ ತತ್‌ಕ್ಷಣ ಭಾರತದತ್ತ ತಿರುಗಿರುವುದು ಮಹತ್ವದ ಬೆಳವಣಿಗೆಯಾಗಿದೆ.

*ಸೌದಿಯಿಂದ ಮತ್ತೊಂದು ಹಡಗು?*
ಎಚ್‌ಪಿಸಿಎಲ್‌ಗೆ ಸಂಬಂಧಿಸಿದ ಎಲ್‌ಪಿಜಿ ಹೊತ್ತ ಹಡಗು ಮಾ.25ರ ವೇಳೆಗೆ ಸೌದಿಯಿಂದ ಮಂಗಳೂರಿಗೆ ಆಗಮಿಸುವ ಬಗ್ಗೆ ಮಾಹಿತಿ ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ನವಮಂಗಳೂರು ಬಂದರಿಗೆ ಲಭ್ಯವಾಗಿಲ್ಲ. ಒಂದು ವೇಳೆ ಈ ಹಡಗು ಮಂಗಳೂರಿಗೆ ಆಗಮಿಸಿದರೆ ಎಲ್‌ಪಿಎಜಿ ಆತಂಕ ಕೊಂಚ ಮಟ್ಟಿಗೆ ನಿವಾರಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ಸುದ್ದಿ

ಜಾಹೀರಾತು